ಎಸ್.ಡಿ.ಪಿ.ಐ.ಯಿಂದ ರಕ್ತದಾನ ಶಿಬಿರ

unnamed
Published on
ಬಾಗಲಕೋಟೆ: ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬಾಗಲಕೋಟ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಇಂದು ಬಾಗಲಕೋಟೆ ನಗರದಲ್ಲಿ ವಿಶ್ವ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಮಾನವೀಯತೆಯ ಪರಮ ರೂಪವಾದ ರಕ್ತದಾನ ಕ್ರಿಯೆಗೆ ಬಾಗಲಕೋಟೆಯ ಜನ ಉತ್ತಮ ಪ್ರತಿಕ್ರಿಯೆ ನೀಡಿದರು. "ಒಂದು ಯುನಿಟ್ ರಕ್ತವು ಮೂವರು ಜನರ ಜೀವವನ್ನು ಉಳಿಸಬಲ್ಲದು" ಎಂಬ ಸದ್ದಿಲ್ಲದ ಸಂದೇಶವನ್ನು ಸಾರಿದ ಶಿಬಿರದಲ್ಲಿ ಹಲವಾರು ಯುವಕರು, ಸಮಾಜ ಸೇವಕರು ಪಾಲ್ಗೊಂಡು ರಕ್ತದಾನ ಮಾಡಿದ್ದಾರೆ.
ಅಪಘಾತ, ಶಸ್ತ್ರಚಿಕಿತ್ಸೆ, ಗರ್ಭಾವಸ್ಥೆಯ ತೀವ್ರ ಪರಿಸ್ಥಿತಿಗಳು, ರಕ್ತಹೀನತೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ರಕ್ತದ ಅವಶ್ಯಕತೆ ಇದೆ. ಆರೋಗ್ಯವಂತ ವ್ಯಕ್ತಿಯು ವರ್ಷದಲ್ಲಿ ಕನಿಷ್ಠ ಮೂರು ಅಥವಾ ನಾಲ್ಕು ಬಾರಿ ಸುರಕ್ಷಿತವಾಗಿ ರಕ್ತದಾನ ಮಾಡಬಹುದಾಗಿದೆ. ಇದರಿಂದ ದಾತನ ಆರೋಗ್ಯಕ್ಕೂ ಯಾವುದೇ ಅಪಾಯವಿಲ್ಲ ಎಂಬ ಅರಿವು ಈ ಶಿಬಿರದ ಮೂಲಕ ಜನರಲ್ಲಿ ಬಿತ್ತಲಾಯಿತು.
ಈ ಸಂದರ್ಭದಲ್ಲಿ ವಿಧಾನಸಭಾ  ಕ್ಷೇತ್ರದ ಅಧ್ಯಕ್ಷ ಖಾಸಿಂ ಗೂಳಸಂಗಿ, ಮಹಬೂಬ ಹಡಗಲಿ, ಸದಾಂ ಮುಲ್ಲಾ, ಅಲ್ತಾಫ್ ಮದರಿ ಮತ್ತು ಪಕ್ಷದ ಹಲವಾರು ಸದಸ್ಯರು, ಸ್ಥಳೀಯ ಆರೋಗ್ಯ ಸಿಬ್ಬಂದಿ,  ಸ್ವಯಂ ಸೇವಕರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net