ಒಂಬತ್ತು ಕೈದಿಗಳ ಬಿಡುಗಡೆ

jail
Published on

ಕಲಬುರಗಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಒಂಬತ್ತು ಸೇರಿ ರಾಜ್ಯದ ೭೭ ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಬಿಡುಗಡೆ ಮಾಡಿದರು.
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ೧೪ ವರ್ಷ ಜೀವಾವಧಿ ಪೂರ್ಣಗೊಳಿಸಿದ ಶಿಕ್ಷಾ ಬಂದಿಗಳಾದ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಗೊಗ್ಗದ ಬಸವರಾಜ ಮಂಠಾಳ, ಅಫಜಲಪುರ ತಾಲೂಕಿನ ಹೊಸ್ಸೂರ ಹಳ್ಳಿಯ ವಜೀರ್‌ಸಾಬ್ ಮರತೂರ, ರಾಯಚೂರಿನ ಲಚಮಯ್ಯ ಹಳೇ ಜಂಬಲದಿನ್ನಿ, ಚಿತ್ತಾಪುರ ತಾಲೂಕಿನ ಕೋರವಾರ ಗ್ರಾಮದ ದತ್ತಯ್ಯ ಕಲಾಲ್, ಮಾಣಿಕ್ ಕಲಾಲ್, ಬಸಯ್ಯ ಕಲಾಲ್, ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ತೊಪಗಲ್ಲಿಯ ಮಹ್ಮದ್ ನಜೀಬ್ ಹಸನ್, ಮೈಸೂರಿನ ಚಂದ್ರು ಮಾಲಂಗಿ ಗೋಮಾಳ, ರಾಯಚೂರಿನ ದೇವದುರ್ಗ ತಾಲೂಕಿನ ಯಡ್ಡಲದೊಡ್ಡಿ ತಾಂಡಾದ ಹಣಮಂತನನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಯಿತು.
ಕಲಬುರಗಿ ಕೇಂದ್ರ ಕಾರಾಗೃಹದಿಂದ ಕೈದಿಗಳನ್ನು ಕಾರಾಗೃಹ ಅಧೀಕ್ಷಕ ಡಾ.ಪಿ.ರಂಗನಾಥ ನೇತೃತ್ವದಲ್ಲಿ ಸಿಬ್ಬಂದಿ ಬಿಗಿ ಭದ್ರತೆಯೊಂದಿಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ, ಸಮಾರಂಭದಲ್ಲಿ ಭಾಗವಹಿಸಿ, ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net