

ಕಲಬುರಗಿ: ಸಂಸತ್‌ನಲ್ಲಿ ಪರಿಶಿಷ್ಟ ವರ್ಗ ಮೀಸಲಾತಿ ಚರ್ಚೆ ಸಂದರ್ಭದಲ್ಲಿ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವ ಬಗ್ಗೆ ಮಾತನಾಡುವ ಅವಕಾಶವಿದ್ದರೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅಂದು ಬಹಿಷ್ಕಾರ ಹಾಕಿ ಹೊರನಡೆದದ್ದು ಕೋಲಿ ಸಮಾಜಕ್ಕೆ ಮಾಡಿದ ಮಹಾಮೋಸ ಎಂದು ಸಂಸದ ಡಾ.ಉಮೇಶ ಜಾಧವ್ ಆರೋಪಿಸಿದರು.
ಚಿತ್ತಾಪುರ ವಿಧಾನಸಭೆ ಕ್ಷೇತ್ರದ ಭಂಕೂರ ಮತ್ತು ರಾವೂರ ಮಹಾಶಕ್ತಿ ಕೇಂದ್ರಗಳಲ್ಲಿ ಸೋಮವಾರ ಆಯೋಜಿಸಿದ್ದ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೋಲಿ ಸಮುದಾಯ ಎಸ್‌ಟಿಗೆ ಸೇರಿಸುವ ವಿಷಯ ಸಂಸತ್ತಿನಲ್ಲಿ ಚರ್ಚೆಗೆ ಬಂದಾಗ ನಾನು ದಾಖಲೆಸಮೇತ ವಿಷಯ ಪ್ರಸ್ತಾಪಿಸಿರುವುದು ಪಾರ್ಲಿಮೆಂಟ್ ಕಡತದಲ್ಲಿ ದಾಖಲಾಗಿದೆ. ಆದರೆ ಮಲ್ಲಿಕಾರ್ಜುನ ಖರ್ಗೆ ಈ ಚರ್ಚೆಯ ವೇಳೆ ರಾಜ್ಯಸಭೆಯಲ್ಲಿ ಪಾಲ್ಗೊಳ್ಳದೆ ಬಹಿಷ್ಕಾರ ಹಾಕಿದ್ದರಿಂದ ಕೋಲಿ ಸಮುದಾಯದವರಿಗೆ ನ್ಯಾಯ ಒದಗಿಸುವ ವಿಶೇಷ ಅವಕಾಶ ಕಳೆದುಕೊಂಡರು. ಈ ಬಗ್ಗೆ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಖರ್ಗೆ ನಡೆಯನ್ನು ತೀವ್ರವಾಗಿ ಖಂಡಿಸಿದ್ದರು ಎಂದರು.
ಕೋಲಿ ಸಮಾಜ ಎಸ್‌ಟಿಗೆ ಸೇರಿಸಲು ಜಾಧವ್ ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಿರುವವರು ಎಸ್‌ಟಿಗೆ ಸೇರಿಸುವ ವಿಚಾರ ಪ್ರಸ್ತಾಪ ಮಾಡುವ ಅವಕಾಶ ಬಳಸದೆ ರಾಜ್ಯಸಭೆಯಿಂದ ಹೊರನಡೆದ ಖರ್ಗೆ ಅವರೇ ಸಮುದಾಯಕ್ಕೆ ಉತ್ತರ ನೀಡಬೇಕು. ಈ ಬಗ್ಗೆ ಶರದ್ ಪವಾರ್ ಪುತ್ರಿ ಸಂಸದೆ ಸುಪ್ರಿಯಾ ಸೋಲೆ ಸೇರಿ ಅನೇಕ ಸಂಸದರು ಅದ್ಭುತವಾಗಿ ವಿಷಯ ಮಂಡಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋಲಿ ಸಮುದಾಯದ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ಕೇವಲ ಅನುಕಂಪ ಪಡೆಯಲು ಕಾಂಗ್ರೆಸ್ ಇಂಥ ನಾಟಕ ಮಾಡುತ್ತಿದೆ. ಹಿಂದುಳಿದ ವರ್ಗಗಳ ಬಗ್ಗೆ ನಿಜವಾದ ಕಾಳಜಿ ಬಿಜೆಪಿಗೆ ಇದೆ. ಕಾಂಗ್ರೆಸ್ ೬೦ ವರ್ಷಗಳಲ್ಲಿ ಮಾಡಿದ ಕೆಲಸದ ಲೆಕ್ಕ ಕೊಡಲಿ. ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
೧೯೭೨ರಿಂದ ಬರಗಾಲ ಕಾಡುತ್ತಿರುವ ನಮ್ಮ ಭಾಗದಲ್ಲಿ ಎಂಎಸ್‌ಕೆ ಮಿಲï, ಶಹಾಬಾದ್ ಸಿಮೆಂಟ್ ಕಾರ್ಖಾನೆಗಳು ಬಂದ್ ಆಗಿದ್ದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಮುಂಬೈ, ಬೆಂಗಳೂರು, ಹೈದರಾಬಾದ್‌ಗೆ ವಲಸೆ ಹೋಗುವುದು ಹೆಚ್ಚಾಗಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಒಂದು ಲP್ಷÀ ನೇರ ಮತ್ತು ಎರಡು ಲP್ಷÀ ಪರೋP್ಷÀ ಉದ್ಯೋಗ ಸೃಷ್ಟಿಯ ಮೆಗಾ ಜವಳಿ ಪಾರ್ಕ್ ಕೊಡುಗೆ ನೀಡಿz್ದÁರೆ. ೧೫೭೫ ಕೋಟಿ ವೆಚ್ಚದ ಸೂರತ್-ಚೆನ್ನೆÊ ಭಾರತ್ ಮಾಲಾ ರಸ್ತೆ, ೨೦೦ ಕೋಟಿ ವೆಚ್ಚದಲ್ಲಿ ಅಮೃತ ಭಾರತ್ ಸ್ಟೇಷನ್ ಅಭಿವೃದ್ಧಿ ಅಡಿ ವಾಡಿ, ಶಹಾಬಾದ್, ಕಲಬುರಗಿ ಮತ್ತು ಸ್ಟೇಷನ್ ಗಾಣಗಾಪುರ ರೈಲು ನಿಲ್ದಾಣಗಳ ಅಭಿವೃದ್ಧಿ, ೬೮ ಕೋಟಿ ವೆಚ್ಚದಲ್ಲಿ ಕಾಗಿಣಾ ನದಿಗೆ ಮಳಖೇಡದಲ್ಲಿ ಸೇತುವೆ, ಹುಮನಾಬಾದ್ ಬೇಸ್‌ನಿಂದ ರಾಮ ಮಂದಿರವರೆಗೆ ೫೮ ಕೋಟಿ ವೆಚ್ಚದ ಸರ್ವೀಸ್ ರಸ್ತೆ, ನಂದೂರ(ಕೆ) ಕೈಗಾರಿಕಾ ಪ್ರದೇಶದಲ್ಲಿ ೨೫೦ ಕೋಟಿ ವೆಚ್ಚದಲ್ಲಿ ಗತಿಶಕ್ತಿ ಯೋಜನೆಯಡಿ ಬಿಪಿಸಿಎಲï ಕಂಪನಿ ಪೆಟ್ರೋಲಿಯಂ ತೈಲಾಗಾರ ಸಂಗ್ರಹ ಮತ್ತು ಅಲ್ಲಿವರೆಗೆ ರೈಲು ಹಳಿ ವಿಸ್ತರಣೆ, ಇಎಸ್‌ಐ ಆಸ್ಪತ್ರೆಯಲ್ಲಿ ರಕ್ತ ನಿಧಿ ಕೇಂದ್ರ, ವಿವಿಧ ಕೋರ್ಸ್ಗಳ ಆರಂಭ, ದ್ರವೀಕೃತ ಆಮ್ಲಜನಕ ಘಟಕ ಪ್ರಾರಂಭಿಸಲಾಗಿದೆ ಎಂದು ವಿವರಿಸಿದರು.
ಸಂಸದರ ನಿಧಿ ಶೇ.೯೯.೯ ವಿನಿಯೋಗಿಸಲಾಗಿದೆ. ಲೋಕಸಭೆಯಲ್ಲಿ ೨೮ ಸಂಸದರ ಪೈಕಿ ಅತಿ ಹೆಚ್ಚು ಪ್ರಶ್ನೆ ಮತ್ತು ಚರ್ಚೆಯಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಕಲಬುರಗಿ ಸಂಸದರಿಗೆ ಸಲ್ಲುತ್ತದೆ. ಹೀಗೆ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡರೂ ಕಾಂಗ್ರೆಸಿಗರಿಗೆ ಮಾತ್ರ ಯಾವುದೂ ಕಣ್ಣಿಗೆ ಕಾಣುತ್ತಿಲ್ಲ. ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮತ್ತು ಎರಡನೇ ಅವಧಿಗೆ ನನ್ನನ್ನು ಚುನಾಯಿಸಿದರೆ ಬಡ್ಡಿಸಮೇತ ಜನಸೇವೆ ಮಾಡಲು ಸಿದ್ಧ ಎಂದು ಡಾ.ಉಮೇಶ ಜಾಧವ್ ವಾಗ್ದಾನ ಮಾಡಿದರು.