ಎಲ್ಲರ ಪರಿಶ್ರಮದಿಂದ ಶಾಸಕನಾದೆ

annad honour
ಕಡೂರಿನಲ್ಲಿ ಕುರುಬ ಸಮಾಜ ಏರ್ಪಡಿಸಿದ್ದ ಸಮಾರಂಭದಲ್ಲಿ ಶಾಸಕ ಕೆ.ಎಸ್.ಆನಂದ್ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಅಭಿನಂದಿಸಲಾಯಿತು. ಕೆ.ಎಚ್.ಎ.ಪ್ರಸನ್ನ, ಭಂಡಾರಿ ಶ್ರೀನಿವಾಸ್, ಶರತ್ ಕೃಷ್ಣಮೂರ್ತಿ, ಕರಿಬಡ್ಡೆ ಶ್ರೀನಿವಾಸ್, ಸಾವಿತ್ರಿ ಗಂಗಪ್ಪ, ಮೋಹನ್ ಮತ್ತಿತರರಿದ್ದರು.
Published on

ಕಡೂರು: ಎಲ್ಲರ ಒಗ್ಗಟ್ಟು, ಪರಿಶ್ರಮದಿಂದ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದು ಸಮಾಜದ ನಂಬಿಕೆಗೆ ಚ್ಯುತಿ ಬಾರದಂತೆ ಒಬ್ಬ ಸಾಮಾನ್ಯ ಜನಸೇವಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳೂ ಶ್ರಮಿಸುತ್ತೇನೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ತಾಲೂಕಿನ ಮಚ್ಚೇರಿ ಸಮೀಪದ ಬೆಂಕಿಲಕ್ಷ್ಮಯ್ಯ ಸಭಾಂಗಣದಲ್ಲಿ ಭಾನುವಾರ ತಾಲೂಕು ಕುರುಬ ಸಮಾಜದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
2023ರ ಚುನಾವಣೆಯಲ್ಲಿ ಕುರುಬ ಸಮಾಜದ ಒಗ್ಗಟ್ಟಿನ ಪ್ರತಿಲ ಹಾಗೂ ಇತರ ಎಲ್ಲ ಸಮಾಜಗಳು ಒಗ್ಗೂಡಿದ್ದರಿಂದ ಕ್ಷೇತ್ರದಲ್ಲಿ ರಾಜಕೀಯ ಹಿನ್ನೆಲೆ ಇಲ್ಲದ ನಾನು ಶಾಸಕನಾಗಿ ಆಯ್ಕೆಯಾಗಲು ಸಾಧ್ಯವಾಯಿತು. ಅದೇ ರೀತಿ ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿಸುವ ಜನರ ಅಚಲ ನಿರ್ಧಾರದಿಂದ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ಬಂತು ಎಂದರು.
ಬಹುಮುಖ್ಯವಾಗಿ ತಾಲೂಕಿಗೆ ಅವಶ್ಯಕವಾಗಿರುವ ಸಮಾಜಕ್ಕೆ ಸುಸಜ್ಜಿತವಾದ ಸಮುದಾಯಭವನ ನಿರ್ಮಾಣಕ್ಕೆ ಜಾಗದ ಕೊರತೆಯಿದೆ. ಇದಕ್ಕೆ ಪರ್ಯಾಯವಾಗಿ ವಿಶಾಲ ಜಾಗ ಮಂಜೂರು ಮಾಡಿಸಿಕೊಡುವ ಜವಾಬ್ದಾರಿ ನನ್ನ ಮೇಲಿದೆ. ಸರ್ಕಾರದ ಅನುದಾನ ದೊರೆಯದಿದ್ದರೆ ವೈಯಕ್ತಿಕವಾಗಿ ಸಮಾಜಕ್ಕೆ ಭವನ ನಿರ್ಮಿಸಲು ಜಾಗ ಕೊಡಿಸುತ್ತೇನೆ. ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ನಿರಂತರವಾಗಿ ಬೆಂಬಲಿಸುತ್ತೇನೆ ಎಂದು ಅಭಯ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಉತ್ತಮ ನಿರ್ಧಾರ ಮತ್ತು ಎಲ್ಲ ಸಮಾಜದ ಬೆಂಬಲದಿಂದಾಗಿ ಕೆ.ಎಸ್.ಆನಂದ್ ಶಾಸಕರಾಗಲು ಸಾಧ್ಯವಾಯಿತು ಎಂದರು.
ತಾಲೂಕು ಕುರುಬ ಸಂಘದ ಅಧ್ಯಕ್ಷ ಕೆ.ಎಚ್.ಎ.ಪ್ರಸನ್ನ ಮಾತನಾಡಿದರು. ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಕರಿಬಡ್ಡೆ ಶ್ರೀನಿವಾಸ್, ಲೋಕೇಶ್, ಸಮಾಜದ ಮುಖಂಡರಾದ ಸಾವಿತ್ರಿ ಗಂಗಪ್ಪ, ತೋಟದಮನೆ ಮೋಹನ್‌ಕುಮಾರ್, ಈರಳ್ಳಿ ರಮೇಶ್, ಕೆ.ಎಚ್.ಶಂಕರ್, ಜಿ.ರೇವಣ್ಣ, ಜಿ.ರಂಗನಾಥಸ್ವಾಮಿ, ಕೆ.ಆರ್.ಸುರೇಶ್, ಕೆ.ಬಿ.ಸೋಮೇಶ್, ಹಳೇಪೇಟೆ ತಿಪ್ಪೇಶ್, ಬಾಸೂರು ಚಂದ್ರಮೌಳಿ, ಸವಿತಾ ಸತ್ಯನಾರಾಯಣ, ಆಸಂದಿ ಕಲ್ಲೇಶ್, ಕಂಸಾಗರ ರೇವಣ್ಣ, ಸವಿತಾ ರಮೇಶ್, ಕೆ.ಜಿ.ಶ್ರೀನಿವಾಸ್‌ಮೂರ್ತಿ, ವಪ್ಪುಣಸೆ ಯಶ್ವಂತ್, ಸೋಮಶೇಖರ್, ನಂಜುಂಡಸ್ವಾಮಿ, ಕೆ.ಇ.ಹಿರಿಯಣ್ಣ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net