

ಬಾಗಲಕೋಟೆ: ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ಮತ ಏಣಿಕೆ ಕಾರ್ಯವು ಜೂ.೪ ರಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ನಡೆಯಲಿದ್ದು, ಮತ ಏಣಿಕೆಗೆ ನೇಮಿಸಲಾದ ವಿವಿಧ ಚುನಾವಣಾ ಅಭ್ಯರ್ಥಿಗಳ ಏಜೆಂಟರು ಯಾವುದೇ ಕಾರಣಕ್ಕೂ ಮೊಬೈಲ್‌ಗಳÀನ್ನು ಕೇಂದ್ರದಲ್ಲಿ ತೆಗೆದುಕೊಂಡು ಹೋಗುವಂತಿಲ್ಲ ಎಂದು ಜಿಲ್ಲಾಽಕಾರಿ ಆಗಿರುವ ಜಿಲ್ಲಾ ಚುನಾವಣಾಽಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.
ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಶನಿವಾರ ಮತ ಏಣಿಕೆ ಪ್ರಕ್ರಿಯೆ ಕುರಿತು ಚುನಾವಣಾ ಅಭ್ಯರ್ಥಿಗಳಿಗೆ ಹಮ್ಮಿಕೊಂಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವ್ಯವಸ್ಥಿತವಾಗಿ ಮತ ಏಣಿಕೆ ಕಾರ್ಯಕ್ಕೆ ಜಿಲ್ಲಾಡಳಿತದಿಂದ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮತ ಏಣಿಕೆ ಕೇಂದ್ರದಲ್ಲಿ ಮೊಬೈಲ್ ತರುವದನ್ನು ನಿಷೇಽಸಲಾಗಿದ್ದು, ಮೊಬೈಲ್‌ಗಳನ್ನು ಪ್ರವೇಶ ದ್ವಾರದಲ್ಲಿ ಸ್ಥಾಪಿಸಲಾದ ಕೌಂಟರಗಳಲ್ಲಿ ಜಮೆ ಮಾಡಿ ಪ್ರವೇಶಿಸಬೇಕು ಎಂದು ಜಿಲ್ಲಾ ಚುನಾವಣಾಽಕಾರಿಗಳು ಮನವಿ ಮಾಡಿಕೊಂಡರು.
ಮತದಾನವಾದ ಮತಯಂತ್ರಗಳನ್ನು ಸಂಗ್ರಹಿಸಿ ಇಡಲಾದ ಭದ್ರತಾ ಕೊಠಡಿಗಳನ್ನು ಹಾಗೂ ಅಂಚೆ ಮತಪತ್ರಗಳ ಭದ್ರತಾ ಕೊಠಡಿಗಳನ್ನು ಅಂದು ಬೆಳಗ್ಗೆ ೭ ಗಂಟೆಗೆ ತೆಗೆಯಲಾಗುವುದರಿಂದ ಅಭ್ಯರ್ಥಿಗಳು ಬೆಳಗ್ಗೆ ೭ ಗಂಟೆಗೆ ಭದ್ರತಾ ಕೊಠಡಿಯ ಮುಂದೆ ಹಾಜರಿರುವಂತೆ ಕೋರಿದ ಅವರು, ಭದ್ರತಾ ಕೊಠಡಿಯನ್ನು ತೆಗೆದ ನಂತರ ಮೊದಲಿಗೆ ಅಂಚೆ ಮತ ಪತ್ರಗಳ ಏಣಿಕೆಯನ್ನು ಬೆಳಗ್ಗೆ ೮ ಗಂಟೆಗೆ ಆರಂಭಿಸಲಾಗುತ್ತದೆ. ನಂತರ ಇವಿಎಂ ಯಂತ್ರಗಳ ಮತ ಏಣಿಕೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಮತ ಏಣಿಕೆ ಟೇಬಲ್‌ಗಳ ವಿವರ :
ಜಿಲ್ಲೆಯ ಪ್ರತಿ ಮತಕ್ಷೇತ್ರದ ಮತ ಏಣ ಕೆ ಕಾರ್ಯಕ್ಕಾಗಿ ೧೪ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತ ಪತ್ರಗಳ ಏಣಿಕೆಗಾಗಿ ನೆಲ ಮಹಡಿಯ ೨೨ರ ಕೊಠಡಿಯಲ್ಲಿ ೧೪ ಟೇಬಲ್ ಹಾಗೂ ೨೦ಎ ಕೊಠಡಿಯಲ್ಲಿ ೧೦ ಟೇಬಲ್‌ಗÀಳ ವ್ಯವಸ್ಥೆ ಮತ್ತು ಇಟಿಪಿಬಿಎಸ್ ಸ್ಕ್ಯಾನಿಂಗ್‌ಕ್ಕಾಗಿ ಕೊಠಡಿ ಸಂ.೨೦ಎ ರಲ್ಲಿ ೧೪ ಟೇಬಲ್‌ಗÀಳ ವ್ಯವಸ್ಥೆ ಮಾಡಲಾಗಿದೆ. ನೆಲ ಮಹಡಿಯಲ್ಲಿ ರೂ.ನಂ.೩ರಲ್ಲಿ ಮುಧೋಳ ಮತಕ್ಷೇತ್ರ, ರೂ.ನಂ.೧೧ರಲ್ಲಿ ಬೀಳಗಿ ಮತಕ್ಷೇತ್ರ, ರೂ.ನಂ.೨೪ ರಲ್ಲಿ ಬಾದಾಮಿ ಮತಕ್ಷೇತ್ರ, ರೂ.ನಂ.೧೫ ರಲ್ಲಿ ನರಗುಂದ ಮತಕ್ಷೇತ್ರ ಹಾಗೂ ಮೊದಲನೇ ಮಹಡಿಯಲ್ಲಿ ರೂನಂ.೧೧೦ರಲ್ಲಿ ತೇರದಾಳ, ರೂನಂ.೧೧೫ರಲ್ಲಿ ಜಮಖಂಡಿ, ರೂನಂ.೧೦೨ರಲ್ಲಿ ಬಾಗಲಕೋಟೆ ಹಾಗೂ ರೂನಂ.೧೨೩ರಲ್ಲಿ ಹುನಗುಂದ ಮತಕ್ಷೇತ್ರದ ಮತ ಏಣಿಕೆ ಕಾರ್ಯ ನಡೆಯಲಿದೆ ಎಂದರು.
ಮತ ಏಣಿಕೆ ಪೂರ್ಣಗೊಂಡ ನಂತರ ೫ ಮತಗಟ್ಟೆಗಳನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿ ಪ್ರತಿ ಮತಕ್ಷೇತ್ರದ ೫ ವಿವಿ ಪ್ಯಾಟ್‌ಗಳ ಮತ ಏಣಿಕೆ ನಡೆಸಲಾಗುವುದು. ಮತ ಏಣಿಕೆ ಕೇಂದ್ರದಲ್ಲಿ ಸುತ್ತುವಾರು ಮತ ಏಣಿಕೆಯಾದ ವಿವರವನ್ನು ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಮೂಲಕ ಪ್ರಚುರಪಡಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ ಮಾತನಾಡಿ, ಅಭ್ಯರ್ಥಿಗಳು ಮತ್ತು ಮತ ಏಣಿಕೆ ಏಜೆಂಟರುಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸೀಮಿಕೇರಿಯಿಂದ ನವನಗರ ಕಡೆಗೆ ಬರುವ ರಸ್ತೆಯು ಸೀಮಿಕೇರಿಯಿಂದ ತೇಜಸ್ ಇಂಟರ್‌ನ್ಯಾಶನಲ್ ಸ್ಕೂಲವರೆಗೆ ಬಂದ್ ಇರುತ್ತದೆ. ಮತ ಏಣಿಕೆ ಕಾರ್ಯಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ, ಸಾರ್ವಜನಿಕರ ವಾಹನಗಳಿಗೆ ಓಡಾಡಲು ನಿರ್ಬಂಧವಿರುತ್ತದೆ. ಸಾರ್ವಜನಿಕರು ಗದ್ದನಕೇರಿಯಿಂದ ವಿದ್ಯಾಗಿರಿ ಮೂಲಕ ಹೋಗುವ ಮಾರ್ಗವನ್ನು ಉಪಯೋಗಿಸಲು ತಿಳಿಸಿದ್ದಾರೆ.
ಸಭೆಯಲ್ಲಿ ಅಪರ ಜಿಲ್ಲಾಽಕಾರಿ ಪರಶುರಾಮ ಶಿನ್ನಾಳಕರ, ಚುನಾವಣಾ ತಹಸೀಲ್ದಾರ ಪಂಪಯ್ಯ, ಚುನಾವಣಾ ವಿಭಾಗದ ಮಹೇಶ ಪಾಂಡವ, ಜಿ.ವಿ.ರಜಪೂತ ಸೇರಿದಂತೆ ವಿವಿಧ ರಾಜಕೀಯ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪ್ರತಿನಿಽಗಳು ಉಪಸ್ಥಿತರಿದ್ದರು.