ಮದ್ದೂರು: ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ವಸತಿಗೃಹದಲ್ಲಿ ಒಂದು ದಿನದ ಅಂತರ 2 ಮನೆಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ದೋಚಿ ಪರಾರಿಯಾಗಿದ್ದಾರೆ.
ಫೆ.13ರಂದು ಕಾರ್ಖಾನೆ ನೌಕರ ಪ್ರಹ್ಲಾದ್ ಅವರ ಮನೆಗೆ ನುಗ್ಗಿದ ಕಳ್ಳರು 127 ಗ್ರಾಂ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.
ಫೆ.14ರಂದು ಕಾರ್ಖಾನೆಯ ನೌಕರರ ಡಿ.ಸಿ.ಉಮೇಶ್ ಅವರ ಮನೆಗೆ ನುಗ್ಗಿದ ಕಳ್ಳರು 1.30 ಲಕ್ಷ ರೂ.ನಗದು ಹಾಗೂ ಅಂದಾಜು 20 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ.
2 ದಿನಗಳ ಅಂತರದಲ್ಲಿ 2 ಮನೆಗಳಲ್ಲಿ ಕಳ್ಳತನವಾಗಿ ಲಕ್ಷಾಂತರ ರೂ.ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣಗಳು ಕಳ್ಳತನವಾಗಿರುವುದು ಆತಂಕ ಮೂಡಿಸಿದೆ.
ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.