

ಬಾಗಲಕೋಟೆ: ತೇರದಾಳ ಪಟ್ಟಣದ ಡಾ.ವಿಶಾಲ ಹುಬ್ಬಳ್ಳಿ ಅವರು ಇತ್ತೀಚಿಗೆ ಪ್ರಕಟಗೊಂಡ ನೀಟ್ ಸೂಪರ್ ಸ್ಪೇಷಾಲಿಟಿ ಪ್ರವೇಶ ಪರೀಕ್ಷೆಯಲ್ಲಿ ದೇಶದಲ್ಲಿ ೨ನೇ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮೆರೆದಿದ್ದಾರೆ.
ಈಗಾಗಲೇ ಎಂಬಿಬಿಎಸ್ ಹಾಗೂ ಪಿಜಿ ಮುಗಿಸಿರುವ ಡಾ.ವಿಶಾಲ್ ಇದೀಗ ಎಂಸಿಎಚ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮಾರ್ಚ್ ೩೦ ರಂದು ಪರೀಕ್ಷೆ ಬರೆದಿದ್ದು, ಏ.೨೪ ರಂದು -Àಲಿತಾಂಶ ಪ್ರಕಟವಾಗಿದೆ. ವಿಶಾಲ ಸಾಧನೆ ಮೆಚ್ಚಿ ಕಳೆದ ಮೂರು ದಿನಗಳಿಂದ ವಿವಿಧ ಸಂಘ ಸಂಸ್ಥೆಗಳು, ಸಂಘಟನೆಗಳು ಹಾಗೂ ಜನಪ್ರತಿನಿಽಗಳು ಅವರನ್ನು ಸನ್ಮಾನಿಸಿ ಸಾಧನೆಯನ್ನು ಶ್ಲಾöಸುತ್ತಿದ್ದಾರೆ.
ತೇರದಾಳ ಪಟ್ಟಣದ ವೈದ್ಯದಂಪತಿ ಡಾ.ಶ್ರೀಶೈಲ ಹಾಗೂ ಗೀತಾ ಹುಬ್ಬಳ್ಳಿ ಅವರ ಪುತ್ರ ಡಾ.ವಿಶಾಲ ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಗೋಕಾಕ್ ಹಾಗೂ ಪದವಿ ಶಿಕ್ಷಣವನ್ನು ಮಂಗಳೂರಲ್ಲಿ ಮುಗಿಸಿದ್ದು, ಸಿಇಟಿಯಲ್ಲಿ ೪೮ನೇ ರ‍್ಯಾಂಕ್ ಪಡೆದು ಬೆಂಗಳೂರ ಮಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದ್ದರು. ಬಳಕ ಪಿಜಿಯನ್ನು ಮೈಸೂರ ಮೆಡಿಕಲ್ ಕಾಲೇಜಿನಲ್ಲಿ ಮುಗಿಸಿ ಒಂದು ವರ್ಷ ವೈದ್ಯಕೀಯ ಸೇವೆಯಲ್ಲಿ ಇದ್ದರು. ಇದೀಗ ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ವ್ಯಾಸಂಗ ಮಾಡಲು ಎಂಸಿಎಚ್(ಮಾಸ್ಟರ್ ಆಪ್ ಚಿರುರ್ಜೆಯ್) ಪರೀಕ್ಷೆಯಲ್ಲಿ ರಾಷ್ಟçದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈಗ ದೆಹಲಿ ಆಸ್ಪತ್ರೆಯಲ್ಲಿ ಗ್ಯಾಸ್ಟೋಸರ್ಜರಿ ಮಾಡುವುದಾಗಿ ಡಾ.ವಿಶಾಲ ಹೇಳುತ್ತಾರೆ.
ಡಾ. ವಿಶಾಲ ಅವರ ತಂದೆ ಶ್ರೀಶೈಲ ಹಾಗೂ ತಾಯಿ ಗೀತಾ ಇಬ್ಬರು ಬಿಎಎಂಎಸ್ ವೈದ್ಯರು ಇದ್ದು, ತೇರದಾಳ ಪಟ್ಟಣದಲ್ಲಿ ಆಸ್ಪತ್ರೆ ತೆರೆದು ವೈದ್ಯಕೀಯ ಸೇವೆಯಲ್ಲಿ ನಿರತರಾಗಿದ್ದಾರೆ. ಇನ್ನೂ ವಿಶಾಲ ಅವರ ಸಹೋದರಿ ಶ್ರೇಯಾ ಹುಬ್ಬಳ್ಳಿ ಅವರು ಸಹ ಎಂಬಿಬಿಎಸ್ ಮುಗಿಸಿದ್ದಾರೆ. ಹಾಗೆಯೇ ವಿಶಾಲ ಅವರ ಪತ್ನಿ ಅಪೂರ್ವ ಅವರು ಸಹ ಎಂಬಿಬಿಎಸ್ ಬಳಿಕ ಎಂಡಿ ಮುಗಿಸಿದ್ದಾರೆ. ಹೀಗೆ ಕುಟುಂಬದ ಐವರು ಸಹ ವೈದ್ಯ ವೃತ್ತಿಯಲ್ಲಿ ಇದ್ದಾರೆ.