ಏತನೀರಾವರಿ ಅನುಷ್ಠಾನ ಮಾಡಿ

Dr mallikarjun
Published on

ಕಲಬುರಗಿ: ಯಡ್ರಾಮಿ ತಾಲೂಕಿನ ಮ¯್ಲÁಬಾದ್ ಏತನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಿದ ಸರ್ಕಾರದ ಕ್ರಮ ಶ್ಲಾಘನೀಯ. ಕಾಮಗಾರಿ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿ¯್ಲÁಧ್ಯP್ಷÀ ಡಾ.ಮಲ್ಲಿಕಾರ್ಜುನ ಗಂವಾರ ಹಾಗೂ ವೀರ ಕನ್ನಡಿಗರ ಸೇನೆ ಅಧ್ಯP್ಷÀ ಅಮೃತ ಪಾಟೀಲ್ ಸಿರನೂರ ಒತ್ತಾಯಿಸಿದರು. ಹಲವು ವರ್ಷದಿಂದ ನೆನೆಗುದಿಗೆ ಬಿದ್ದ ಯಡ್ರಾಮಿ ತಾಲೂಕಿನ ಮಲ್ಲಾಬಾದ್ ಏತ ನೀರಾವರಿ ಇದೀಗ ಸರ್ಕಾರ ಹಣ ಬಿಡುಗಡೆ ಮಾಡಿದ್ದು, ಇದರಿಂದ ಸುತ್ತಲಿನ ರೈತರಿಗೆ ಅನುಕೂಲವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕೃಷಿ ಇಲಾಖೆಯಿಂದ ನೀಡಿದ್ದ ಕೃಷಿ ಯಂತ್ರೋಪಕರಣ ಯೋಜನೆಯ ಯಂತ್ರಗಳು, ಉಪಕರಣಗಳು ರೈತರಿಗೆ ತಲುಪುತ್ತಿಲ್ಲ. ಹಲವು ಬಾರಿ ಕೃಷಿ ಸಚಿವರಿಗೆ ಮನವಿ ಸಲ್ಲಿಸಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಸರ್ಕಾರ ರೈತರಿಗೆ ಕೃಷಿ ಯಂತ್ರೋಪಕರಣ ಒದಗಿಸಬೇಕು ಎಂದು ಒತ್ತಾಯಿಸಿದರು. ಸೈಬಣ್ಣ ಪೂಜಾರಿ, ಸಂದೀಪ ಭರಣಿ, ಶಶಿಧರ ಮರತೂರ, ಮಲ್ಲಿಕಾರ್ಜುನ ಸಾರವಾಡ, ಶಿವಾನಂದ, ಅಣವೀರ, ಶಿವಾನಂದ, ಶಂಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net