ಎಸ್ಸರ‍್ಪಿ ಸಮೂಹ ಸಂಸ್ಥೆ ಪಕ್ಷಾತೀಯ, ಜಾತ್ಯಾತೀತ, ಧರ್ಮಾತೀತ

JOMD1636
ಬಾಡಗಂಡಿ ಗ್ರಾಮದ ಎಸ್.ಆರ್.ಪಿ. ಮೆಡಿಕಲ್ ಕಾಲೇಜ್ ಆವರಣದಲ್ಲಿ ಶನಿವಾರ ನಡೆದ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ರಜತ ಮಹೋತ್ಸವ ಹಾಗೂ ಸಮೂಹ ಸಂಸ್ಥೆಗಳ ವಿವಿಧ ಕಟ್ಟಡ ಉದ್ಘಾಟನೆ, ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿದರು.
Published on

ಬಾಗಲಕೋಟೆ: ಎಸ್.ಆರ್.ಪಾಟೀಲ ಸಮೂಹ ಸಂಸ್ಥೆ ಅಡಿಯಲ್ಲಿ ೧೬ ಅಂಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇದರ ಅಡಿಯಲ್ಲಿ ಅಂದಾಜು ೧೦ ಸಾವಿರ ಜನರಿಗೆ ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷವಾಗಿ ಉದ್ಯೋಗ ನೀಡಿದೆ. ನಮ್ಮ ಸಂಸ್ಥೆ ಪಕ್ಷಾತೀತ, ಜಾತ್ಯಾತೀತ ಹಾಗೂ ಧರ್ಮಾತೀತವಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.

ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದ ಎಸ್.ಆರ್.ಪಿ. ಮೆಡಿಕಲ್ ಕಾಲೇಜ್ ಆವರಣದಲ್ಲಿ ಶನಿವಾರ ನಡೆದ ಸಮೂಹ ಸಂಸ್ಥೆಯ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸೇರಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದರು.

ಬೀಳಗಿ ತಾಲೂಕಿನ ೬೫ ಗ್ರಾಮಗಳಲ್ಲಿ ೧೩ ಗ್ರಾಮಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಗ್ರಾಮಗಳು ಆಲಮಟ್ಟಿ ಜಲಾಶಯಕ್ಕೆ ಮುಳುಗಡೆ ಬಾಽತವಾಗಿವೆ. ನಮ್ಮದು ತ್ಯಾಗಿಗಳ ತಾಲೂಕು. ಸಂತ್ರಸ್ತರ ಆರ್ಥಿಕ ವಹಿವಾಟಿನ ಅನುಕೂಲಕ್ಕಾಗಿ ಬೀಳಗಿ ಪಟ್ಟಣ ಬ್ಯಾಂಕ್ ಆರಂಭ ಮಾಡಲಾಯಿತು. ಆರಂಭದಲ್ಲಿ ೧೧ ಲಕ್ಷ ಶೇರು ಬಂಡವಾಳದಿAದ ಆರಂಭವಾಗಿದ್ದ ಸಂಸ್ಥೆ ಇವತ್ತು ೯೦೦ ಕೋಟಿ ರೂ. ವಹಿವಾಟು ನಡೆಸುತ್ತಿದೆ ಎಂದರು.

ಬ್ಯಾ0ಕಿನ ರಜತ ಮಹೋತ್ಸವ ಹಿನ್ನಲೆಯಲ್ಲಿ ಬ್ಯಾಂಕಿನ ವತಿಯಿಂದ ೨೫ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆಗಳನ್ನು ಹಾಗೂ ಮಹಿಳೆಯರಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಅನೇಕ ಸಂಸ್ಥೆಗಳು ಒಂದು ದಶಕದ ಬಳಿಕ ಉಳಿಯುವುದು ಕಷ್ಟವಾಗಿದೆ. ಆದರೆ, ಬೀಳಗಿ ಪಟ್ಟಣ ಬ್ಯಾಂಕ್ ಆರಂಭದಿAದಲೂ ವರ್ಷದಿಂದ ವರ್ಷಕ್ಕೆ ಠೇವಣಿ ಮೊತ್ತ ಹೆಚ್ಚುತ್ತಲೇ ಬಂದಿದೆ ಎಂದು ತಿಳಿಸಿದರು.

ಹಾಗೆಯೇ ನಮ್ಮದೇ ಸಮೂಹ ಸಂಸ್ಥೆಯ ಬಾಪೂಜಿ ಪತ್ತಿನ ಸಹಕಾರಿ ಸಂಘಕ್ಕೆ ನಿನ್ನೆಯಷ್ಟೆ ಕೇಂದ್ರ ಸರ್ಕಾರ ಮಲ್ಟಿ ಸ್ಟೇಟ್ ಕೋ.ಆಪ್.ಸೊಸಾಯಿಟಿ ಎಂದು ಆದೇಶಿಸಿದೆ. ಬಾಪೂಜಿ ಬ್ಯಾಂಕ್ ಇಂದು ೧೩೦೦ ಕೋಟಿ ರೂ. ಠೇವಣಿ ಹೊಂದಿದೆ ಎಂದು ಸಿಹಿ ಸುದ್ದಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net