ಓಮನ್ ನಲ್ಲಿ ಕಾರವಾರದ ವ್ಯಕ್ತಿ ಸಾವು

IMG-20220809-WA0032.jpg
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಓಮನ್ ದೇಶದಲ್ಲಿ ನಡೆದ ಕಾರು ಅಪಘಾತದಲ್ಲಿ ಕಾರವಾರ ಮೂಲದ ವ್ಯಕ್ತಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಕಾರವಾರ ನಂದನಗದ್ದಾ ತೇಲಂಗ ರಸ್ತೆ ನಳಪಾಭಾಗದ ಬೆನಡಿಕ್ಟ್ ಫ್ರಾಂಕಿ ಫರ್ನಾಂಡಿಸ್(36)ಮೃತರು.
ಓಮನ್‌ದಲ್ಲಿ ಅವರು ಕಾರು ಚಾಲಕರಾಗಿದ್ದರು. ಮಂಗಳವಾರ ಬೆಳಗ್ಗೆ ಕರ್ತವ್ಯದಲ್ಲಿರುವ ವೇಳೆ 9.30 ರ ಸುಮಾರಿಗೆ ಕಾರು ಪಲ್ಟಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಳೆದ ಹಲ ವರ್ಷದಿಂದ ಓಮನ್ ದೇಶದಲ್ಲಿದ್ದ ಅವರು, ಕೆಲ ತಿಂಗಳ ಹಿಂದೆ ಆಗಮಿಸಿ ಕಾರವಾರದಲ್ಲಿ ಸ್ವಂತ ಮನೆ ಕಟ್ಟಿದ್ದರು.ಯಲ್ಲಾಪುರದ ಹುಡುಗಿಯ ಜತೆ ಮದುವೆಗೆ ನಿಶ್ಚಿತಾರ್ಥ ನೆರವೇರಿತ್ತು. ಶೀಘ್ರದಲ್ಲಿ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಎಲ್ಲ ತಯಾರಿ ನಡೆಸಿದ್ದರು. ಐದು ತಿಂಗಳ ಹಿಂದೆ ಅವರು ಓಮನ್‌ಗೆ ಮರಳಿದ್ದರು.

"ತಂದೆ, ತಾಯಿ ಕಳೆದುಕೊಂಡಿದ್ದ ವ್ಯಕ್ತಿ ಕಷ್ಟದಲ್ಲಿ ಬೆಳೆದಿದ್ದ. ಶ್ರದ್ಧೆಯಿಂದ ದುಡಿದು ಹಣ ಗಳಿಸಿ, ಉತ್ತಮ ಜೀವನ ನಡೆಸುವ ಕನಸು ಕಟ್ಟಿದ್ದವ ಇಂದಿಲ್ಲ ಎಂಬುದು ನಂಬಲಾಗುತ್ತಿಲ್ಲ" ಎಂದು ಆತ್ಮೀಯ ಸ್ನೇಹಿತ ವಿಜಯೇಂದ್ರ ದುಖಃ ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net