ಏ.೧೭ ರಂದು ಬಾಗಲಕೋಟೆಗೆ ಜನಾಕ್ರೋಶ ಯಾತ್ರೆ

bkt-15-1
ಬಾಗಲಕೋಟೆ ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿದರು. ಬಿಜೆಪಿ ಪದಾಽಕಾರಿಗಳಾದ ಬಸವರಾಜ ಹುನಗುಂದ, ಕಲ್ಲಪ್ಪ ಭಗವತಿ, ಮಲ್ಲೇಶ ಬಿಜಾಪುರ, ಉಮೇಶ ಹಂಚಿನಾಳ, ಶ್ರೀಧರ ಬಿ. ಇತರರು ಇದ್ದರು.
Published on

ಬಾಗಲಕೋಟೆ: ಬೆಲೆ ಏರಿಕೆ, ಮುಸ್ಲಿಂ ಓಲೈಕೆ, ದಲಿತರ ಹಣ ಲೂಟಿ ಸೇರಿದಂತೆ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಘಟಕ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆ ಏ.೧೭ ರಂದು ಬಾಗಲಕೋಟೆಗೆ ಆಗಮಿಸಲಿದ್ದು, ೧೦ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ, ವಿಧಾನ ಪರಿಷತ್ ವಿರೋಽ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಜಿಲ್ಲೆಯ, ರಾಜ್ಯಮಟ್ಟದ ನಾಯಕರು ಭಾಗವಹಿಸಲಿದ್ದಾರೆ ಎಂದರು.

ಅಂದು ಬೆಳಗ್ಗೆ ೧೦-೩೦ ಗಂಟೆಗೆ ಹಳೇ ಎಸಿ ಕಚೇರಿ ಸಮೀಪ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಪುತ್ಥಳಿಗೆ ಪುಷ್ಪ ಅರ್ಪಿಸಲಾಗುವುದು. ನಂತರ ಪಾದಯಾತ್ರೆಯೂ ಕೃಷ್ಣಾ ಟಾಕೀಜ್, ವಲ್ಲಭಬಾಯಿ ಚೌಕ್, ಪೊಲೀಸ್ ಚೌಕ್, ಎಂ.ಜಿ.ರಸ್ತೆ, ಬಸವೇಶ್ವರ ವೃತ್ತ ಮೂಲಕ ಹೊಳೆ ಆಂಜನೇಯ ದೇವಸ್ಥಾನ ಆವರಣ ತಲುಪಿ ಬೃಹತ್ ಸಭೆಯಾಗಿ ಮಾರ್ಪಡಲಿದೆ. ಅಲ್ಲಿದೆ ರಾಜ್ಯಮಟ್ಟದ ನಾಯಕರು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಮಧ್ಯಾಹ್ನ ನಂತರ ವಿಜಯಪುರಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಹೇಳಿದರು.

ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿದೆ. ಜನರಿಗೆ ತಪ್ಪು ಸಂದೇಶ ನೀಡುವ ವರದಿಯಾಗಿದೆ. ಮುಸ್ಲಿಂರ ತುಷ್ಠಿಕರಣ ಸರಿಯಲ್ಲ. ಸಿಎಂ ಸಿದ್ದರಾಮಯ್ಯ ಅವರ ಸಲಹೆಗಾರ ಬಸವರಾಜ ರಾಯರೆಡ್ಡಿ ಭ್ರಷ್ಟಾಚಾರದಲ್ಲಿ ನಂ-೧ ಅಂತ ಹೇಳಿದ್ದಾರೆ ಅಂದರೇ ಭ್ರಷ್ಟಾಚಾರ ಎಷ್ಟರಮಟ್ಟಿಗೆ ತಾಂಡವಾಡುತ್ತಿದೆ ಎನ್ನುವುದು ಜನರಿಗೆ ಅರ್ಥವಾಗಿದೆ. ಮೊಗಲರು, ಬ್ರಿಟಿಷರು ಇದೇ ರೀತಿ ಜಾತಿ ಆಧಾರಿತ ಇಬ್ಬಗೆಯ ನೀತಿ ಅನುಸರಿಸಿದೆ ಒಡೆದು ಆಳುವ ನೀತಿ ಮಾಡಿತು. ಅದನ್ನೆ ಕಾಂಗ್ರೆಸ್ ಮುಂದುವರೆಸಿಕೊAಡು ಬಂದಿದೆ. ಈ ಹಿಂದೆ ಈ ರೀತಿ ಮಾಡಿದವರು ತಕ್ಕ ಸಿಕ್ಕಿದೆ ಎಂದು ಮಾರ್ಮಿಕವಾಗಿ ನುಡಿದರು.

ಎಸ್ಸಿ, ಎಸ್ಟಿ ಅಭಿವೃದ್ಧಿ ಯೋಜನೆ ಮೀಸಲಿಟ್ಟ ೩೮ ಸಾವಿರ ಕೋಟಿ ರೂ. ಹಣ ಬಳಕೆ ಮಾಡಿದ್ದಾರೆ. ಎಸ್‌ಸಿಎಸ್ಪಿ/ಟಿಎಸ್‌ಪಿ ನಿಽಯಿಂದ ಅಂದಾಜು ೧೦ ಸಾವಿರ ಕೋಟಿ ರೂ. ಅಲ್ಪಸಂಖ್ಯಾತರಿಗೆ ವರ್ಗಾಯಿಸಿದ್ದಾರೆ. ವಸತಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ಒದಗಿಸುತ್ತಿಲ್ಲ. ಓಬ್ಬವ್ವ ಆತ್ಮರಕ್ಷಣೆ ಯೋಜನೆ ಈಗ ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾತ್ರ, ಗಂಗಾ ಕಲ್ಯಾಣ ಯೋಜನೆ ಕುಂಠಿತವಾಗಿದೆ. ಮುಸ್ಲಿಂ ಓಲಿಕೆ ನೀತಿ ಅನುರಿಸುತ್ತಿದೆ. ಬೆಲೆ ಏರಿಕೆ ಮಾಡಿ ಜನರನ್ನು ಹೈರಾಣ ಮಾಡಿದೇ, ವಾಲ್ಮೀಕಿ ಅಭಿವೃದ್ಧಿ ನಿಗಮ, ಕಾರ್ಮಿಕ ಇಲಾಖೆ, ಅಬಕಾರಿ ಇಲಾಖೆಯಲ್ಲಿ ಸಾವಿರಾರು ಕೋಟಿ ರೂ. ಹಗರಣ ನಡೆದಿದೆ. ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಜನಾಕ್ರೋಶ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ಪದಾಽಕಾರಿಗಳಾದ ಬಸವರಾಜ ಹುನಗುಂದ, ಕಲ್ಲಪ್ಪ ಭಗವತಿ, ಮಲ್ಲೇಶ ಬಿಜಾಪುರ, ಉಮೇಶ ಹಂಚಿನಾಳ, ಶ್ರೀಧರ ಬಿ. ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net