

ಬಾಗಲಕೋಟೆ: ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಸಂಘದ ಶತಮಾನೋತ್ಸವ ಹಾಗೂ ಯಾದವಾನಂದ ಸ್ವಾಮೀಜಿಗಳ ೧೬ನೇ ಪಟ್ಟಾಭಿಷೇಕ ಸಮಾರಂಭ ಏ.೨೦ ರಂದು ಮಧ್ಯಾಹ್ನ ೩ ಗಂಟೆಗೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಅಮಟೂರ ಬಾಳಪ್ಪ ಅವರ ಸ್ಮರಣಾರ್ಥ ಮಂಟಪದಲ್ಲಿ ನಡೆಯಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ, ವಿ.ಪ ಸದಸ್ಯ ಡಿ.ಬಿ.ಶ್ರೀನಿವಾಸ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಮಾತನಾಡಿದ ಅವರು, ಅಂದಿನ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷಿ÷್ಮÃ ಹೆಬ್ಬಾಳಕರ್, ಸಂಸದ ಪ್ರಿಯಾಂಕ ಜಾರಕಿಹೊಳಿ ಸೇರಿದಂತೆ ಜಿಲ್ಲೆಯ ಶಾಸಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.೧೯೨೪ ರಲ್ಲಿ ನಮ್ಮ ಸಂಘವು ಅಸ್ವಿತ್ವಕ್ಕೆ ಬಂದಿದ್ದು, ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕಾಗಳಲ್ಲಿ ಸಂಘವು ರಚನೆಯಾಗಿದೆ. ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಅಂದಾಜು ೩೦ ಲಕ್ಷಕ್ಕೂ ಹೆಚ್ಚು ಗೊಲ್ಲ ಜನಾಂಗದವರು ಇದ್ದು, ಆರ್ಥಿಕ, ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬಹಳ ಹಿಂದುಳಿದಿದ್ದು, ಸಂಘಟನೆಯ ಮೂಲಕ ಬಲವರ್ಧನೆಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಎಲ್ಲ ಜಿಲ್ಲೆಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲಾಗುತ್ತಿದೆ. ಮಾಜಿ ಸಚಿವ ದಿ.ಎ.ಕೃಷ್ಣಪ್ಪ ಅವರ ಸಹಕಾರದೊಂದಿಗೆ ಸಂಘವು ಬೆಳದಿದ್ದು ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದ್ದು ಯಾದವ ಸಂಪದ ಕೈ ಪಿಡಿಯನ್ನು ಬಿಡುಗಡೆ ಮಾಡಲಾಗುವುದು ಎಂದರು.
ಮುಖAಡರಾದ ಮಲ್ಲೇಶ ಬಿಂಗೇರಿ, ಸತ್ಯಪ್ಪ ಹನವಾರ್, ಬಸವರಾಜ ಗೋರಕೊಪ್ಪ, ಬಸವರಾಜ ತಳವಾರ, ರಾಮಪ್ಪ ಪೂಜಾರಿ, ಡಿ.ಬಿ.ಫಕೀರಪ್ಪ, ದೊಡ್ಡಮಲ್ಲಪ್ಪ ಅನವಾರ್, ಹಣಮಂತ ನಾಯ್ಕರ್, ರವಿ ಪೂಜಾರಿ ಇದ್ದರು.