ಒಡ್ಗಲ್ಲು ರಂಗನಾಥಸ್ವಾಮಿ ಪೂಜಾ ಮಹೋತ್ಸವ

1 bannur 3
Published on

ಬನ್ನೂರು: ಪಟ್ಟಣದಲ್ಲಿ ಶ್ರೀ ಒಡ್ಗಲ್ಲು ರಂಗನಾಥಸ್ವಾಮಿ ಪೂಜಾ ಮಹೋತ್ಸವದ ಅಂಗವಾಗಿ ಭಾನುವಾರ ಎಪಿಎಂಸಿ ಆವರಣದಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಪ್ರಾತಃ ಕಾಲದಲ್ಲಿ ಬೆಟ್ಟಳ್ಳಿ ಗ್ರಾಮದ ಓಡ್ಗಲ್ಲು ರಂಗನಾಥನಿಗೆ ಪೂಜೆ ಸಲ್ಲಿಸಿ, ಮಧ್ಯಾಹ್ನದ ವೇಳೆಗೆ ಸಂತೇ ಮಾಳದ ಎಪಿಎಂಸಿ ಆವರಣದಲ್ಲಿ ಪ್ರಸಾದ ವಿನಿಯೋಗ ಮಾಡಲಾಯಿತು. ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾದ ಚಲುವರಾಜು ಮಾತನಾಡಿ, ಪೂಜಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರಿಗೂ ದೇವರ ಆಶೀರ್ವಾದ ಸಿಗಲಿ ಎಂದು ಹಾರೈಸಿದರು.

ಅತ್ತಳ್ಳಿ ಲೋಕೇಶ್, ರಾಜೇಂದ್ರ, ಆನಂದ್, ಡಾ.ಮಹೇಂದ್ರಸಿಂಗ್ ಕಾಳಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net