ಒಕ್ಕೊರಿಲಿನಿಂದ ದಿಕ್ಕರಿಸುತ್ತೆವೆ

bkt-19-5
Published on

ಬಾಗಲಕೋಟೆ: ರಾಜ್ಯದಲ್ಲೆಡೆ ಮಾದಿಗ ಮುನ್ನಡೆ ಸಮಾವೇಶಗಳ ಅಭೋತಪೂರ್ವ ಯಶಸ್ವಿನಿಂದ ಕೆಂಗಟ್ಟಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಶೋಷಿತ ಸಮಾಜಗಳನ್ನು ದಿಕ್ಕು ತಪ್ಪಿಸಲು ಕೇಂದ್ರಕ್ಕೆ ಕಳುಹಿಸಿರುವ ಶಿಫಾರಸ್ಸನ್ನು ಮಾದಿಗ ಸಮಾಜ ಒಕ್ಕೊರಿಲಿನಿಂದ ದಿಕ್ಕರಿಸುತ್ತೆವೆ ಎಂದು ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ ಹೇಳಿದರು.

ನವನಗರದ ಪತ್ರಿಕಾಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್ ಗರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರುಗಳಿಗೆ ಒಳಮಿಸಲಾತಿ ಬಗ್ಗೆ ಯಾವ ಕಾಳಜಿ ಇಲ್ಲಾ ದಲಿತರನ್ನು ಓಟ ಬ್ಯಾಂಕಾಗಿ ಬಳಸಿಕೊಂಡು ಕೊನೆಗೆ ಉಂಡೆನಾಮೆ ಹಾಕುವ ಕಪಟನೀತಿ ಇಂದು ಬಯಲಿಗೆ ಬಂದಿದೆ ಅಪ್ರಸುತ್ತವಾಗಿರುವ 341 ನೇ ವಿಧಿಯ ತಿದ್ದುಪಡೆ ಗಮ್ಮವನ್ನು ತೋರಿಸಿ ಕಾಂಗ್ರೆಸ್ ಮಾದಿಗ ಸಮುದಾಯಕ್ಕೆ ಮೋಸ ಮಾಡಿದೆ ಎಂದು ಹೇಳಿದರು.2020 ಆಗಷ್ಟ 27ರಂದು ಸುಪ್ರೀಂಕೋರ್ಟ್ ನ್ಯಾ ಮಿಶ್ರಾ ನೇತ್ರತ್ವದ ಪಂಚಪೀಠ ಮೀಸಲಾತಿ ವರ್ಗಿಕರಣದ ವಿಷಯದಲ್ಲಿ 341 ನೇ ವಿಧಿ ತಿದ್ದುಪಡಿ ಅಗತ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ ಈ ಐತಿಹಾಸಿಕ ತೀರ್ಪು ಸುಪ್ರೀಂಕೋರ್ಟ್ 7 ಸದಸ್ಯರ ಪೀಠದ ಮುಂದೆ ವಿಚಾರಣೆ ಬಂದಿರುವಾಗ ವಕೀಲ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹದೊಂದು ಅಗ್ಗದ ನಿರ್ಣಯ ಕೈಗೊಂಡು ನಗೆಪಾಟಲಿಗೆ ಈಡಾಗಿದ್ದಾರೆಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net