ಐವತ್ತು ಲಕ್ಷ ರೂಪಾಯಿ ವಶ

cash
Published on

ಯಲ್ಲಾಪುರ: ಖಾಸಗಿ ಬಸ್​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 50 ಲಕ್ಷ ರೂಪಾಯಿ ನಗದನ್ನು ಯಲ್ಲಾಪುರ ಪೊಲೀಸರು ಜೋಡುಕೆರೆ ಬಳಿ ಮಂಗಳವಾರ ರಾತ್ರಿ ವಶಕ್ಕೆ ಪಡೆದು, ಐವರನ್ನು ಬಂಧಿಸಿದ್ದಾರೆ.

ಗುಜರಾತಿನ ಮೆಹಶಾನ್ ಜಿಲ್ಲೆಯ ಹೂಂಜಾ ತಾಲೂಕಿನ ಅಮೂದ ಪ್ರದೇಶದ ದಿನೇಶ್ ದೀಪಕ್ ಪ್ರಭಾತ್​ಜಿ ಠಾಕೂರ್, ಪಂಕಜಕುಮಾರ ಅಲಿಯಾಸ್ ಪ್ರಕಾಶ್ ರಾಮಾಭಾಯಿ ಪಟೇಲ್, ಗೋವಿಂದ ಭಾಯಿ ನಾಥುದಾಸ ಪಟೇಲ್, ಮುಖೇಶ ಭಾಯಿ ಚಥುರ ಭಾಯಿ ಪಟೇಲ್ ಹಾಗೂ ಉಪೇಂದ್ರ ನಾರಾಯಣ ಭಾಯಿ ಪಟೇಲ್ ಬಂಧಿತರು. ಬಂಧಿತರಿಂದ 50 ಲಕ್ಷ ರೂಪಾಯಿ ಹಾಗೂ 23 ಸಾವಿರ ರೂ. ಮೌಲ್ಯದ 6 ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಣವನ್ನು ಬೆಳಗಾವಿಯಿಂದ ಮಂಗಳೂರಿಗೆ ಸಾಗಿಸಲಾಗುತ್ತಿತ್ತು. ಟೂರಿಸ್ಟ್ ಬಸ್​ನಲ್ಲಿ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಯಲ್ಲಾಪುರ ಪೊಲೀಸರು ಜೋಡುಕೆರೆ ಬಳಿ ಬಸ್ ತಪಾಸಣೆ ನಡೆಸಿ, ಹಣ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಸಾದ ದೇವರಾಜು ಹಾಗೂ ಶಿರಸಿ ಡಿಎಸ್​ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಪಿಐ ಸುರೇಶ ಯಳ್ಳೂರು, ಪಿಎಸ್​ಐ ಮಂಜುನಾಥ ಗೌಡರ್, ಸಿಬ್ಬಂದಿ ದೀಪಕ್ ನಾಯ್ಕ, ಗಜಾನನ ನಾಯ್ಕ, ನಾಗಪ್ಪ ಲಮಾಣಿ, ಮಹಮ್ಮದ ಶಫಿ, ಕೃಷ್ಣ ಮಾತ್ರೋಜಿ, ಗಿರೀಶ ಲಮಾಣಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net