

ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆ ಅಡಿ ಫಲಾನುಭವಿಗೆ ನೀಡಿದ್ದ ಜಮೀನನ್ನು ಅಕ್ರಮವಾಗಿ ನೋಂದಣಿ ಮಾಡಿಕೊಂಡ ಯಡ್ರಾಮಿ ತಾಲೂಕಿನ ಮುತ್ತುಕೋಡದ ರಾಜಶೇಖರ ಭೀಮರಾಯ ವಿರುದ್ಧ ನೆಲ್ಲೋಗಿ ಠಾಣೆಯಲ್ಲಿ ದೂರು ದಾಖಲಾಗಿದೆ. ಭೂ ಒಡೆತನ ಯೋಜನೆ ಅಡಿ ೨೦೧೭ರಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಭೂಮಿ ನೀಡುವುದಾಗಿ ಒಪ್ಪಿಗೆ ನೀಡಿದ್ದು, ೨೦೨೦ರಲ್ಲಿ ಫಲಾನುಭವಿ ಮುತ್ತಕೋಡ ಗ್ರಾಮದ ಆರತಿ ನಿಂಗು ಅವರ ಹೆಸರಿಗೆ ನೋಂದಣಿ ಮಾಡಲಾಗಿತ್ತು. ಅದರಂತೆ ನಿಗಮದಿಂದ ರಾಜಶೇಖರ್‌ಗೆ ೬,೫೫,೭೦೦ ರೂ. ಪಾವತಿಸಲಾಗಿತ್ತು. ೨೦೨೪ರ ಫೆಬ್ರವರಿಯಲ್ಲಿ ರಾಜಶೇಖರ ಭೀಮರಾಯನು ಮಹಿಳೆಗೆ ವಂಚಿಸಿ, ಅವರ ಗುರುತಿನ ಚೀಟಿ ದುರುಪಯೋಗ ಮಾಡಿ, ಜಮೀನು ತನ್ನ ಹೆಸರಿಗೆ ಮರು ನೋಂದಣಿ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ನಿಗಮದ ಜಿ¯್ಲÁ ವ್ಯವಸ್ಥಾಪಕ ಮರಲಿಂಗ ಹೊನಗುಂಟಿಕರ್ ನೀಡಿದ ದೂರಿನ ಅನ್ವಯ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.