ಎಸ್.ಎನ್.ಆರ್.ಆಸ್ಪತ್ರೆಯ ಆವರಣದಲ್ಲಿನ ಅಂಗಡಿ ಮಳಿಗೆಗಳು / ಪ್ರಭಾವಿಗಳ ಒತ್ತಡಕ್ಕೆ ಮಣಿದು ಕಡಿಮೆ ಬಾಡಿಗೆಗೆ ಪಡೆದ ಮಳಿಗೆಗಳು / ದುಬಾರಿ ಬೆಲೆಗೆ ಮತ್ತೊಬ್ಬರಿಗೆ ಬಾಡಿಗೆಗೆ / ಆಸ್ಪತ್ರೆಯ ಆಡಳಿತ ಮಂಡಳಿಗೆ ನಷ್ಟ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಪ್ರಭಾವಿಗಳು ಸರ್ಕಾರದ ಸ್ವತ್ತನ್ನು ನೂರು ರೂಪಾಯಿ ಬಾಡಿಗೆಗೆ ಪಡೆದು ಅದನ್ನು ಬೇರೆಯವರಿಗೆ ಸಾವಿರಾರು ರೂಪಾಯಿಗಳ ಬಾಡಿಗೆ ಪಡೆದು ಲಾಭ ಗಳಿಸುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ತಮಗೇನು ಸಂಬAಧವಿಲ್ಲ ಎಂಬAತೆ ವರ್ತಿಸುತ್ತಿದ್ದಾರೆ.

ನಗರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯ ಆವರಣದಲ್ಲಿ ೫ ಚಿಲ್ಲರೆ ಅಂಗಡಿಗಳು ಮತ್ತು ೧ ನಂದಿನಿ ಪಾರ್ಲರ್ ಇದ್ದು, ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕೆಲ ವ್ಯಕ್ತಿಗಳು ಮತ್ತು ಹೊರಗಿನವರ ಪ್ರಭಾವ ಬಳಸಿ ಆಸ್ಪತ್ರೆಯ ಆಡಳಿತ ಮಂಡಳಿಯಿAದ ಪ್ರತಿ ಅಂಗಡಿಗೆ ಮಾಸಿಕ ಕೇವಲ ೧೦೦ ರೂ.ಗಳ ಬಾಡಿಗೆ ಲೆಕ್ಕದಲ್ಲಿ ಪಡೆದುಕೊಂಡು ಅವರು ಬೇರೆಯವರಿಗೆ ಮಾಸಿಕ ಪ್ರತಿ ಅಂಗಡಿಗೆ ೨೦ ರಿಂದ ೩೦ ಸಾವಿರ ರೂ.ಗಳವರೆಗೂ ಬಾಡಿಗೆಗೆ ಅಂಗಡಿಗಳನ್ನು ನೀಡಿ ಬಾಡಿಗೆ ಪಡೆಯುತ್ತಿದ್ದಾರೆ.

ಇದು ಎಸ್.ಎನ್.ಆರ್.ಆಸ್ಪತ್ರೆ ಒಂದಕ್ಕೇ ಸೀಮಿತವಾಗಿಲ್ಲ. ಇದೇ ರೀತಿ ನಗರಸಭೆ ಸೇರಿದಂತೆ ಸರ್ಕಾರಿ ಕಛೇರಿಗಳ ಮುಂಭಾಗದಲ್ಲಿರುವ ಖಾಲಿ ಜಾಗ ಹಾಗೂ ಮಳಿಗೆಗಳನ್ನು ಕಡಿಮೆ ಬಾಡಿಗೆ ರೂಪದಲ್ಲಿ ಸುಮಾರು ವರ್ಷಗಳ ಹಿಂದೆ ಪಡೆದು ಈಗ ಅದರ ಶೇ.೧೦ ಪಟ್ಟರಷ್ಟು ಹೆಚ್ಚಳ ಮಾಡಿ ಬೇರೆಯವರಿಗೆ ಬಾಡಿಗೆ ನೀಡಿ, ಲಾಭ ಪಡೆಯುತ್ತಿದ್ದಾರೆ.

ಬಾಕ್ಸ್

ಆಸ್ಪತ್ರೆಯ ಆವರಣದಲ್ಲಿ ಎರಡು ನಗು ಮಗು ಅಂಗಡಿಗಳನ್ನು ಖಾಸಗಿಯವರು ನಡೆಸುತ್ತಿದ್ದು, ಬಾಣಂತಿಯರು ಮತ್ತು ಮಕ್ಕಳಿಗೆ ಬೇಕಾದ ಎಲ್ಲಾ ರೀತಿಯ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಬಹುತೇಕ ದೂರದ ಪ್ರದೇಶದ ಬಡ ಜನತೆಯೇ ಆ ಆಸ್ಪತ್ರೆಗೆ ಬರುವುದರಿಂದ ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಂತೆ ಬೇಕಾದ ಅವಶ್ಯಕ ವಸ್ತುಗಳನ್ನು ಖರೀದಿಸಲು ಹೊರಗೆ ಯಾವುದೇ ಅಂಗಡಿಗಳಿಲ್ಲದ ಕಾರಣ ಆಸ್ಪತ್ರೆಯ ಆವರಣದಲ್ಲಿನ ಅಂಗಡಿಗೇ ಬಂದಾಗ ದುಬಾರಿ ವೆಚ್ಚಕ್ಕೆ ಮಾರಾಟ ಮಾಡಿ ಹಣ ಪೀಕುತ್ತಾರೆ. ಎರಡು ಜ್ಯೂಸ್ ಅಂಗಡಿಗಳು ಮತ್ತು ಒಂದು ಚಿಲ್ಲರೆ ಅಂಗಡಿ ಇದ್ದು ಆ ಅಂಗಡಿಗಳಲ್ಲಿಯೂ ಪ್ರತಿ ವಸ್ತುವೂ ಹೊರಗಿನ ಮಾರುಕಟ್ಟೆ ಬೆಲೆಗಿಂತ ದುಬಾರಿಯಾಗಿರುತ್ತದೆ, ಆಸ್ಪತ್ರೆಗೆ ಬಹುತೇಕ ರೊಗಿಗಳೇ ಬರುವುದರಿಂದ ಅವರು ಹೊರಗಡೆ ಹೋಗಿ ಖರೀದಿ ಮಾಡಲಾಗದೆ ದುಬಾರಿ ಹಣವೇ ನೀಡಿ ಅದೇ ಅಂಗಡಿಯಲ್ಲಿ ಖರೀದಿಸುತ್ತಾರೆ.

ಕೋಟ್

ನಾನು ಎಸ್ ಎನ್ ಆರ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕನಾಗಿ ಇತ್ತೀಚೆಗೆ ಬಂದಿದ್ದು ಅಂಗಡಿಗಳ ವಿಚಾರದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ, ಸಂಬAಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು.

-ಡಾ.ಜಗದೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕರು.

ಕೋಟ್

ಎಸ್.ಎನ್.ಆರ್ ಜಿಲ್ಲಾಸ್ಪತ್ರೆಗೆ ಪ್ರತಿದಿನ ಸಾವಿರಾರು ಜನ ರೋಗಿಗಳು ಮತ್ತು ಸಂಬAಧಿಕರು ಬರುವುದರಿಂದ ಆಸ್ಪತ್ರೆಯ ಆವರಣದಲ್ಲಿರುವ ಅಂಗಡಿಗಳಲ್ಲಿ ಉತ್ತಮ ವ್ಯಾಪಾರ ವಹಿವಾಟು ನಡೆಯುತ್ತದೆ. ಆದರೆ ಆಸ್ಪತ್ರೆಯ ಆಡಳಿತ ಮಂಡಳಿ ಪ್ರತಿ ಅಂಗಡಿಗೆ ನೂರು ರೂ.ಬಾಡಿಗೆ ಪಡೆಯುತ್ತಿರುವುದು ದುರಾದೃಷ್ಟಕರ. ಕೂಡಲೇ ಆಸ್ಪತ್ರೆಯ ಅಧಿಕಾರಿಗಳು ಅಂಗಡಿಗಳನ್ನು ಬಹಿರಂಗ ಹರಾಜು ಹಾಕುವ ಮೂಲಕ ಯಾರು ಹೆಚ್ಚು ಬಾಡಿಗೆ ನೀಡಲು ಮುಂದಾಗುತ್ತಾರೋ ಅವರಿಗೆ ಬಾಡಿಗೆಗೆ ನೀಡುವ ಮೂಲಕ ಸರ್ಕಾರಕ್ಕೆ ಲಾಭ ಮಾಡಿಕೊಡಬೇಕಾಗುತ್ತದೆ. ಇಲ್ಲವಾದರೆ ಆಸ್ಪತ್ರೆಯ ವಿರುದ್ದ ಹೋರಾಟ ಮಾಡಲಾಗುವುದು.

-ಸೋಮಣ್ಣ, ರಾಜ್ಯಾಧ್ಯಕ್ಷರು, ಕರವೇ ಸಮರಸೇನೆ.

ಕೋಟ್

ಆಸ್ಪತ್ರೆಯ ಆವರಣದಲ್ಲಿ ತೆರೆಯಲಾಗಿರುವ ಅಂಗಡಿಗಳಲ್ಲಿ ಖಾಸಗಿ ಆಂಬುಲೆನ್ಸ್ ಚಾಲಕರು, ಆಸ್ಪತ್ರೆಯಲ್ಲಿ ಮಧ್ಯವರ್ತಿಗಳು ಹೆಚ್ಚಾಗಿ ಅಲ್ಲಿಯೇ ಕುಳಿತು ಎಲ್ಲಾ ರೀತಿಯ ವ್ಯವಹಾರಗಳು ನಡೆಸುತ್ತಾರೆ. ಆದ್ದರಿಂದ ಅಲ್ಲಿ ನಡೆಸಲಾಗುತ್ತಿರುವ ಪ್ರಭಾವಿಗಳ ಅಂಗಡಿಗಳ ಮಾಲೀಕತ್ವ ಹಿಂಪಡೆದು ಬಡವರಿಗೆ ನೀಡಿದರೆ ಆಸ್ಪತ್ರೆಗೆ ಆದಾಯವೂ ಬರುತ್ತದೆ ಮತ್ತು ಆಸ್ಪತ್ರೆಯ ಆವರಣದಲ್ಲಿ ನಡೆಯುವ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಬಹುದು.

-ಹೆಸರು ಹೇಳಲು ಇಚ್ಛಿಸದ ಆಸ್ಪತ್ರೆಯ ಸಿಬ್ಬಂದಿ

ಚಿತ್ರ ೨೯ ಕೆ.ಎಲ್.ಆರ್. ೦೩ : ಎಸ್.ಎನ್.ಆರ್.ಆಸ್ಪತ್ರೆಯ ಆವರಣದಲ್ಲಿರುವ ಅಂಗಡಿ ಮಳಿಗೆಗಳು

ಚಿತ್ರ ೨೯ ಕೆ.ಎಲ್.ಆರ್. ೦೩ಎ : ಸೋಮಣ್ಣ, ರಾಜ್ಯಾಧ್ಯಕ್ಷರು, ಕರವೇ ಸಮರಸೇನೆ. ರವರ ಭಾವಚಿತ್ರ

ಚಿತ್ರ ೨೯ ಕೆ.ಎಲ್.ಆರ್. ೦೩ಬಿ : ಡಾ.ಜಗದೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net