ಎಚ್‌ಐವಿ ಬಗ್ಗೆ ಜಾಗೃತರಾಗಿರಬೇಕು

GLD9- 1
ಗುಳೇದಗುಡ್ಡದ ಸಮುದಾಯ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿದ್ದ ಬೀದಿ ನಾಟಕ ಸಮುದಾಯ ಆರೋಗ್ಯ ಕೇಂದ್ರದ ಡಾ. ನಾಗರಾಜ ಕುರಿ ಉದ್ಘಾಟಿಸಿದರು.
Published on

ಬಾಗಲಕೋಟೆ: ಎಚ್‌ಐವಿ ವೈರಾಣು ಮನುಷ್ಯನ ರೋಗ ನಿರೋಧಕ ಶಕ್ತಿ ಕಡಿಮೆ ಮಾಡಿ, ಇದರಿಂದ ಮನುಷ್ಯನ ದೇಹ ಹಲವಾರು ರೋಗಗಳಿಗೆ ತುತ್ತಾಗುತ್ತದೆ. ಏಡ್ಸ್ ಎಂಬ ಮಹಾಮರಿಯ ಬಗ್ಗೆ ಯುವಕರು ಹೆಚ್ಚಿನ ಜಾಗೃತೆ ವಹಿಸಬೇಕು. ಸುರಕ್ಷಿತ ಕ್ರಮ ಅಳವಡಿಸಿಕೊಳ್ಳಬೇಕು ಎಂದು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಽಕಾರಿ ಡಾ. ನಾಗರಾಜ ಕುರಿ ಹೇಳಿದರು.

ಗುಳೇದಗುಡ್ಡ ಪಟ್ಟಣದ ಸಮುದಾಯ ಕೇಂದ್ರದ ಆವರಣದಲ್ಲಿ ಗುರುವರ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏಡ್ಸ ಜಾಗೃತಿ ಕುರಿತು ಹಮ್ಮಿಕೊಂಡಿದ್ದ ಬೀದಿ ನಾಟಕ ಹಾಗೂ ಕಲಾಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಕ್ಷಿಸಿದ ರಕ್ತ ಮಾತ್ರ ಪಡೆಯಬೇಕು. ಅಸುರಕ್ಷಿತ ಲೈಂಗಿಕ ಸಂಪರ್ಕದಿAದ ದೂರವಿರಬೇಕು. ಸಂಸ್ಕರಣೆ ಮಾಡಿದ ಸೂಜಿ, ಸಿರಿಂಜು ಬಳಸುವುದರಿಂದ ಏಡ್ಸ್ ಮಹಾಮಾರಿಯಿಂದ ದೂರವಿರಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ರೇವಣಸಿದ್ದಪ್ಪ, ಸಮುದಾಯ ಆರೋಗ್ಯದ ಜ್ಯೋತಿ ಮೆಣಸಿನಕಾಯಿ, ರಂಜಾನ ಮಕಾನದಾರ, ಪ್ರೊ.ಪ್ರಕಾಶ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net