ಓಬವ್ವ ಮಹಿಳಾ ಶಕ್ತಿಯ ಪ್ರತೀಕ

bkt-11-1
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೀರ ನವಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ ಉದ್ಘಾಟಿಸಿದರು. ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ, ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟಿ ಸಿದ್ದೇಶ, ನಗರಸಭೆ ಸದಸ್ಯೆ ಯಲ್ಲಪ್ಪ ನಾರಾಯಣಿ, ಅಪರ ಜಿಲ್ಲಾಽಕಾರಿ ಪರಶುರಾ ಶಿನ್ನಾಳಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಇದ್ದರು.
Published on

ಬಾಗಲಕೋಟೆ: ಒಬ್ಬ ಸಾಮಾನ್ಯ ಮಹಿಳೆ ಹೋರಾಟ ಮಾಡಬಲ್ಲಳು ಎಂಬುದನ್ನು ತೋರಿಸಿಕೊಟ್ಟ ಮಹಿಳೆ ಓಬವ್ವ ಮಹಿಳೆಯರ ಪಾಲಿನ ಶಕ್ತಿ ಪ್ರತೀಕವಾಗಿದ್ದಾರೆ ಎಂದು ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೀರ ನವಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪುರುಷ ಪ್ರಧಾನವಾಗಿದ್ದ ಆ ಸಮಯದಲ್ಲಿ ಅನ್ನ ಆಶ್ರಯಕೊಟ್ಟ ಧಣಿಗೆ ಸ್ವಾಮಿನಿಷ್ಟೇ ತೋರಿ ಪತಿಯ ಉಟಕ್ಕೆ ಭಂಗವಾಗಬಾರದೆಂದು ಕಳ್ಳಗಿಂಡಿಯಲ್ಲಿ ಒಳ ನುಸುಳುತ್ತಿದ್ದ ವೈರಿಗಳನ್ನು ಸದೆಬಡಿದು ದಿಟ್ಟ ಹೋರಾಟ ಮಾಡಿದ ಮಹಿಳೆ. ಇಂತಹ ವೀರ ವನಿತೆಯ ಸಾಹಸ, ಧೈರ್ಯ ಇಂದು ಎಲ್ಲ ಮಹಿಳೆಯರಿಗೆ ದಾರಿದೀಪವಾಗಿದೆ ಎಂದರು.

ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಮಾತನಾಡಿ, ಮಹಾಮಹೀಮರು, ಮಾತೆಯರು ನಾಡಿಗಾಗಿ ಹಾಗೂ ಜನರ ಕಲ್ಯಾಣಕ್ಕಾಗಿ ಆಗಿ ಹೋದವರು. ಅಂತವರು ನಮ್ಮವರು ಎಂಬ ಅಭಿಮಾನ ಇರಬೇಕೆ ಹೊರತು. ಅಂತಹ ಮಹಾನ್ ವ್ಯಕ್ತಿಗಳನ್ನು ಜಾತಿ ಮತಗಳಿಗೆ ಸೀಮಿತರನ್ನಾಗಿ ಮಾಡಬಾರದು. ಸಮಾಜ ಬಾಂಧವರು ನೀಡಿದ ವಿವಿಧ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಡಾ.ಬಿ.ಆರ್.ಅಂಬೇಢ್ಕರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟಿ ಸಿದ್ದೇಶ ಮಾತನಾಡಿ, ನೆಲ. ಜಲ. ಜನರ ಹಿತಕ್ಕಾಗಿ ಹೋರಾಡಿದ ವೀರ ನವಿತೆ ಓಬವ್ವ ಒಬ್ಬ ವ್ಯಕ್ತಿಯಾಗಿರದೇ ಒಂದು ಶಕ್ತಿಯಾಗಿದ್ದಳು. ಸ್ವಾಮಿನಿಷ್ಟೇ ಪತಿ ಭಕ್ತಿ, ನಾಡಭಕ್ತಿ ಮೆರೆದವರು. ದುರ್ಗಕ್ಕೆ ಬಂದ ಅಪಾಯವನ್ನು ರಣಚಂಡಿಯಂತೆ ಹೋರಾಡಿ ವೈರಿ ಪಡೆಯನ್ನು ಹಿಮ್ಮೆಟ್ಟಿದಳು. ಇವಳ ಶೌರ್ಯ ಕಂಡು ದಂಡೆತ್ತಿ ಬಂದ ಹೈದರಾಲಿ ತನ್ನ ಸೈನಿಕರಿಗೆ ನಾಚಿಕೆಯಾಗಬೇಕು ನಿಮಗೆ ಒಬ್ಬ ಸ್ತ್ರೀ ನಿಮ್ಮನ್ನು ಓಡಿಸಿದ ರೀತಿ ಕಂಡರೆ ನಿಮಗೆ ಮದ್ದು, ಗುಂಡು ಕೊಡುವ ಬದಲು ಸೀರೆ ಉಡಿಸಬೇಕಾಗಿದೆ ಎಂದು ವ್ಯಂಗವಾಡಿದ್ದರು. ಇಂತಹ ಮಹಿಳೆಯ ಸಾಹಸ ಅಲ್ಲಿ ದೊರೆತ ತಾಮ್ರ ಶಾಸನದಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಯಲ್ಲಪ್ಪ ನಾರಾಯಣಿ, ಅಪರ ಜಿಲ್ಲಾಽಕಾರಿ ಪರಶುರಾ ಶಿನ್ನಾಳಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ, ಸಮಾಜದ ಮುಖಂಡರಾದ ಸೋಮಪ್ಪ ನೀಲನಾಯಕ, ಪ್ರೇಮನಾಥ ಗರಸಂಗಿ, ಯಲ್ಲಪ್ಪ ಸಂಕ್ಯಾನವರ, ವಿವೇಕಾನಂದ ಗರಸಂಗಿ, ವೈ.ವೈ.ತಿಮ್ಮಾಪುರ, ಮನೋಹರ ಕದಂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net