

ಕಲಬುರಗಿ: ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಶಿಷ್ಟ ಸಮುದಾಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತ ೭೪ ಲ್ಯಾಪ್‌ಟಾಪ್ ವಿತರಿಸಲಾಯಿತು.
ಅಧ್ಯP್ಷÀತೆ ವಹಿಸಿದ್ದ ವಿಟಿಯು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಬಸವರಾಜ ಗಾದ್ಗೆ ಮಾತನಾಡಿ, ಈ ಭಾಗದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ೭೪ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗುವಂತೆ, ಕಲಿಕಾ ಪದ್ದತಿಯಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸಿ ಈ ನಿರ್ಧಾರ ತೆಗೆದುಕೊಂಡಿದೆ. ಇದರ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಉತ್ತಮ ಶಿP್ಷÀಣ ಮತ್ತು ಅಭಿವೃದ್ಧಿ ಹೊಂದಿ ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯದಲ್ಲಿರುವ ನಾಲ್ಕು ವಿಟಿಯು ಪ್ರಾದೇಶಿಕ ಕೇಂದ್ರಗಳ ಪೈಕಿ ಅತಿ ಹೆಚ್ಚು ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳು ಕಲಬುರಗಿ ಕೇಂದ್ರದಲ್ಲಿ ಅಧ್ಯಯನ ಮಾಡುತ್ತಿz್ದÁರೆ. ಅವರ ಅಧ್ಯಯನಕ್ಕೆ ನೆರವಾಗಲು ಉಚಿತ ಲ್ಯಾಪ್‌ಟಾಪ್ ವಿತರಣೆ ಯೋಜನೆಯನ್ನು ಕುಲಪತಿ ಡಾ.ಎಸ್. ವಿದ್ಯಾಶಂಕರ ಮಾರ್ಗದರ್ಶನದ ಮೇರೆಗೆ ಅನುಷ್ಠಾನಗೊಳಿಸಲಾಗುತ್ತಿದೆ. ೨೦೧೬ರಿಂದಲೇ ವಿಟಿಯುನಲ್ಲಿ ಉಚಿತ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುತ್ತಿದೆ ಎಂದರು.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭಿಯೋಜಕ ಪ್ರೊ.ರಾಹುಲ್ ಮೂಲಭಾರತಿ, ಶೈP್ಷÀಣಿಕ ವಿಭಾಗ ವಿಶೇಷಾಧಿಕಾರಿ ಡಾ. ಶಂಭುಲಿAಗಪ್ಪ, ಅವಿಷ್ಕಾರ್ ಮತ್ತು ಬೆಳವಣಿಗೆ ವಿಶೇಷಾಧಿಕಾರಿ ಡಾ.ಶುಭಾಂಗಿ ಪಾಟೀಲï, ಕೌಶಲ ಅಭಿವೃದ್ಧಿ ಅಭಿಯೋಜಕ ಡಾ.ಶೈಲಜಾ ಖೇಣಿ, ಸಿವಿಲ್ ಇಂಜಿನಿಯರಿAಗ್ ವಿಭಾಗದ ಸಂಯೋಜಕ ಡಾ.ಬ್ರಿಜ್‌ಭೂಷಣ, ಎಂಎಡಿ ವಿಭಾಗದ ಸಂಯೋಜಕ ಡಾ.ಬಾಬುರೆಡ್ಡಿ, ಡಾ.ಮಹಮದ್ ಅಬ್ದುಲ್ ವಹೀದ್, ಡಾ.ಸತೀಶ ಉಪಳಾಂವಕರ್ ಇತರರಿದ್ದರು.