ಒಬ್ಬರಿಗೆ 30 ಟನ್ ಮರಳು

20bkl1_bharat s
Published on

ಭಟ್ಕಳ: ಸಾರ್ವಜನಿಕರಿಗೆ ಮರಳಿನ ವಿಚಾರದಲ್ಲಿ ಆಗುವ ತೊಂದರೆ ತಪ್ಪಿಸಲು ಸರ್ಕಾರದಿಂದಲೇ ಶಿರಾಲಿಯಲ್ಲಿ ಮರಳು ದಾಸ್ತಾನು ಕೇಂದ್ರ ಸ್ಥಾಪಿಸಲಾಗುವುದು ಎಂದು ಭಟ್ಕಳ ಉಪವಿಭಾಗಾಧಿಕಾರಿ ಭರತ ಎಸ್., ಹೇಳಿದರು.

ಅವರು ಶುಕ್ರವಾರ ಭಟ್ಕಳ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈವರೆಗೆ ಮನೆ ಕಟ್ಟುವವರು ಮರಳು ಪಡೆಯಲು ಹರಸಾಹಸ ಪಡಬೇಕಿತ್ತು. ದರವೂ ನಿಗದಿ ಇರಲಿಲ್ಲ. ಅಲ್ಲದೆ, ಬೇರೆಡೆಯಿಂದ ಮರಳು ತರಿಸಲು ಸಾಗಾಣಿಕೆ ವೆಚ್ಚವೂ ಅಧಿಕವಾಗುತ್ತಿತ್ತು. ಇದೆಲ್ಲವನ್ನು ಮನಗಂಡ ಆಡಳಿತ ಶಿರಾಲಿಯಲ್ಲಿ ಮರಳು ದಾಸ್ತಾನು ಕೇಂದ್ರ ಸ್ಥಾಪಿಸಿದೆ. ಅಲ್ಲದೆ, ಒಬ್ಬರಿಗೆ 30 ಟನ್ ಮರಳು ನೀಡಲಾಗುತ್ತದೆ. ಸರ್ಕಾರಿ ನಿವೇಶನ ಮಂಜೂರಾದ ಫಲಾನುಭವಿಗಳಿಗೆ 10 ಟನ್​ಗೆ 11,250 ರೂ.ಗಳಂತೆ ದರ ನಿಗದಿ ಮಾಡಿದರೆ. ಇತರರಿಗೆ 10 ಟನ್​ಗೆ 12,250 ರೂ. ದರ ನಿಗದಿ ಮಾಡಲಾಗಿದೆ.

ಮರಳು ಕೊಳ್ಳಲು ಬಯಸುವ ಫಲಾನುಭವಿಗಳು ಸ್ಥಳೀಯ ಪುರಸಭೆ, ಪ.ಪಂ. ಅಥವಾ ಪಂಚಾಯಿತಿಗಳಿಂದ ದೃಢೀಕರಣ ತರುವುದು ಕಡ್ಡಾಯ. ನಿಗದಿ ಪಡಿಸಿದ ದರ ಲೋಡಿಂಗ್ ಕೂಡ ಒಳಪಟ್ಟಿದೆ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಬೇಡಿಕೆ ಅನುಸಾರ ಮರಳು ಎತ್ತುವಳಿಗೆ ಅವಕಾಶ ಕಲ್ಪಿಸಲಾಗುವುದು. ನಿರ್ವಿುತಿ ಕೇಂದ್ರ ಇದರ ನಿರ್ವಹಣೆ ನಡೆಸಲಿದೆ. ಅವಶ್ಯಕತೆ ಇರುವವರು ನಗದು ರೂಪದಲ್ಲೇ ಹಣ ಪಾವತಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಿರ್ವಿುತಿ ಕೇಂದ್ರದ ಹೆಲ್ಪ್ ಲೈನ್ ನಂ. 8123599266ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು. ತಹಸೀಲ್ದಾರ್ ರವಿಚಂದ್ರ ಸಿ., ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net