

ಬಾಗಲಕೋಟೆ: ಜಿಲ್ಲೆಯಲ್ಲಿ ೧೫೦೦ಕ್ಕಿಂತ ಹೆಚ್ಚಿಗೆ ಮತದಾರರಿರುವ ಮತಗಟ್ಟೆಗಳಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲು ಏಳು ಹೊಸ ಮತಗಟ್ಟೆಗಳಿಗೆ ಪ್ರಸ್ತಾವನೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾಽಕಾರಿ ಕೆ.ಎಂ.ಜಾನಕಿ ಹೇಳಿದರು.
ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-೨೦೨೪ರ ಹಿನ್ನಲೆಯಲ್ಲಿ ಪರಿಷ್ಕರಣೆ ಪೂರ್ವದ ಚಟುವಟಿಕೆಯಾದ ರೇಶನಾಲೈಜೇಸನ್ ಕುರಿತು ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳ ಜೊತೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊಸ ಮತಗಟ್ಟೆ ಸ್ಥಾಪನೆ, ವಿಳಾಸ ಬದಲಾವಣೆ ಕುರಿತು ತಹಸೀಲ್ದಾರ ಮತ್ತು ಉಪ ವಿಭಾಗಾಽಕಾರಿಗಳಿಂದ ಬಂದ ಪ್ರಸ್ತಾವನೆಗಳು ಬಂದಿದ್ದು, ಆ ಪ್ರಸ್ತಾವನೆಗಳನ್ನು ನಿಗದಿತ ನಮೂನೆಗಳಲ್ಲಿ ಮುಖ್ಯ ಚುನಾವಣಾಽಕಾರಿಗಳಿಗೆ ಕಳುಹಿಸಬೇಗಿದೆ ಎಂದರು.
ತೇರದಾಳ, ಬೀಳಗಿ ಮತ್ತು ಹುನಗುಂದ ಮತಕ್ಷೇತ್ರದಲ್ಲಿ ತಲಾ ಒಂದು ಹಾಗೂ ಬಾಗಲಕೋಟೆ ಮತಕ್ಷೇತ್ರದಲ್ಲಿ ೪ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲು, ಶಿಥಿಲಾವಸ್ಥೆ ಅಥವಾ ದುರಸ್ಥಿ ಹಂತದಲ್ಲಿರುವ ೫೨ ಮತಗಟ್ಟೆಗಳನ್ನು ಬದಲಾವಣೆ ಮಾಡುವುದು ಹಾಗೂ ೨೩೩ ಮತಗಟ್ಟೆಗಳ ವಿಳಾಸಗಳನ್ನು ಬದಲಾವಣೆ ಮಾಡಲು ಪ್ರಸ್ತಾವನೆ ಸಿದ್ದಪಡಿಸಲಾಗಿದ್ದು, ಈ ಬಗ್ಗೆ ವಿವಿಧ ರಾಜಕೀಯ ಮುಖಂಡರ ಸಲಹೆ ಸೂಚನೆಗಳನ್ನು ಪಡೆದುಕೊಂಡರು. ಜಿಲ್ಲೆಯಲ್ಲಿ ಒಟ್ಟು ೧೭೧೯ ಮತಗಟ್ಟೆಗಳಿದ್ದು, ಹೆಚ್ಚುವರಿ ೭ ಮತಗಟ್ಟೆ ಸೇರಿ ಒಟ್ಟು ೧೭೨೬ ಮತಗಟ್ಟೆಗಳಾಗಲಿವೆ ಎಂದು ಹೇಳಿದರು.
ಹಳೆಯ ಬಾಗಲಕೋಟೆಯ ಮತಗಟ್ಟೆ ಸಂಖ್ಯೆ ೧೧೧ ಮತ್ತು ೧೧೨ ರಲ್ಲಿ ಬೆಳಕಿನ ಅಭಾವ ಇರುವದರಿಂದ ಮತಗಟ್ಟೆ ಬಲಾವಣೆಗೆ ರಾಜಕೀಯ ಮುಖಂಡರು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಽಕಾರಿಗಳು ಈ ಬಗ್ಗೆ ಪರಿಶೀಲನೆ ಮಾಡಿ ಮತಗಟ್ಟೆ ಬದಲಾವಣೆಗೆ ಕ್ರಮವಹಿಸಲಾಗುವುದು. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಮನೆ ಮನೆ ಭೇಟಿ ಕಾರ್ಯದಲ್ಲಿ ಹಳೆಯ ಬಾಗಲಕೋಟೆ ಕೆಲವೊಂದು ಮತಗಟ್ಟೆ ವ್ಯಾಪ್ತಿಯಲ್ಲಿ ಅನುಭವಿ ಇರುವ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಲು ರಾಜಕೀಯ ಮುಖಂಡರು ಸಭೆಗೆ ತಿಳಿಸಿದಾಗ ಈ ಬಗ್ಗೆ ಕ್ರಮವಹಿಸುವುದಾಗಿ ಜಿಲ್ಲಾಽಕಾರಿಗಳು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಽಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ ಅಮರೇಶ ಪಮ್ಮಾರ, ಚುನಾವಣಾ ವಿಭಾಗದ ಶಿರಸ್ತೇದಾರ ರಜಪುತ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.