ಉಳುಮೆ ಭೂಮಿಯಿಂದ ರೈತರನ್ನು ಒಕ್ಕಲೆಬ್ಬಿಸಿಬೇಡಿ

1 bkt-13
ಬಾಗಲಕೋಟೆ ಜಿಪಂ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ತ್ರೆÊಮಾಸಿಕ ಕೆಡಿಪಿ ಸಭೆ ಶನಿವಾರ ನಡೆಯಿತು.
Published on

ಬಾಗಲಕೋಟೆ: ಕಂದಾಯ ವ್ಯಾಪ್ತಿಯ ಪ್ರದೇಶವನ್ನು ಅರಣ್ಯ ಇಲಾಖೆ ಕಾಯ್ದಿಟ್ಟ ಅರಣ್ಯ ಪ್ರದೇಶವೆಂದು ವರ್ಗಾಹಿಸಿಕೊಂಡಿದ್ದು, ಇದೀಗ ಅಲ್ಲಿ ಅರಣ್ಯ ಬೆಳೆಸುತ್ತೇವೆ ಎಂದು ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಬಾರದು ಎಂದು ಶನಿವಾರ ಜಿಪಂ ಸಭಭವನದಲ್ಲಿ ಶನಿವಾರ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ತ್ರೆÊಮಾಸಿಕ ಕೆಡಿಪಿ ಪ್ರತಿಪರಿಶೀಲನೆ ಸಭೆಯಲ್ಲಿ ಜಾರಿದ್ದ ಎಲ್ಲ ಜನಪ್ರತಿನಽಗಳು ಒಕ್ಕೂರ ಧ್ವನಿ ಎತ್ತಿದರು.

ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಹನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ತೇರದಾಳ ಶಾಸಕ ಸಿದ್ದು ಸವದಿ ಅವರು ಎತ್ತಿದ ಪ್ರಶ್ನೆಗೆ ಉಸಚಿ ಆರ್.ಬಿ.ತಿಮ್ಮಾಪುರ ಸಹ ಒಪ್ಪಿ, ಅರಣ್ಯ ಇಲಾಖೆ ಜಾಗ ಎಲ್ಲಿ ಎಷ್ಟೆಷ್ಟಿದೆ ಎಂದು ಸಮಗ್ರ ಸರ್ವೆ ಮಾಡಿ, ಬಂದುಬಸ್ತಿ ಹಾಕಿ. ಹಿಂದೆ ಅದು ಕಂದಾಯ ಭೂಮಿ ಎಂದು ದಾಖಲೆಗಳು ಇದ್ದರೆ ಆ ಬಗ್ಗೆ ಶಾಸಕರು, ಸಚಿವರ ಗಮನಕ್ಕೆ ತರಬೇಕು. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ, ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ಚರ್ಚೆ ಮಾಡೋಣ ಎಂದು ಡಿಎ-ï‌ಒ ಅವರಿಗೆ ಸೂಚಿಸಿದರು. ಇದಕ್ಕೆ ಒಂದು ತಿಂಗಳು ಕಾಲಾವಕಾಶ ಕೊಡಿ ಎಂದು ಡಿಎ-ï‌ಒ ಸಭೆಗೆ ತಿಳಿಸಿದರು.

ಸಭೆ ಆರಂಭದಲ್ಲೆ ಕೃಷಿ ಇಲಾಖೆ ಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಮುಖ್ಯವಾಗಿ ಸಚಿವ ತಿಮ್ಮಾಪುರ ಹಾಗೂ ಶಾಸಕ ಜೆ.ಟಿ.ಪಾಟೀಲ ಅವರು ಅಽಕಾರಿ ಕಾರ್ಯವೈಕರಿ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಜ. ೨೨ ರಂದು ನಡೆದಿದ್ದ ಅನುಸರಣಾ ವರದಿ ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರನ್ನು ಸಭೆಯಿಂದ ಹೊರಗೆ ಕಳುಹಿಸಿದ್ದ ಸಚಿವ ತಿಮ್ಮಾಪುರ, ಶನಿವಾರ ಸಭೆಯಲ್ಲೂ ಅಽಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಕೃಷಿ ಇಲಾಖೆಯಿಂದ -Àಲಾನುಭವಿಗಳಗೆ ಹಂಚಿಕೆ ಮಾಡಿರುವ ಪಂತ್ರೋಕರಣಗಳು ದುರುಪಯೋಗ ಆಗುತ್ತವೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಹೆಸರಿನಲ್ಲಿ ಇನ್ನ್ಯಾರು ಸಲಕರಣೆ ಪಡೆಯುತ್ತಿದ್ದಾರೆ. ಸಲಕರಣೆ ವಿತರಿಸಿದ ಬಳಿಕ -Àಲಾನುಭವಿಗಳ ಮನೆಯಲ್ಲಿ ವಸ್ತುಗಳ ಇವೆಯಾ ಎಂದು ಸರ್ವೆ ಮಾಡಲು ಸೂಚಿಸಿದ್ದರೂ ಈ ವರೆಗೂ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಹಾಗೆಯೇ ಸರ್ಕಾರದಿಂದ ನೇರವಾಗಿ ರೈತರಿಗೆ ಕೊಡುವ ವಸ್ತುಗಳ ಗುಣಮಟ್ಟ ಪರೀಕ್ಷೆ ಮಾಡದೇ ಎಲ್ಲವೂ ಗುಣಮಟ್ಟದ್ದು ಎಂದು ತೀರ್ಮಾನ ಮಾಡುತ್ತೀರಿ ಏಕೆ? ಮಾರುಕಟ್ಟೆಯ ಬೆಲೆಗೂ ಹಾಗೂ ಇಲಾಖೆಯಿಂದ ವಿತರಿಸುವ ವಸ್ತುಗಳ ಬೆಲೆಗೂ ಭಾರಿ ವ್ಯತ್ಯಾಸ ಇರುತ್ತದೆ ಅದೇಕೆ ಎನ್ನುವ ಪ್ರಶ್ನೆ ಮುಂದಿಟ್ಟರು. ಸರ್ಕಾರದ ಯಾವ ಯೋಜನೆಗಳು ಸಂಪೂರ್ಣ ಯಶಸ್ವಿ ಆಗುತ್ತಿವೆ, ಯಾವುದು ಆಗುತ್ತಿಲ್ಲ ಎನ್ನುವ ಬಗ್ಗೆ ಅಽಕಾರಿಗಳು ಯಾಕೆ ಸಲಹೆ ಕೊಡುವುದಿಲ್ಲ. ನಮ್ಮನ್ನು ಮನವೊಲಿಸುವ ಕೆಲಸ ಮಾತ್ರ ಮಾಡುತ್ತೀರಿ ಎಂದು ತರಾಟೆಗೆ ಸಚಿವರು ತೆಗೆದುಕೊಂಡರು. ಅದೇ ರೀತಿ ಮೇಲು ಕತ್ತರಿಸುವ ಯಂತ್ರದದ -Àಲಾನುಭವಿಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಿದರು.

ಹಾಗೆಯೇ ನಾವು ಜನಪ್ರತಿನಿಽಗಳು ಸಹ ಅನೇಕ ಸಂದರ್ಭದಲ್ಲಿ ಇವರಿಗೆ ಯೋಜನೆಗೆ ಆಯ್ಕೆ ಮಾಡಿ ಎಂದು ಒತ್ತಡ ಹಾಕಿರುತ್ತೇವೆ ನಿಜ. ಆದರೆ, ನೀವು ಆ ಒತ್ತಡ ಮೀರಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಜೆ.ಟಿ.ಪಾಟೀಲ ಅಽಕಾರಿಗಳಿಗೆ ಹೇಳಿದರು.

ಕೆಡಿಪಿ ಸಭೆಗೆ ನೀಡುವ ಇಲಾಖೆ ಮಾಹಿತಿಯಲ್ಲಿ ಎಸ್‌ಇಪಿ, ಎಸ್‌ಟಿಪಿ ಬಗ್ಗೆ ಪ್ರತ್ಯೇಕ ಮಾಹಿತಿ ಇರದಿರುವ ಬಗ್ಗೆಯೂ ಅಸಮಧಾನ ಹೊರಹಾಕಿದ ಸಚಿವರು, ಮುಂದಿನ ಸಭೆಗಳಲ್ಲಿ ಈ ಬಗ್ಗೆ ಪ್ರತ್ಯೇಕ ಮಾಹಿತಿ ಒದಗಿಸಬೇಕು ಎಂದು ಜಿಪಂ ಸಿಇಒ ಶಶಿಧರ ಕುರೇರ್ ಅವರಿಗೆ ಸೂಚಿಸಿದರು.

ಸೂಕ್ಷ÷್ಮ ಹನಿ ನೀರಾವರಿ ಯೋಜನೆ ಅಡಿಯಲ್ಲಿ ಒದಗಿಸುವ ಪೈಪುಗಳು ಗುಣಮಟ್ಟ ಸರಿ ಇರಲ್ಲ, ಅನೇಕ ರೈತರು ಅವುಗಳನ್ನು ಕಿತ್ತು ಹಾಕಿದ್ದಾರೆ. ಕೆಲವರು ಹೆಸರಿಗೆ ಮಾತ್ರ -Àಲಾನುಭವಿಗಳು ಇದ್ದು, ಇಲ್ಲಿ ದುರುಪಯೋಗ ಆಗುತ್ತಿದೆ ಎಂದು ಸ್ವತಃ ಸಚಿವರು ಆರೋಪಿಸಿದರು. ಆಗ ಮಧ್ಯ ಪ್ರವೇಶಿಸಿದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಹನಿ ನೀರಾವರಿ ಯೋಜನೆ ಬಗ್ಗೆ ರೈತರು ಆಸಕ್ತಿ ವಹಿಸಬೇಕು. ಆಗ ಯೋಜನೆ ಯಶಸ್ವಿ ಆಗುತ್ತದೆ. ಇಲ್ಲವಾದರೆ ಆಗಲ್ಲ ಎಂದು ಅದಕ್ಕೆ ರಾಮಥಾಳ ಹನಿ ನೀರಾವರಿ ಯೋಜನೆ ವೈಲಪ್ಯದ ಬಗ್ಗೆ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಅಽಕಾರಿಗಳು ರೈತರಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ಕೊಡಬೇಕು ಎಂದು ಸಚಿವರು ಹೇಳಿದರು.

ಇನ್ನು ರೈತರಿಗೆ ಕೇಂದ್ರ ಸರ್ಕಾರದ ಎ-ï‌ಐಡಿ ನಂಬರ್ ವಿತರಣೆ ಬಗ್ಗೆ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಗಮನ ಸೆಳೆದರು. ಜಿಲ್ಲೆ ರಾಜ್ಯದಲ್ಲಿ ೨ನೇ ಸ್ಥಾನದಲ್ಲಿದೆ. ಶೇ. ೮೪ ರಷ್ಟು ಪ್ರಗತಿ ಸಾಽಸಿದ್ದೇವೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿಳಿಸಿದಾಗ, ಹಿಂದಿನ ಕೆಡಿಪಿ ಸಭೆಯಲ್ಲೂ ಇದೇ ಅಂಕಿ ಅಂಶ ಹೇಳಿದ್ದೀರಿ. ಈಗಲೂ ಅದನ್ನೆ ಹೇಳುತ್ತಿದ್ದೀರಿ. ಅದು ರಾಜ್ಯ ಸರ್ಕಾರದ್ದೆ ಇರಲಿ, ಕೇಂದ್ರ ಸರ್ಕಾರದ್ದೆ ಇರಲಿ, ಅದನ್ನು ಸಪರ್ಕವಾಗಿ ಅನುಷ್ಟಾನಗೊಳಿಸಬೇಕು. ಈ ನಂಬರ್ ರೈತರಿಗೆ ಕೊಟ್ಟರೆ ಯೋಜನೆ ಯಾವ ರೈತರಿಗೆ ಎಷ್ಟು ಪ್ರಮಾಣದಲ್ಲಿ ಮುಟ್ಟಿವೆ ಎನ್ನುವುದು ಸರ್ಕಾರಕ್ಕೆ ಅಂಕಿ ಅಂಶಗಳಿAದ ತಿಳಿಯುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಪರಿಷತ್ ಸದಸ್ಯ ಉಮಾಶ್ರೀ, ಜಿಲ್ಲಾಽಕಾರಿ ಜಾನಕಿ ಕೆ.ಎಂ, ಸಿಇಒ ಶಶಿಧರ ಕುರೇರ, ಎಸ್ಪಿ ಅಮರನಾಥ ರೆಡ್ಡಿ ಸೇರಿ ವಿವಿಧ ಇಲಾಖೆ ಅಽಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net