ಎಲ್ಲಿ ಮತದಾನ ಮಾಡಬೇಕು ತಿಳಿಸಿ

oppo_2
oppo_2
Published on

ಕಲಬುರಗಿ: ಈಶಾನ್ಯ ಪದವೀಧರರ ಮತಕ್ಷೇತ್ರಕ್ಕೆ ಜೂನ್ ೩ರಂದು ನಡೆಯುತ್ತಿರುವ ಚುನಾವಣೆಯಲ್ಲಿ ನೋಂದಾಯಿತ ಮತದಾರರಿಗೆ ಎಲ್ಲಿ ಮತದಾನ ಮಾಡಬೇಕು, ಮತಪಟ್ಟಿ ಎಲ್ಲಿ ದೊರೆಯುತ್ತದೆ ಎಂಬ ಮಾಹಿತಿ ಇಲ್ಲದೆ ಸಮಸ್ಯೆ ಸೃಷ್ಟಿಯಾಗುತ್ತಿದ್ದು, ಸೂಕ್ತ ಮಾಹಿತಿ ನೀಡಬೇಕು ಎಂದು ಪಕ್ಷೇತರ ಅಭ್ಯರ್ಥಿ ಶರಣು ಐಟಿ ಆಗ್ರಹಿಸಿದರು.

ಮಾಹಿತಿ ಕೊರತೆಯಿಂದ ಮತದಾನ ಪ್ರಮಾಣ ಕ್ಷೀಣಿಸುತ್ತಿದೆ. ಮತ್ತೊಂದೆಡೆ ಹಣವಂತ ಅಭ್ಯರ್ಥಿಗಳು ತಾವು ನೋಂದಣಿ ಮಾಡಿಸಿದ ಮತದಾರರಿಗೆ ಆಮಿಷ ಒಡ್ಡುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಡಿವಾಣ ಹಾಕಲು ಚುನಾವಣಾಧಿಕಾರಿಗಳು ಫ್ಲೆÊಯಿಂಗ್ ಸ್ಕಾÈಡ್ ನೇಮಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಹಿಂದೆ ಎಂಎಲ್‌ಸಿ ಆಗಿದ್ದಾಗ ಯಾವುದೇ ಕೆಲಸ ಮಾಡಿಲ್ಲ. ಆದ್ದರಿಂದ ನಮಗೆ ಮತ ನೀಡಬೇಕು. ಎಚ್‌ಕೆಇ ಸಂಸ್ಥೆಯವರು ಉದ್ಯೋಗ ಮೇಳ ನಡೆಸಿ, ಬಿಜೆಪಿ ಮೇಳ ಮಾಡಿದ್ದಾರೆ. ಸಂಸ್ಥೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದರು. ಜೆಡಿಯು ಉಪಾಧ್ಯಕ್ಷ ಸುಭಾಷ ಕಪಾಟೆ ಮಾತನಾಡಿ, ಈಶಾನ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯೊಬ್ಬರು ಮಹಾಗಾಂವ್‌ದ ಚಂದ್ರಶೇಖರ ಪಾಟೀಲ್ ಮಹಾಗಾಂವ್, ನೀಲಕಂಠ ಪಾಟೀಲ್ ಮಹಾಗಾಂವ ಅವರ ಭಾವಚಿತ್ರ ಬಳಸಿಕೊಳ್ಳುತ್ತಿದ್ದು, ಅದಕ್ಕೆ ಅವರು ಅರ್ಹರಲ್ಲ. ಇಬ್ಬರ ಚಿತ್ರ ಬಳಸಿ, ಈ ನೆಲದ ಇತರ ಸಾಧಕ ವ್ಯಕ್ತಿಗಳನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು. ಸುಭಾಷ ಕಪಾಟೆ, ಶರಣಕುಮಾರ ಕುಂಬಾರ, ಸಂಜೀವ ಕರೆಕಲ್ಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net