ಎಲ್‌ಪಿಜಿ ಜನಜಾಗೃತಿ ಕಾರ್ಯಕ್ರಮ

Photo of LPG Cylinder
Published on

ಕಲಬುರಗಿ: ನಗರದ ವಿದ್ಯಾನಗರ ವೆಲ್ಫೇರ್ ಸೊಸೈಟಿ ಶುಕ್ರವಾರ ಆಯೋಜಿಸಿದ್ದ ಎಲ್‌ಪಿಜಿ ಸಿಲೆಂಡರ್ ಅರಿವು ಕಾರ್ಯಕ್ರಮದಲ್ಲಿ ಬೆಳಗಾವಿ ಅನ್ವಿ ಟೆಕ್‌ನ ಆನಂದ್.ಕೆ.ಎಂ ಅವರು ಜನರಲ್ಲಿ ಅರಿವು ಮೂಡಿಸಿದರು.
ಅಡುಗೆ ಅನಿಲ ಸೋರಿಕೆ ಮತ್ತು ಸುರಕ್ಷತಾ ಕ್ರಮದ ಬಗ್ಗೆ ಗ್ಯಾಸ್ ಸಿಲಿಂಡರ್‌ನೊಂದಿಗೆ ಡೆಮೊ ಮಾಡುವ ಮೂಲಕ ಆನಂದ ಜಾಗೃತಿ ಮೂಡಿಸಿದರು.
ಸೊಸೈಟಿ ಕಾರ್ಯದರ್ಶಿ ಶಿವರಾಜ್ ಅಂಡಗಿ ಮಾತನಾಡಿ, ಸಂಸಾರದ ನಿರ್ವಹಣೆ ಜವಾಬ್ದಾರಿ ಹೊತ್ತ ತಮ್ಮ ಕುಟುಂಬದ ಸುರಕ್ಷತೆ ದೃಷ್ಟಿಕೋನದಿಂದ ಮುಂಜಾಗ್ರತೆ ವಹಿಸುವುದು ಸೂಕ್ತ. ಪುರಾಣ ಪ್ರವಚನ ವೇದಿಕೆಯಲ್ಲಿ ಎಲ್‌ಜಿಪಿ ಜಾಗೃತಿ ಮೂಡಿಸಿದ್ದು ಶ್ಲಾಘನೀಯ ಎಂದರು.
ಪ್ರವಚನಕಾರ ಮಲ್ಲಿಕಾರ್ಜುನ ಶಾಸ್ತಿçಗಳು. ಮಲ್ಲಿನಾಥ ದೇಶಮುಖ, ಗುರುಲಿಂಗಯ್ಯಾ ಮಠಪತಿ, ಗುರುಶಾಂತಯ್ಯ ಸ್ಥಾವರಮಠ, ವೀರಬದ್ರಯ್ಯಾ ಸ್ಥಾವರಮಠ, ಬಸವಂತರಾವ್ ಜಾಬಶೆಟ್ಟಿ, ಮಲ್ಲಿಕಾರ್ಜುನ ನಾಗಶೆಟ್ಟಿ, ವಿಶ್ವನಾಥ ರಟಕಲ್, ನಾಗರಾಜ ಹೆಬ್ಬಾಳ್, ಆರ್.ಎಸ್.ಗುಗವಾಡ, ರೇವಣಸಿದ್ದಪ್ಪ ಜೀವಣಗಿ, ಗಂಗಾಧರ ಕಣ್ಣಿ, ರೇವಣಸಿದ್ದಪ್ಪ ಗೌನಳ್ಳಿ, ಬಸವರಾಜ ಸ್ವಾಮಿ, ಶಾಂತಯ್ಯ ಸಂದಿಮಠ, ನಾಗೇಂದ್ರಪ್ಪ ಪಾಟೀಲ್ ಗೌನಳ್ಳಿ, ಬಸವರಾಜ ಸಜ್ಜನ, ಶಾಂತಯ್ಯ ಬೀದಿಮನಿ, ವಿನೋದ ಗೋರೆ, ಡಾ. ಸಂಗಣ್ಣ ಚಿಟಗಿ ಮಂದೇವಾಲ, ಶರಣಯ್ಯಾ ಸ್ವಾಮಿ ಮಠಪತಿ, ಬಡಾವಣೆಯ ಅನೇಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net