ಓಕಳಿಯಾಡಿ ಸಂಭ್ರಮಿಸಿದ ರಾಮಭಕ್ತರು

1001281915
???????
Published on

ಹೊಳೆನರಸೀಪುರ: ಪೇಟೆ ಕುರುಹಿನಶೆಟ್ಟಿ ಜನಾಂಗದವರು ಶ್ರೀರಾಮ ನವಮಿ ಪ್ರಯುಕ್ತ ಶನಿವಾರ ಶ್ರೀರಾಮ ಮಂದಿರದಲ್ಲಿ ಅಬಾಲವೃದ್ಧರಾದಿಯಾಗಿ ಓಕಳಿ ಹಬ್ಬ ಆಚರಿಸಿ ಸಂಭ್ರಮಿಸಿದರು.

ಪಟ್ಟಣದ ಕುರುಹಿನಶೆಟ್ಟಿ ಶ್ರೀರಾಮಮಂದಿರದಲ್ಲಿ ಓಕಳಿ ಉತ್ಸವವನ್ನು ಸುಮಾರು 70 ವರ್ಷಗಳಿಂದಲೂ ಆಚರಿಸಲಾಗುತ್ತಿದೆ.

ಶ್ರೀರಾಮಮಂದಿರದಲ್ಲಿ ಶನಿವಾರ ಶ್ರೀಸೀತಾ, ರಾಮ, ಲಕ್ಷ್ಮಣ ಹಾಗೂ ಹನುಮಂತನ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ, ಪೂಜಿಸಿದ ನಂತರ, ಅಡ್ಡೆ ಹೊತ್ತು ಯುವಕರು ಬಡಾವಣೆಯಲ್ಲಿ ಮೆರವಣಿಗೆ ನಡೆಸಿ ಭಕ್ತಿ ಸಮರ್ಪಿಸಿದರು.

ಸುಮಂಗಲಿಯರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಶ್ರೀರಾಮನ ಭಕ್ತರಿಗೆ ನೈವೇದ್ಯದ ಕೋಸಂಬರಿ, ಮಜ್ಜಿಗೆ ವಿತರಿಸಿ, ಶ್ರೀರಾಮೋತ್ಸವದಲ್ಲಿ ಸಂಭ್ರಮಿಸಿದರು.

ಕುರುಹಿನಶೆಟ್ಟಿ ಜನಾಂಗ ಕಮಿಟಿ ಅಧ್ಯಕ್ಷ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಸುದರ್ಶನ್ ಹಾಗೂ ಸದಸ್ಯರು, ಪುರಸಭೆ ಮಾಜಿ ಅಧ್ಯಕ್ಷೆ ಜ್ಯೋತಿ ಮಂಜುನಾಥ್, ಕುರುಹಿನಶೆಟ್ಟಿ ಮಹಿಳಾ ಸಮಾಜದ ಅಧ್ಯಕ್ಷೆ ಇಂದೂ ನಾರಾಯಣ್ ಹಾಗೂ ಸದಸ್ಯರು, ಕುರುಹಿನಶೆಟ್ಟಿ ಯುವಕರ ಸಂಘ(ಗ್ರೀನ್ ಬಾಯ್ಸ)ದ ಅಧ್ಯಕ್ಷ ವಿಶೇಷ್ ಎನ್.ಮೂರ್ತಿ ಹಾಗೂ ಸದಸ್ಯರು, ಕುರುಹಿನಶೆಟ್ಟಿ ಮಿತ್ರ ವೃಂದದ ಅಧ್ಯಕ್ಷ ಆರ್.ಕೆ.ಗುರುರಾಜ್ ಹಾಗೂ ಸದಸ್ಯರು, ಎದುರುಮುಖ ಶ್ರೀರಾಮಲಿಂಗಾಂಜನೇಯಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆರ್.ರಮೇಶ್ ಹಾಗೂ ಸದಸ್ಯರು, ನಿವೃತ್ತ ಉಪನ್ಯಾಸಕರಾದ ನರಸಿಂಹಮೂರ್ತಿ, ರಂಗಸ್ವಾಮಿ, ಮುಖಂಡರಾದ ಕೃಷ್ಣಪ್ಪ, ರಾಘವೇಂದ್ರ, ಮನುಕುಮಾರ್, ಯೋಗಾನರಸಿಂಹ, ನಾಗರಾಜ್, ನರಸಿಂಹಮೂರ್ತಿ ಶಾಸ್ತ್ರಿ, ಎನ್.ಗೋಪಾಲ ಎನ್., ಎಚ್.ಕೆ.ಶ್ರೀನಿವಾಸಮೂರ್ತಿ, ಪ್ರದೀಪ್‌ಕುಮಾರ್, ಪಿ.ಆರ್.ಸುಬ್ರಮಣ್ಯ , ಚಿರಂಜೀವಿ, ಬಾಬಣ್ಣ, ಬಿ.ಎನ್.ಜೈಕುಮಾರ್, ಸುನೀಲ್, ಆರ್.ಕೆ.ಜಯರಾಮ್, ಎಚ್.ಪಿ.ಮುರಳೀಧರ, ಧನಂಜಯ, ಹರೀಶ್, ಪ್ರಮೋದ್, ಪುಟ್ಟರಾಜು, ಕೃಷ್ಣಕಾಂತ್, ಶ್ರೀನಿವಾಸ್, ಉಮಾ ಗಣೇಶ್, ಎಚ್.ಬಿ.ನಾಗವೇಣಿ, ಚೈತ್ರಾ, ಜೈ ಮಾರುತಿ ಯುವಕರ ಸಂಘದ ಅಧ್ಯಕ್ಷ ಹಾಗೂ ಸದಸ್ಯರು ಇತರರು ಓಕಳಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net