ಒಂದೇ ದಿನದಲ್ಲಿ 2.12 ಕೋಟಿ ರೂ.ಗಳ ಕರ ವಸೂಲಾತಿ

bkt-25-2
Published on

ಬಾಗಲಕೋಟೆ:  ಜಿಲ್ಲೆಯಾದ್ಯಂತ ಎಲ್ಲ ತಾಲೂಕಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿಗಳಲ್ಲಿ ಸೋಮವಾರ ಹಮ್ಮಿಕೊಂಡ ತೆರಿಗೆ ವಸೂಲಾತಿ ಅಭಿಯಾನ ಕಾರ್ಯಕ್ರಮದಲ್ಲಿ ಒಟ್ಟು 2.12 ಕೋಟಿ ರೂ.ಗಳ ಕರ ಸಂಗ್ರಹವಾಗಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ತಿಳಿಸಿದರು.

ಬಾಗಲಕೋಟೆ ತಾಲೂಕಿನ ಮಲ್ಲಾಪೂರ, ಭಗವತಿ ಹಾಗೂ ಬೇವಿನಮಟ್ಟಿ ಗ್ರಾಮಗಳಲ್ಲಿ ಕರ ವಸೂಲಾತಿಗೆ ಚಾಲನೆ ನೀಡಿ ಮಾತನಾಡಿದ ಅವರು ವಿವಿಧ ಗ್ರಾಮ ಪಂಚಾಯತಗಳಲ್ಲಿ ಬಾಕಿ ಇರುವ ತೆರಿಗೆ ವಸೂಲಾತಿಗಾಗಿ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಗ್ರಾ.ಪಂ ಅಧ್ಯಕ್ಷರು, ಉಪಾದ್ಯಕ್ಷರು, ಸರ್ವ ಸದಸ್ಯರು, ಜನ ಪ್ರತಿನಿಧಿಗಳು ಮತ್ತು ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಸಹಯೋಗದಲ್ಲಿ ಅಭಿಯಾನದ ರೂಪದಲ್ಲಿ ಕರ ವಸೂಲಾತಿಗೆ ಮುಂದಾಗಿದ್ದು, ಒಂದೇ ದಿನದಲ್ಲಿ ದಾಖಲೆಯ 2.12 ಕೋಟಿ ರೂ.ಗಳ ಕರ ಸಂಗ್ರಹವಾಗಿದೆ ಎಂದರು.

ಬೀಳಗಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 41.99 ಲಕ್ಷ ರೂ, ಬಾಗಲಕೋಟೆ ತಾಲೂಕಿನ ವ್ಯಾಪ್ತಿಯಲ್ಲಿ 41.74 ಲಕ್ಷ ರೂ, ಮುಧೋಳ ತಾಲೂಕಿನ ವ್ಯಾಪ್ತಿಯಲ್ಲಿ 30.01 ಲಕ್ಷ ರೂ, ಬಾದಾಮಿ ತಾಲೂಕಿನ ವ್ಯಾಪ್ತಿಯಲ್ಲಿ 27.34 ಲಕ್ಷ ರೂ, ಹುನಗುಂದ ತಾಲೂಕಾ ವ್ಯಾಪ್ತಿಯಲ್ಲಿ 17.85 ಲಕ್ಷ ರೂ, ರಬಕವಿ-ಬನಹಟ್ಟಿ ತಾಲೂಕಾ ವ್ಯಾಪ್ತಿಯಲ್ಲಿ 17.30 ಲಕ್ಷ ರೂ, ಇಳಕಲ್ಲ ತಾಲೂಕಾ ವ್ಯಾಪ್ತಿಯಲ್ಲಿ 13.37 ಲಕ್ಷ ರೂ, ಗುಳೇದಗುಡ್ಡ ತಾಲೂಕಾ ವ್ಯಾಪ್ತಿಯಲ್ಲಿ 11.40 ಲಕ್ಷ ರೂ ಹಾಗೂ ಜಮಖಂಡಿ ತಾಲೂಕಾ ವ್ಯಾಪ್ತಿಯಲ್ಲಿ 11.94 ಲಕ್ಷ ರೂ.ಗಳ ಕರ ಸಂಗ್ರಹವಾಗಿದೆ. ತೆರಿಗೆ ಪಾವತಿಸಿ ಗ್ರಾಮಗಳ ಅಭಿವೃದ್ದಿಗೆ ಸಹಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ, ಪಂಚಾಯತ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ಪರಮೇಶ್ವರ ಚಲವಾದಿ, ಬೇವಿನಮಟ್ಟಿ ಪಂಚಾಯತ ಅಭಿವೃಧ್ದಿ ಅಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net