

ಬಾಗಲಕೋಟೆ: ಜಿಲ್ಲೆಯಲ್ಲಿ ಇಸ್ಲಾಮಿಕ್ ದೇಶಗಳ ಧ್ವಜ ಪ್ರದರ್ಶನ ಮಾಡಿ ದೇಶ ಸಂವಿಧಾನ ವಿರೋಧ ಕೃತ್ಯ ಎಸಗಿರುವ ಮತಾಂಧರ ವಿರುದ್ಧ ಎನ್‌ಐಎ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ರಾಷ್ಟ್ರ ರಕ್ಷಾ ಆಂದೋಲನ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಭಾಭವಾನಿ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಹೊಳೆ ಆಂಜನೇಯ ದೇವಸ್ಥಾನ ತಲುಪಿ ಪ್ರತಿಭಟನಾ ಸಭೆಯಾಗಿ ಮಾರ್ಪಪಟ್ಟಿತು.
ರಾಜ್ಯ ಸಭೆ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಕಿರಣ್ ಪವಾಡಶೆಟ್ಟರ, ಕುಮಾರಸ್ವಾಮಿ ಹಿರೇಮಠ, ರವಿ ಪಟ್ಟಣದ, ಬಸವರಾಜ ಯಂಕಂಚಿ, ಜಯಂತ ಕುರಂದವಾಡ, ರಾಜು ನಾಯ್ಕರ, ಗುಂಡೂರಾವ್ ಸಿಂಧೆ, ನಾಗೇಶ ಚಿತ್ರವಾಣ, ರಾಜಕುಮಾರ ಲಮಾಣಿ, ಶಿವು ಬಡಿಗೇರ, ಬಸೆಟ್ಟಪ್ಪ ಅಂಗಡಿ, ಸತ್ಯಾನಾರಾಯಣ ಹೇಮಾದ್ರಿ, ರವಿ ಧಾಮಜಿ, ಡಾ.ಶೇಖರ ಮಾನೆ, ರಾಜು ಸಿಂತ್ರೆ, ಸುರೇಶ ಮಜ್ಜಗಿ,ರಾಜು ಗಾಣಿಗೇರ, ಪವನ ಸಿಂಧೆ ಸೇರಿದಂತೆ ಇತರರು ಇದ್ದರು.