ಒಂದೇ ಏಟು ತೆಂಗಿನ ಕಾಯಿ ಫಿಸ್ ಫಿಸ್....!!

bkt-6-7
ಬಾಗಲಕೋಟೆ ನಗರದ ದಂಡಿನ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಟೆಂಗಿನ ಒಡೆದುಕೊಂಡ ದೃಶ್ಯ.
Published on

ಬಾಗಲಕೋಟೆ: ಐದಾರು ದಶಕಗಳಿಂದ ನಿರಂತರವಾಗಿ ಆಚರಿಸಿಕೊಂಡು ಬಂದಿರುವ ಇಲ್ಲಿನ ಹರಣಶಿಕಾರಿ ಗಲ್ಲಿಯ ದಂಡಿನ ದುರ್ಗಾದೇವಿ ಜಾತ್ರಾ ಮಹೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿತು, ದುರ್ಗಾದೇವಿ ಅರ್ಚಕರು ತೆಲೆ ಟೆಂಗಿನ ಒಡೆದುಕೊಂಡ ದೃಶ್ಯ ರೋಮಾಂಚನಗೊಳಿಸಿತು...!!

ಮಹಾರಾಷ್ಟç, ಗೋವಾ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನ ಭಕ್ತರು ಆಗಮಿಸಿ ಬೆಳಗ್ಗೆ ದೇವಿಗೆ ಪೂಜೆ, ಆರತಿ, ನೈವೇಧ್ಯ ಸಮರ್ಪಿಸಿದರು. ಬಳಿಕ ದೇವಸ್ಥಾನದ ಅರ್ಚಕರಾದ ಮಾನಪ್ಪ ಚವ್ಹಾಣ, ಪರಶುರಾಮ ಕಾಳೆ ತೆಲೆಗೆ ತೆಂಗಿನ ಕಾಯಿ ಒಡೆದುಕೊಂಡರು. ತೆಂಗಿನ ಕಾಯಿ ತೆಲೆ ಒಡೆಯುತ್ತಿದ್ದಂತೆ ಫಿಸ್ ಫಿಸ್ ಆಗಿದ್ದು ಭಕ್ತಿಯ ಪರಾಕಾಷ್ಠೆ ತಲುವಂತೆ ಮಾಡಿತು. ಇನ್ನು ಗದಗ-ಬೆಟಗೇರಿಯ ನಾಗಸಮುದ್ರ ಸಮೀಪದ ದಂಡಿನ ಹಳ್ಳಿಯಲ್ಲಿ ದುರ್ಗಾದೇವಿ ಒಡ ಮೂಡಿದ್ದಾಳೆ. ನಂತರ ರಾಜ್ಯವ್ಯಾಪಿ ದೇವಿ ಮೂರ್ತಿಗಳನ್ನು ಸ್ಥಾಪಿಸಿ ಆರಾಧನೆ ಮಾಡಲಾಗುತ್ತದೆ. ಬಾಗಲಕೋಟೆ ನಗರದಲ್ಲಿ ಕಳೆದ ೬೦ ವರ್ಷಗಳಿಂದ ದೇವಿ ಜಾತ್ರೆ ಆಚರಿಸಿಕೊಂಡು ಬರಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net