

ಕಲಬುರಗಿ: ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಸಾಕಷ್ಟು ಯುವ ಪ್ರತಿಭೆಗಳು ಮಿಂಚಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
೧೦ ಸಾವಿರ ಮೀ ಓಟದಲ್ಲಿ ಯಡ್ರಾಮಿಯ ಭೀಮಾಶಂಕರ ಹೆಡಗಿಜೋಳ ಮೊದಲ ಸ್ಥಾನ ಪಡೆದು ಸಾಧನೆ ಮೆರೆದರೆ, ಅಫಜಲಪುರದ ಗುಂಡಪ್ಪ ಮೋಘಾ ದ್ವಿತೀಯ, ಜೇವರ್ಗಿಯ ಶರಣು ಶಖಾಪುರ ತೃತೀಯ ಸ್ಥಾನ ಪಡೆದು ಗಮನಸೆಳೆದಿದ್ದಾರೆ. ೩ ಸಾವಿರ ಮೀ ಓಟ ಬಾಲಕಿಯರ ವಿಭಾಗದಲ್ಲಿ ಅಫಜಲಪುರದ ಲಕ್ಷ್ಮೀ ದರೆಪ್ಪ (ಪ್ರಥಮ), ಚಿತ್ತಾಪುರದ ಭಾಗ್ಯಶ್ರೀ (ದ್ವಿತೀಯ), ಕಲಬುರಗಿಯ ಸಾಕ್ಷಿ ಮಹಾಂತೇಶ (ತೃತೀಯ), ೧೫೦೦ ಮೀ. ಓಟದಲ್ಲಿ ಆಳಂದದ ಸುನೀಲ್ ಬುಗ್ಗೆ (ಪ್ರಥಮ), ಯಡ್ರಾಮಿಯ ವಿಜಯಕುಮಾರ ಕುಂಬಾರ್ (ದ್ವಿತೀಯ), ಅಫಜಲಪುರದ ಶಿವರಾಜ ಜಮಾದಾರ್ (ತೃತೀಯ) ಮಿಂಚಿದ್ದಾರೆ.
ಉದ್ದ ಜಿಗಿತದಲ್ಲಿ ಬಸವರಾಜ ಹೂಗಾರ್ (ಪ್ರಥಮ), ದಿಲೀಪ್ ರಾಠೋಡ್ (ದ್ವಿತೀಯ), ಜೀವನ್ ಹೇಮಸಿಂಗ್ (ತೃತೀಯ). ಎತ್ತರ ಜಿಗಿತದಲ್ಲಿ ಬಿ. ಜಮೀರ್ (ಪ್ರಥಮ), ಅಜಯ ಲಕ್ಷ್ಮಣ (ದ್ವಿತೀಯ), ಆಕಾಶ (ತೃತೀಯ). ಶಾಟ್‌ಫುಟ್‌ನಲ್ಲಿ ಜೇವರ್ಗಿಯ ಬಸವರಾಜ ಮಳಿಮಠ್ (ಪ್ರಥಮ), ಆಳಂದದ ಮನೋಜ (ದ್ವಿತೀಯ), ಕಲಬುರಗಿಯ ಎನ್.ಜಗದೀಶ (ತೃತೀಯ), ಡಿಸ್ಕಸ್‌ಥ್ರೋದಲ್ಲಿ ಕಲಬುರಗಿಯ ಭಾಗ್ಯವಂತ (ಪ್ರಥಮ), ಜೇವರ್ಗಿಯ ಬಸವರಾಜ ಆರ್. (ದ್ವಿತೀಯ), ಸೇಡಂನ ಭೂವಂತ (ತೃತೀಯ). ಟಿಆರ್ ಜಂಪ್‌ನಲ್ಲಿ ಬಸವರಾಜು (ಪ್ರಥಮ), ಸಮಾಧಾನ (ದ್ವಿತೀಯ), ಗೋವಿಂದ (ತೃತೀಯ) ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಮಹಿಳೆಯರ ವಿಭಾಗ: ಉದ್ದ ಜಿಗಿತದಲ್ಲಿ ಚಿಂಚೋಳಿಯ ಸುಧಾರಾಣಿ (ಪ್ರಥಮ), ರೇಣುಕಾ (ದ್ವಿತೀಯ), ಸೃಷ್ಠಿ (ತೃತೀಯ). ಎತ್ತರ ಜಿಗಿತದಲ್ಲಿ ಚಿಂಚೋಳಿಯ ರೇಖಾ ಅನಿಲ್ (ಪ್ರಥಮ), ಸುಧಾರಾಣಿ (ದ್ವಿತೀಯ), ಕಲಬುರಗಿಯ ಆಶಾ ಆನಂದ (ತೃತೀಯ), ಶಾಟ್‌ಫುಟ್‌ನಲ್ಲಿ ಚಿತ್ತಾಪುರದ ಪಾರ್ವತಿ (ಪ್ರಥಮ), ಸೇಡಂನ ಶ್ರುತಿ (ದ್ವಿತೀಯ), ತೇಜಸ್ವಿನಿ (ತೃತೀಯ), ಡಿಸ್ಕಸ್ ಥ್ರೋನಲ್ಲಿ ಪಾರ್ವತಿ (ಪ್ರಥಮ), ಸಾನಿಯಾ ಬೇಗಂ (ದ್ವಿತೀಯ), ನಿಶಾ (ತೃತೀಯ), ಟಿಆರ್ ಜಂಪ್‌ನಲ್ಲಿ ಚಿಂಚೋಳಿಯ ರೇಣುಕಾ (ಪ್ರಥಮ), ಚಿತ್ತಾಪುರದ ಲಕ್ಷ್ಮೀ (ದ್ವಿತೀಯ), ಕಮಲಾಪುರದ ರೇಣುಕಾ ಎ (ತೃತೀಯ), ೧೦೦ ಮೀ ಓಟದಲ್ಲಿ ಕಲಬುರಗಿಯ ರತ್ನಜ್ಯೋತಿ (ಪ್ರಥಮ), ಸೇಡಂನ ಪೂಜಾ ಹೂಗಾರ್ (ದ್ವಿತೀಯ), ಕಮಲಾಪುರದ ರೇಖಾ ಭಾವಿಕಟ್ಟಿ (ತೃತೀಯ) ಸಾಧನೆ ಮೆರೆದಿದ್ದಾರೆ.