ಒಳಮೀಸಲು ಶೀಘ್ರ ಜಾರಿ ಮಾಡಿ

oppo_2
oppo_2
Published on

ಕಲಬುರಗಿ: ಪರಿಶಿಷ್ಟ ವರ್ಗಗಳಿಗೆ ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೂಡಲೇ ಒಳಮೀಸಲು ಜಾರಿ ಮಾಡಬೇಕು ಎಂದು ರಾಜ್ಯ ಮಾದಿಗ ಮೀಸಲು ಹೋರಾಟ ಸಮಿತಿ ಮಾಜಿ ರಾಜ್ಯ ಉಪಾಧ್ಯP್ಷÀ ಡಾ.ಜಿ.ಗೋಪಾಲರಾವ ತೆಲಂಗಿ ಆಗ್ರಹಿಸಿದರು.
ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನ್ಯಾ.ಎಜೆ ಸದಾಶಿವ ಆಯೋಗದ ವರದಿ ಜಾರಿಯ ಭರವಸೆ ನೀಡಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಸರ್ಕಾರ ಆದ್ಯತೆ ಮೇಲೆ ಜಾರಿ ಮಾಡಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಮಾದಿಗ ಸಮುದಾಯಕ್ಕೆ ಶೇ.೬, ಛಲವಾದಿ ಸಮುದಾಯಕ್ಕೆ ಶೇ.೫. ೧/೨, ಬಂಜಾರ, ಭೋವಿ, ಕೊರವ, ಕೊರಚ ಸಮುದಾಯಗಳಿಗೆ ಶೇ.೪.೧/೨, ಇತರೆ ಜಾತಿಗಳಿಗೆ ಶೇ.೧ ಒಳಮೀಸಲು ಕಲ್ಪಿಸುವಂತೆ ನ್ಯಾಯಮೂರ್ತಿ ಎಚ್.ಎಸ್.ನಾಗಮೋಹನದಾಸ ವರದಿಯಂತೆ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಿದರೂ ವಿಳಂಬ ಧೋರಣೆ ಅನುಸರಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಚರ್ಚಿಸಿ, ಸುಪ್ರೀಂಕೋರ್ಟ್ನ ಮಹತ್ವದ ಆದೇಶ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ಸೈದಪ್ಪ ಹಾಗರಗಿ, ಸಿದ್ಧಾರೂಢ ಧುಮ್ಮನಸೂರ, ಜೈರಾಜ ಕಿಣಗಿ, ಆನಂದ ತೆಗನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net