ಒಂದೇ ದಿನ ಮೂರು ಮನೆಗಳ ಕಳ್ಳತನ

0101010101
Published on

ಬೋರಗಾಂವ: ಮಂಗಳವಾರ ಪಟ್ಟಣದಲ್ಲಿ ಭಾರೀ ಮಳೆಯಾಗಿ ವಿದ್ಯುತ್ ಕೈಕೊಟ್ಟಿದೆ. ಇದರ ಲಾಭ ಪಡೆದುಕೊಂಡ ಕಳ್ಳರು ಮೂರು ಮನೆಗಳ ಕಳ್ಳತನ ಮಾಡಿ ಚಿನ್ನಾಭರಣ, ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.

ಪಟ್ಟಣದ ಕುರುಬರ ಓಣಿ , ವಡ್ಡರ ಓಣಿ ಮತ್ತು ಕುರುಂದವಾಡ್ ಮನೆಗಳಲ್ಲಿ ಕಳ್ಳತನ ಮಾಡಲಾಗಿದೆ. ನಗದು, ಚಿನ್ನ ಮತ್ತು ಬೆಳ್ಳಿ ಕದ್ದಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳವಾರ ಸಂಜೆ ಪಟ್ಟಣದಲ್ಲಿ ಭಾರೀ ಮಳೆಯಾಗಿದ್ದು, ಬಿರುಗಾಳಿಯಿಂದಾಗಿ ವಿದ್ಯುತ್ ಸರಬರಾಜು ಕಡಿತಗೊಂಡಿತು.

ರಾತ್ರಿಯಿಡೀ ವಿದ್ಯುತ್ ಸರಬರಾಜು ಇಲ್ಲದಿದ್ದಾಗ ಅದರ ಲಾಭ ಪಡೆದುಕೊಂಡ ಕಳ್ಳರು ತಾಯವ್ವ ಬನ್ನೆ ಅವರ ಮನೆಯಿಂದ 12,000 ನಗದು ಮತ್ತು ನಾಲ್ಕು ತಾಮ್ರದ ಕೊಡ, ಕುರುಂದ್‌ವಾಡ್ ರಸ್ತೆಯಲ್ಲಿರುವ ವಸಂತ್ ಖೋತ ಅವರ ಮನೆಯಿಂದ 10 ಗ್ರಾಂ ಚಿನ್ನದ ಸರ ಹಾಗೂ 2,000 ಸಾವಿರ ರೂ ನಗದು, ರಾಮಚಂದ್ರ ಪವಾರ ಮನೆಯಿಂದ 2 ಗ್ರಾಂ ಚಿನ್ನ ಮತ್ತು 14 ಗ್ರಾಮ ಬೆಳ್ಳಿ ಕಳ್ಳತನ ಮಾಡಿದ್ದಾರೆ.

ಸದಲಗಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪಂಚನಾಮೆ ನಡೆಸಿದರು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶಿವಕುಮಾರ ಬಿರಾದಾರ ನೇತತ್ವದಲ್ಲಿ ಪೊಲೀಸ್ ಸಹಾಯಕ ಎಂ.ಎಂ.ಡ್ತಾರಿ ಮತ್ತು ಎಸ್.ಎನ್.ಬ ದೊಡೆ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net