ಎಲ್ಲರನ್ನು ಒಗ್ಗೂಡಿಸಲು ಸಂಘಟನೆ ಅವಶ್ಯಕ

28sdp3a
Published on

ಸಿದ್ದಾಪುರ: ಎಲ್ಲರನ್ನೂ ಒಗ್ಗೂಡಿಸುವುದಕ್ಕೆ ಸಂಘಟನೆ ಅವಶ್ಯಕ ಎಂದು ಕುಮಟಾ ಮಿರ್ಜಾನಿನ ಶ್ರೀ ನಿಶ್ಚಲಾನಂದ ಸ್ವಾಮೀಜಿಯವರು ಹೇಳಿದರು.

ತಾಲೂಕಿನ ಕಾನಗದ್ದೆಯಲ್ಲಿ ಸೋಮವಾರ ಜರುಗಿದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.

ಸಮಾಜದ ಎಲ್ಲ ವರ್ಗದವರು ಶಿಕ್ಷಣವಂತರಾಗಬೇಕು ಎನ್ನುವ ಉದ್ದೇಶ ನಮ್ಮದು. ಬಡವರು ಶಿಕ್ಷಣದಿಂದ ವಂಚಿತರಾಗಬಾರದು ಆದಿಚುಂಚನಗಿರಿ ಮಠ ಎಲ್ಲ ವರ್ಗದವರಿಗೂ ಉಚಿತ ಶಿಕ್ಷಣ ನೀಡುವುದಕ್ಕೆ ಮುಂದಾಗಿದೆ ಎಂದರು.

ಉದ್ಯಮಿ ಉಪೇಂದ್ರ ಪೈ ಮಾತನಾಡಿದರು. ಮೋಹನ ಗೌಡ ಕಿಲವಳ್ಳಿ, ಎಂ.ಟಿ. ಗೌಡ ಕಿಲವಳ್ಳಿ, ಸುಮಂಗಲಾ ಗೌಡ, ಧನಂಜಯ ಗೌಡ, ಸುನೀತಾ ಗೌಡ, ಜಗನ್ನಾಥ ಗೌಡ, ಭಾಗ್ಯ ಗೌಡ ಇತರರಿದ್ದರು. ವೆಂಕಟೇಶ ಗೌಡ ಹೇರೂರು ಕಾರ್ಯಕ್ರಮ ನಿರ್ವಹಿಸಿದರು.

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾಪನೆ ಅಂಗವಾಗಿ ಬ್ರಹ್ಮ ಕಲಶ ಹೋಮ, ಬಿಂಬ ಪ್ರತಿಷ್ಠೆ, ಗಣಹೋಮ, ನವಗ್ರಹ ಹೋಮ, ದುರ್ಗಾ ಹೋಮ, ಬ್ರಹ್ಮಕಲಶ ಸ್ಥಾಪನೆ, ಅಧಿವಾಸ ಹೋಮ, ಕಲಶಾಭಿಶೇಕ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ವಿ.ಗಣೇಶ ಭಟ್ಟ ಶಿರಸಿ ಅವರಿಂದ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net