

ಕಲಬುರಗಿ: ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ `ಅಭಿಜ್ಞಾನ-೨೦೨೪' ಅಂತರ ಕಾಲೇಜುಗಳ ಸಾಂಸ್ಕೃತಿಕ ಉತ್ಸವದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಎಸ್.ಬಿ. ವಿಜ್ಞಾನ ಕಾಲೇಜು ಉತ್ತಮ ಪ್ರದರ್ಶನ ತೋರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ರೇಷ್ಮಿ ಶಿಕ್ಷಣ ಚಾರಿಟೇಬಲ್ ಟ್ರಸ್ಟ್ ಹಾಗೂ ಎಸ್‌ಬಿ ಕಲಾ ಕಾಲೇಜು ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿವೆ.
ನಗರದ ಶರಣಬಸವ ವಿಶ್ವವಿದ್ಯಾಲಯ ಕ್ಯಾಂಪಸ್‌ನ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ರಾಜ್ಯದ ನಂ.೧ ದಿನಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗದಡಿ ಹಮ್ಮಿಕೊಂಡ ಸ್ಪರ್ಧೆಗಳಲ್ಲಿ ವಿಜೇತರು ಬಹುಮಾನ ಸ್ವೀಕರಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಗೆಲುವು ಸಾಧಿಸಿದವರು: ರಸಪ್ರಶ್ನೆ: ರೇಷ್ಮಿ ಕಾಲೇಜ್ (ಪ್ರ), ಶರಣಬಸವ ವಿವಿ (ದ್ವಿ). ಭಾಷಣ: ರೇಷ್ಮಿ (ಪ್ರ), ಎಸ್‌ಬಿ ವಿಜ್ಞಾನ ಕಾಲೇಜು (ದ್ವಿ). ಪೋಸ್ಟರ್ ಮೇಕಿಂಗ್: ಜಿಎಫ್‌ಜಿಸಿ (ಪ್ರ), ಎಸ್‌ಬಿ ವಿಜ್ಞಾನ (ದ್ವಿ). ಸ್ಕೆಚ್ಚಿಂಗ್, ಡ್ರಾಯಿಂಗ್: ಜಿಎಫ್‌ಜಿಸಿ (ಪ್ರ), ವಿಶ್ವನಾಥ ರೆಡ್ಡಿ (ದ್ವಿ). ಡೂಡಲ್ ಆರ್ಟ್: ಎಸ್‌ಬಿ ವಿಜ್ಞಾನ (ಪ್ರ), ಶರಣಬಸವ ವಿವಿ ಎಂಟಿಎ (ದ್ವಿ). ಫೋಟೋಗ್ರಫಿ: ಎಸ್‌ಬಿ ವಿಜ್ಞಾನ (ಪ್ರ), ಎಸ್‌ಬಿ ವಿವಿ ಎಂಟಿಎ ತಂಡ (ದ್ವಿ). ಫೇಸ್ ಪೇಂಟಿAಗ್: ಎಸ್‌ಬಿ ವಿಜ್ಞಾನ (ಪ್ರ-ದ್ವಿ). ಶಾಸ್ತಿçÃಯ ಸಂಗೀತ: ಎಸ್‌ಬಿ ಕಲಾ ಕಾಲೇಜು (ಪ್ರ-ದ್ವಿ). ಜಾನಪದ ಗೀತೆ: ಎಸ್‌ಬಿ ಕಲಾ (ಪ್ರ), ರೇಷ್ಮಿ ಕಾಲೇಜ್ (ದ್ವಿ). ಶಾಸ್ತಿçÃಯ ವಾದ್ಯ: ಎಸ್‌ಬಿ ಕಲಾ ಕಾಲೇಜು (ಪ್ರ), ಎಸ್‌ಬಿ ವಿಜ್ಞಾನ ಕಾಲೇಜು (ದ್ವಿ). ಪಾಶ್ಚಾತ್ಯ ಗೀತೆ: ಎಸ್‌ಬಿ ವಿಜ್ಞಾನ (ಪ್ರ), ರೇಷ್ಮಿ ಕಾಲೇಜು (ದ್ವಿ). ಶಾಸ್ತಿçÃಯ ನೃತ್ಯ: ಎಸ್‌ಬಿ ವಾಣಿಜ್ಯ ಕಾಲೇಜು (ಪ್ರ), ಎಸ್‌ಬಿ ವಿವಿ ಬಿಸಿಎ (ದ್ವಿ). ಜಾನಪದ ನೃತ್ಯ: ಗೋದುತಾಯಿ ಕಾಲೇಜು (ಪ್ರ), ಎಸ್‌ಬಿ ವಾಣಿಜ್ಯ ಕಾಲೇಜು (ದ್ವಿ). ಸ್ಟಾÈಂಡ್‌ಪ್ ಕಾಮಿಡಿ: ಎಸ್‌ಬಿ ವಿಜ್ಞಾನ (ಪ್ರ), ಶರಣಬಸವ ವಿವಿ (ದ್ವಿ). ರ‍್ಯಾಂಪ್ ವಾಕ್: ವಿಜಿ ಮಹಿಳಾ ಕಾಲೇಜು (ಪ್ರ), ಎಸ್‌ಬಿ ವಿಜ್ಞಾನ, ಶರಣಬಸ ವಿವಿ ತಂಡ (ದ್ವಿ).
ವಿಜೇತರಿಗೆ ಡಿಸಿ ಫೌಜಿಯಾ ತರನ್ನುಮ್, ಶರಣಬಸ ವಿವಿ ಕುಲಪತಿ ಅನೀಲಕುಮಾರ ಬಿಡವೆ, ಕುಲಸಚಿವ ಡಾ.ಎಸ್.ಜಿ. ಡೊಳ್ಳೇಗೌಡರ್, ಪ್ರಾಂಶುಪಾಲ ಬಿ.ರಾಮಕೃಷ್ಣ ರೆಡ್ಡಿ ಪ್ರಶಸ್ತಿ ವಿತರಿಸಿದರು. ಪ್ರಮುಖರಾದ ಡಾ.ಟಿ.ವಿ. ಬಿರಾದಾರ, ಡಾ.ಓಂಪ್ರಕಾಶ, ಡಾ.ಶೈಲಾ ಎಚ್., ಪ್ರದೀಪ ಡಿ., ಡಾ.ರಮೇಶ ಕೆ.ಬಿ., ಪವನ, ತನುಜಾ ಮಣ್ಣೂರ, ಸುಭಾಷ ಮೇತ್ರೆ ಇತರರಿದ್ದರು. ಪಲ್ಲವಿ, ವರ್ಷಿಣಿ ನಿರೂಪಣೆ ಮಾಡಿದರು. ಲಕ್ಷಿö್ಮÃ ಪ್ರಾರ್ಥಿಸಿದರು. ನಗರದ ೧೧ ವಿವಿಧ ಕಾಲೇಜಿನ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ೧೧ ವಿವಿಧ ಉದ್ಯಮ, ಸಂಸ್ಥೆಗಳು ಉತ್ಸವಕ್ಕೆ ಸಾಥ್ ನೀಡಿದ್ದವು.