ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

6hgr1
Published on

ಹಲಗೂರು: ಇಲ್ಲಿನ ಚನ್ನಪಟ್ಟಣ ರಸ್ತೆಯಲ್ಲಿರುವ ಜೆ.ಜೆ.ಪಬ್ಲಿಕ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 13 ವಿದ್ಯಾರ್ಥಿಗಳನ್ನು ಮಂಗಳವಾರ ಅಭಿನಂದಿಸಲಾಯಿತು.

ಕೆ.ಧನುಷ್, ಎಚ್.ಎಸ್.ಲಿಖಿತ್‌ಕುಮಾರ್, ಬಿ.ಎಸ್.ದಿಗಂತ್‌ಗೌಡ, ಜೆ.ಅಮೃತ್, ಎನ್.ವಿ.ಮನೋಜ್ಞ, ಎಂ.ಜಿ.ಮಾನಸಾ, ಎಸ್.ಅರುಣ್, ಬಿ.ವಿ.ಅಭಯ್‌ಗೌಡ, ಎಚ್.ಆರ್.ವಿಭವ್, ಎಚ್.ಕೆ.ಮೋಹಶ್ರೀ, ಎಂ.ಆರ್.ಪ್ರೇರಣಾ, ಪುಣ್ಯಶ್ರೀ, ಕೆ.ವಿ.ಮಾನಸಾ ಸನ್ಮಾನಕ್ಕೆ ಭಾಜನರಾದ ವಿದ್ಯಾರ್ಥಿಗಳು.

ಪ್ರಾಂಶುಪಾಲೆ ಲಲಿತಾಂಬಾ ಸೋಮಶೇಖರ್ ಮಾತನಾಡಿ, 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಮ್ಮ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದು ಶೇ.95 ಫಲಿತಾಂಶ ಬರಲು ಸಹಕಾರಿಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದರು.

15 ಅತ್ಯುನ್ನತ ಶ್ರೇಣಿಯಲ್ಲಿ, 15 ಉನ್ನತ ಶ್ರೇಣಿ ಹಾಗೂ 22 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ. ಇದಕ್ಕೆಲ್ಲ ಕಾರಣ ವಿದ್ಯಾರ್ಥಿಗಳ ಶ್ರಮ, ಪಾಲಕರ ಸಹಕಾರ, ಶಿಕ್ಷಕರ ಸಲಹೆ ಸೂಚನೆ ಮೇರೆಗೆ ಹೆಚ್ಚು ಅಂಕ ಬರಲು ಸಹಕಾರಿಯಾಗಿದೆ. ಕೆ.ಧನುಶ್ ಎಂಬ ವಿದ್ಯಾರ್ಥಿ 625 ಅಂಕಕ್ಕೆ 620 ಅಂಕ ಪಡೆದಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿದ 620 ಅಂಕ ಪಡೆದ ವಿದ್ಯಾರ್ಥಿ ಕೆ.ಧನುಶ್ ಮಾತನಾಡಿ,ನಮ್ಮ ಶಿಕ್ಷಕ ವೃಂದ ನೀಡುತ್ತಿದ್ದ ಬೋಧನೆ ಹಾಗೂ ನಾನು ಸಮಯವನ್ನು ವ್ಯರ್ಥ ಮಾಡದೆ ಪಠ್ಯ ಪುಸ್ತಕಗಳನ್ನು ಹೆಚ್ಚು ಓದುತ್ತಿದ್ದರಿಂದ ಇಷ್ಟು ಅಂಕ ಬರಲು ಸಾಧ್ಯವಾಗಿತ್ತು ಎಂದು ತನ್ನ ಅನಿಸಿಕೆಯನ್ನು ಹಂಚಿಕೊಂಡನು.

ಶಾಲೆಯ ಸಂಸ್ಥಾಪಕ ಸೋಮಶೇಖರ್, ಪ್ರಾಂಶುಪಾಲೆ ಲಲಿತಾಂಬಾ, ಮುಖ್ಯ ಶಿಕ್ಷಕಿ ಶಿವಮಣಿ ಹಾಗೂ ಶಿಕ್ಷಕವೃಂದ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net