ಎದೆತಟ್ಟಿಕೊಂಡು ಬೀಗಿದ ಕೊಲೆ ಆರೋಪಿ

bkt-21-14
ಸ್ಥಳ ಮಹಜರುಗಾಗಿ ಮಹಾಲಿಂಗಪುರಕ್ಕೆ ಪೊಲೀಸರು ಕರೆತಂದಾಗ ಅಲ್ಲಿ ನೆರೆದಿದ್ದ ಜನರನ್ನ ಕೈಬೀಸಿ ಪೋಜು ಕೊಡುತ್ತಿರುವ ಅಮೀನಸಾಬ್.
Published on

ಬಾಗಲಕೋಟೆ: ತೋಟದ ಶೆಡ್ ಗೆ ಬೆಂಕಿ ಹಚ್ಚಿ ತಾಯಿ-ಮಗಳನ್ನು ಸಜೀವವಾಗಿ ದಹನ ಮಾಡಿ, ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸಿದ್ದ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ಘಟನೆಯ ಪ್ರಮುಖ ಆರೋಪಿಗೆ ಆ ಬಗ್ಗೆ ಸ್ವಲ್ಪ ಕೂಡ ಪಶ್ಚಾತ್ತಾಪವಾಗಲಿ, ಅಪರಾಽ ಪ್ರಜ್ಞೆಯಾಗಿ ಕಾಡಿದಂತೆ ಕಾಣಿಸುತ್ತಿಲ್ಲ.

ಕಾರಣ ಭಾನುವಾರ ಆರೋಪಿ ಅಮೀನಸಾಬ್ ಅವರನ್ನು ಸ್ಥಳ ಮಹಜರುಗೆ ಮಹಾಲಿಂಗಪುರಕ್ಕೆ ಕರೆತಂದಿದ್ದ ವೇಳೆ ಅಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಜನರನ್ನು ನೋಡುತ್ತಿದ್ದಂತೆ ಅವರತ್ತ ಕೈಬೀಸಿ, ನಾನೇ ಎಂಬರ್ಥದಂತೆ ತನ್ನ ಎದೆಯನ್ನು ತಟ್ಟಿಕೊಂಡು ಭಂಡತನ ಮೆರೆದಿದ್ದಾನೆ. ತಾನೇನೋ ಘನಂದಾರಿ ಕೆಲಸ ಮಾಡಿದ್ದೇನೆ ಎಂಬಂತೆ ಜನರತ್ತ ಕೈಬೀಸಿ ಬೀಗುತ್ತಿರುವ ದೃಶ್ಯ ಜನರು ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ. ಆರೋಪಿಯ ಈ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ಜು. ೧೬ ರಂದು ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ತೋಟದ ಶೆಡ್ ನಲ್ಲಿ ಮಲಗಿದ್ದ ದಸ್ತಗೀರಸಾಬ್ ಪೆಂಡಾರಿ ಕುಟುಂಬವನ್ನು ನಾಶ ಮಾಡಲು ಶೆಡ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಈ ವೇಳೆ ತಾಯಿ ಜೈಬಾನ್ ಹಾಗೂ ಮಗಳು ಶಬಾನ ಸಾವನ್ನಪ್ಪಿದ್ದರು. ಗಾಯಗೊಂಡಿದ್ದ ಸುಬಾನ್ ಎನ್ನುವ ಯುವಕ ಎರಡು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.

ಪ್ರಕರಣ ಹಿನ್ನೆಲೆ ಈಗಾಗಲೇ ಪೊಲೀಸರು ಅನೇಕರನ್ನು ಬಂಽಸಿದ್ದಾರೆ. ಶೆಡ್ ಗೆ ಬೆಂಕಿ ಹಚ್ಚಲು ಸಿಂಟೆಕ್ಸ್ ಗೆ ೨ ಎಚ್ಪಿ ಮೋಟಾರ್ ಹಚ್ಚಿ ಪೈಪಿನ ಮೂಲಕ ಪೆಟ್ರೋಲ್ ತುಂಬಿಸಿ, ಶೆಡ್ ಗೆ ಸಿಂಪಡಿಸಿದ್ದರು. ಇದೀಗ ಆರೋಪಿ ಮೋಟಾರ್ ಹಾಗೂ ಪೈಪ್ ಖರೀದಿ ಮಾಡಿದ್ದ ಮಹಾಲಿಂಗಪುರದ ಅಂಗಡಿಗೆ ಸ್ಥಳ ಮಹಜರುಗಾಗಿ ಪೊಲೀಸರು ಕರೆತಂದಿದ್ದರು. ಈ ವೇಳೆ ಅಲ್ಲಿ ನೆರೆದಿದ್ದ ಜನರನ್ನು ನೋಡಿ, ತಾನೇನೋ ದೊಡ್ಡ ಸಾಧನೆ ಮಾಡಿದವನಂತೆ ಜನರತ್ತ ಕೈಬೀಸಿ, ಎದೆ ತಟ್ಟಿಕೊಂಡು ಪೋಜು ಕೊಟ್ಟಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net