

ಬಾಗಲಕೋಟೆ: ಎಲ್ಲ ಧರ್ಮಗಳಿಂತ ರಾಷ್ಟ್ರಧರ್ಮ ಮುಖ್ಯವಾಗಿದ್ದು, ದೇಶಕ್ಕಾಗಿ ವೀರ ಬಲಿದಾನಗೈದ ಅನೇಕ ವೀರರನ್ನು ಇಂದಿನ ಯುವಪಿಳಿಗೆಗೆ ಪರಿಚಯಿಸುವ ಮೂಲಕ ಸ್ಮರಿಸುವುದು ನಮ್ಮೆಲ್ಲ ಆದ್ಯ ಕರ್ತವ್ಯವಾಗಿದೆ ಎಂದು ಬ್ರಿಗೇಡಿಯರ ಸುಧಿಂದ್ರ ಇಟ್ನಾಳ ಹೇಳಿದರು.
ಅವರು ವಿದ್ಯಾಗಿರಿಯ ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನ ನೂತನ ಸಭಾಭವನದಲ್ಲಿ ಶನಿವಾರ ಕಾರ್ಗಿಲ್ ವಿಜಯೋತ್ಸವ ನಿಮಿತ್ಯ ಕಾರ್ಗಿಲ್ ಕದನ-ಕಥನ ಹಾಗೂ ಆಪರೇಷನ್ ಸಿಂಧೂರ ಕುರಿತು ನಡೆದ ವಿಶೇಷ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು,
ಇತಿಹಾಸದ ಘಟನೆಗಳ ಅರಿವು ಮುಖ್ಯವಾಗಿದ್ದು, ಇಂದು ನಾವು ಇರುವ ಸ್ಥಿತಿ ನಮ್ಮಿಂದ ನಿರ್ಮಿತವಾದದ್ದು ಅಲ್ಲ, ಆದಿಕಾಲದಿಂದ ಅನೇಕ ಜನರು ದೇಶವನ್ನು ಸದೃಢ ಮಾಡಲು ದೇಶಕ್ಕಾಗಿ ತಮ್ಮನ್ನೆ ಸಮರ್ಪಿಸಿಕೊಂಡಿದ್ದಾರೆ. ಅಂತ ವೀರರನ್ನು ನೆನೆಯುವಂಥ ಕಥಾ ಕಥನಗಳನ್ನು ಇಂದಿನ ಯುವ ಪಿಳಿಗೆಗೆ ಪರಿಚಯಿಸಿ, ಸ್ಮರಿಸುವಂತ ಕರ್ತವ್ಯ ನಮ್ಮೆಲ್ಲರದ್ದಾಗಿದೆ, ಎಲ್ಲ ಧರ್ಮಗಳಿಗಿಂತ ರಾಷ್ಟ್ರಧರ್ಮ ಮುಖ್ಯವಾಗಿದೆ, ನಿಸ್ವಾರ್ಥದಿಂದ ಸೇವೆ ಮಾಡುವ ಭಾರತೀಯ ಸೈನ್ಯ ಯಾವುದೆ ಯುದ್ದದಲ್ಲಿ ಸೋತಿಲ್ಲ ಎನ್ನುವುದು ನಮ್ಮೆಲ್ಲರ ಹೆಮ್ಮೆ, ವಿಜಯ ಮತ್ತು ವೀರಮರಣ ಎಂಬ ಎರಡು ಉದ್ದೇಶಗಳಿಂದ ಕೂಡಿದ ನಮ್ಮ ಭಾರತೀಯ ಸೇನೆಯ ತತ್ವಗಳಲ್ಲಿ ನಿಶ್ವಾರ್ಥ ಸೇವೆ ಮುಖ್ಯವಾಗಿದೆ, ದೇಶ ಸದೃಢವಾಗಬೇಕಾದರೆ ಬರಿ ಸೈನ್ಯ ಮಾತ್ರವಲ್ಲದೆ ದೇಶದ ರಾಜಕೀಯ ಶಕ್ತಿಯು ಕೂಡಾ ಮುಖ್ಯವಾಗುತ್ತದೆ, ಇಂದಿನ ಯುವಜನಾಂಗಕ್ಕೆ ಸೇನೆಯಲ್ಲಿ ಉತ್ತಮ ಅವಕಾಶಗಳಿವೆ. ಆಪರೇಷನ್ ಸಿಂಧೂರದಲ್ಲಿ ಭಯೋತ್ಪಾದಕರಿಂದ ಆದ ಹತ್ಯೆಗಳಿಗೆ 9 ಉಗ್ರ ನೆಲೆಗಳನ್ನು ನಾಶಮಾಡುವ ಮೂಲಕ ನಮ್ಮ ಗುರಿ ತಲುಪಲಾಯಿತು. ಕಾರ್ಗಿಲ್ ಹಾಗೂ ಆಪರೇಷನ ಸಿಂಧೂರಗೆ ಅಜಗಜಾಂತರ ವ್ಯತ್ಯಾಸವಿದೆ, ಪ್ರಸ್ತುತ ಭಾರತೀಯ ಸೈನ್ಯಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಶಸ್ತಾçಸ್ತçಗಳು ಇವೆ, ಯುದ್ಧದಲ್ಲೂ ಭಾರತ ಆಧುನಿಕತೆಯನ್ನು ಮೆರೆದಿದೆ ಎಂದರು.
ಮುಖ್ಯ ಭಾಷಣಕಾರರಾಗಿ ನಂದು ಗಾಯಕವಾಡ ಮಾತನಾಡಿ, ಕಾರ್ಗಿಲ್ ಯುದ್ಧದ ಘಟನಾವಳಿಗಳ ಮೂಲಕ ವೀರ ಮರಣವನ್ನಪ್ಪಿದ ಸೈನಿಕರ ಕುಟುಂಬಗಳ ದೇಶಭಕ್ತಿಯ ನೈತಿಕ ಸ್ಥೖರ್ಯದ ಬಗ್ಗೆ ಮನಮಿಡಿಯುವಂತೆ ಏಳೆ ಏಳೆಯಾಗಿ ಬಿಚ್ಚಿಟ್ಟರು, ಬರುವಂತ ಗಣೇಶ ಉತ್ಸವದಲ್ಲಿ ಸೈನಿಕರ ಹಾಗೂ ಮಾಜಿ ಸೈನಿಕರ ತಂದೆ ತಾಯಿಗಳನ್ನು ಸನ್ಮಾನಿಸಿ ಗೌರವಿಸುವ ಮೂಲಕ ಸೈನಿಕರಿಗೆ ಕೃತಘ್ಞತೆಗಳನ್ನು ಸಲ್ಲಿಸೋಣ, ತಂದೆ ತಾಯಿಗೆ ಮಗನಾಗಿ ದೇಶ ಕಟ್ಟುವ ತರುಣ ತರುಣಿಯರು ಖಿನ್ನತೆಗೆ ಒಳಗಾಗದೆ, ದೇಶದ ಸೈನಿಕರ ಆತ್ಮಶಕ್ತಿಯನ್ನು ತುಂಬವು ತಂದೆ ತಾಯಿಗೆ ಉತ್ತಮ ಮಕ್ಕಳಾಗುವ ಸಂಕಲ್ಪ ಮಾಡೋಣ ಎಂದರು.
ಅಧ್ಯಕ್ಷತೆ ವಹಿಸಿದ ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರು ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷ, ಲಕ್ಷ ಜನರ ಬಲಿದಾನಗಳನ್ನ ಹಾಗೂ ಸ್ವಾತಂತ್ರ್ಯ ದೊರತ ಮೇಲೆ 70 ಸಾವಿರ ಸೈನಿಕರನ್ನು ಕಳೆದುಕೊಂಡಿದ್ದರ ಬಗ್ಗೆ, ಹಾಗೂ ಯುದ್ಧದ ವಸ್ತುಸ್ಥಿತಿಗಳ ಬಗ್ಗೆ ಇಂದಿನ ಯುವ ಜನಾಂಗ ಮೆಲಕು ಹಾಕುವ ಮೂಲಕ ಸ್ಮರಣೆ ಮಾಡುವ ಕೆಲಸವಾಗಬೇಕು. ಭಾರತದ ಸೈನ್ಯ ಜಗತ್ತಿನಲ್ಲಿಯೇ ಅತಿದೊಡ್ಡ ಬಲಿಶಾಲಿಯಾದ ಸೈನ್ಯವಾಗಿದೆ, ಇಂದು ಶಕ್ತಿಶಾಲಿಯಾದ ಪ್ರಧಾನಿಗಳಿಂದ ರಾಷ್ಟ್ರ ಕಟ್ಟುವಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೆವೆ, ಇಂದು ಎಲ್ಲಕ್ಕಿಂತ ದೊಡ್ಡದಾದ ಧರ್ಮ ಅದು ರಾಷ್ಟ್ರಧರ್ಮವಾಗಿದೆ. ಭಾರತೀಯರ ರಕ್ತದ ಕಣಕಣದಲ್ಲಿಯೂ ನಿಷ್ಕಲ್ಮವಾದ ದೇಶಭಕ್ತಿ ಅಡಗಿದೆ, ಯುವ ಪಿಳಿಗೆಗೆ ರಾಷ್ಟçಧರ್ಮದ ಪರಿಕಲ್ಪನೆಯನ್ನು ಮೂಡಿಸುವುದು ಅಗತ್ಯವಾಗಿದೆ.
ಇದೇ ಸಂಧರ್ಭದಲ್ಲಿ ಮಾಜಿ ಸೈನಿಕರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಇದಕ್ಕೂ ಮುಂಚೆ ವಿದ್ಯಾಗಿರಿ ಬಸವೇಶ್ವರ ಇಂಜಿನೀಯರಿಂಗ ಕಾಲೇಜು ವೃತ್ತದಿಂದ ನೇತಾಜಿ ಹಾಸ್ಟೆಲ್ ಮಾರ್ಗವಾಗಿ ನೂತನ ಸಭಾಭವನದವರೆಗೆ ರಾಷ್ಟಧ್ವಜದ ಮೇರವಣಿಗೆ ಮಾಡಲಾಯಿತು.
ಸಮಾರಂಭದಲ್ಲಿ ಮಹಾಂತೇಶ ಶೆಟ್ಟರ, ರಾಜು ರೇವಣಕರ, ಬಸವರಾಜ ಯಂಕಂಚಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಸವಿತಾ ಲಂಕೆನ್ನವರ, ಶೋಭಾ ರಾವ,ಜ್ಯೋತಿ ಭಜಂತ್ರಿ, ಭ್ಯಾಗ್ಯಶ್ರೀ ಹಂಡಿ, ಸುರೇಶ ಮಜ್ಜಗಿ, ಮಂಜುನಾಥ ಶಿರೂರ, ಮಾರುತಿ ಪಾಟೋಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು, ವಿಜಯಲಕ್ಷ್ಮೀ ಬಡಿಗೇರ, ರೇವಣ್ಣ ಬೆಣ್ಣೂರ ವಂದೆ ಮಾತರಂ ಹೇಳಿದರು.