

ಕಲಬುರಗಿ: ಸೈಬರ್ ಕ್ರೈಂ ವಂಚಕರ ಷಡ್ಯಂತ್ರ, ಬ್ಯಾಂಕ್ ತಂತ್ರಾಶಗಳ ವೈಫಲ್ಯದಿಂದ ಗ್ರಾಹಕರೊಬ್ಬರು ಓಟಿಪಿ ಹೇಳದಿದ್ದರೂ ಸಹ ತಮ್ಮ ಖಾತೆಯಲ್ಲಿನ ೪೮,೪೫೦ ರೂ.ವನ್ನು ಆನ್‌ಲೈನ್ ವಂಚಕರಿಂದ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಫಜಲಪುರ ತಾಲೂಕಿನ ಅಂಕಲಗಿ ಗ್ರಾಮದ ಪ್ರಭು ಕಲಶೆಟ್ಟಿ ಹಣ ಕಳೆದುಕೊಂಡವರು. ಶನಿವಾರ ಬೆಳಗ್ಗೆ ಸುಮಾರ ೧೦.೪೧ ನಿಮಿಷಕ್ಕೆ ಕೆನರಾ ಬ್ಯಾಂಕ್‌ನವರು ಎಂದು ಹೇಳಿ ಕರೆ ಬಂದಿದ್ದು, ನೀವು ಏನಾದರೂ ಖರೀದಿ ಮಾಡಿದ್ದೀರಾ? ನಿಮ್ಮ ಅಕೌಂಟ್‌ನಿAದ ಹಣ ಕಟ್ ಆಗಿದೆ. ಕೂಡಲೇ ದೂರು ಕೊಡಿ ಎಂದು ತಿಳಿಸಿದ್ದಾರೆ. ಫೋನ್ ಕಟ್ ಆದ ತಕ್ಷಣ ಪ್ರಭು ಫೋನ್‌ಗೆ ವಸ್ತುಗಳ ಖರೀದಿ ಮಾಡಿದ್ದಕ್ಕಾಗಿ ನಿಮ್ಮ ಅಕೌಂಟ್‌ನಿAದ ೪೮,೪೫೦ ರೂ. ಹಣ ಕಟ್ ಆಗಿದೆ ಎಂದು ಬ್ಯಾಂಕ್‌ನಿಂದ ಮೇಸೆಜ್ ಬಂದಿದೆ.
ಈ ಬಗ್ಗೆ ಪ್ರಭು ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಹಣ ಕಟ್ ಆಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಬ್ಯಾಂಕ್ ಸಿಬ್ಬಂದಿ ಸೈಬರ್ ಕ್ರೈಂ ದೂರು ನೀಡಿ ಎಂದು ಸಲಹೆ ನೀಡಿದ್ದಾರೆ. ಕಲಬುರಗಿಯ ಸೈಬರ್ ಕ್ರೈಂ ಕಚೇರಿಗೆ ದೂರು ನೀಡಲು ಬಂದಿದ್ದು, ಆನ್‌ಲೈನ್‌ನಲ್ಲಿ ದೂರು ನೀಡಿ ಎಂದು ಹೇಳಿ ಕಳುಹಿಸಿದ್ದಾರೆ. ಕೊನೆಗೆ ಆನ್‌ಲೈನ್‌ಗೆ ದೂರು ನೀಡಿ, ಸೈಬರ್ ಕ್ರೈಂ ಮತ್ತು ಬ್ಯಾಂಕ್‌ಗೆ ದೂರು ನೀಡಿದ ಒಂದೊAದು ಪ್ರತಿ ನೀಡಿದ್ದು. ತನಿಖೆ ಪ್ರಗತಿಯಲ್ಲಿದೆ.