ಏಡ್ಸ್ ಜಾಗೃತಿ ಜಾಥಾಕ್ಕೆ ಡಿಸಿ ಚಾಲನೆ

bkt-1-3
Published on

ಬಾಗಲಕೋಟೆ: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಸಮುದಾಯಗಳು ಮುನ್ನಡೆಸಲಿ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡ ಜನಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ದಾವಪ್ಪ ಎಸ್.ಬಿ ಜಂಟಿಯಾಗಿ ಶುಕ್ರವಾರ ಚಾಲನೆ ನೀಡಿದರು.

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆಸ್ಪತ್ರೆ ಹಾಗೂ ರೆಡ್ ರಿಬ್ಬನ್ ಕ್ಲಬ್ ಸಹಯೋಗದಲ್ಲಿ ನಡೆದ ಜಾಗೃತಿ ಜಾಥಾ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನವನಗರದ ನಾನಾ ಕಡೆ ಸಂಚರಿಸಿ ಜಿಲ್ಲಾ ಆಸ್ಪತ್ರೆಗೆ ಮುಕ್ತಾಯಗೊಂಡಿತು.

ಜಾಥಾದಲ್ಲಿ ಬವಿವ ಸಂಘದ ಆಯುರ್ವೇದ ಮೆಡಿಕಲ್ ಕಾಲೇಜ, ಸಜ್ಜಲಶ್ರೀ ನರ್ಸಿಂಗ್ ಕಾಲೇಜ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಚೈತನ್ಯ ಏಡ್ಸ್ ಪ್ರವೆನ್‍ಷನ್ ವುಮೆನ್ಸ್ ಸಂಘ, ವಿಯಾನ ಆರೈಕೆ ಮತ್ತು ಬೆಂಬಲ ಕೆಂದ್ರದ ಪ್ರತಿನಿಧಿಗಳು ಪಾಲ್ಗೊಂಡು ಜಾಥಾದುದ್ದಕ್ಕೂ ಜಾಗೃತಿಯ ಘೋಷಣೆಗಳನ್ನು ಕೂಗಿದರು. ಏಡ್ಸ್ ಕುರಿತು ಅರಿವಿರಲಿ, ಜೀವನವಲ್ಲ ಗೆಲುವು ಇರಲಿ, ಏಡ್ಸ ಒಂದು ಮಹಾಮಾರಿ, ಅದಕ್ಕೆ ತೋರಿಸಿ ಕೊನೆಯ ದಾರಿ, ಏಡ್ಸ್ ಅಳಿಯಿರಿ, ಜೀವ ಉಳಿಯಲಿ, ಎಲ್ಲರೂ ಸಂಕಲ್ಪ ಮಾಡೋಣ, ಎಚ್.ಐ.ವಿ ಸೋಂಕನ್ನು ಸೊಣ್ಣೆಗೆ ತರುವಲ್ಲಿ ಶ್ರಮಿಶೋಣ ಎಂಬ ಘೋಷವಾಕ್ಯಗಳನ್ನು ಕೂಗಿದರು.

ಜಾಥಾದಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸುವರ್ಣ ಕುಲಕರ್ಣಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ ಸೇರಿದಂತೆ ವಿವಿಧ ಕಾಲೇಜಿನ ಉಪನ್ಯಾಸಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net