

ಯು.ಎಸ್. ಪಾಟೀಲ ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಉಳವಿ ಶ್ರೀ ಚನ್ನಬಸವೇಶ್ವರ ದೇವಸ್ಥಾನ ವೀರಶೈವ ಸಮಾಜದ ಪ್ರಮುಖ ತೀರ್ಥ ಕ್ಷೇತ್ರ. ಈ ದೇವಾಲಯಕ್ಕೆ ರಾಜ್ಯದ, ದೇಶದ ನಾನಾ ಪ್ರದೇಶದ ಸರ್ವಧರ್ವಿುಯರು ಬರುತ್ತಾರೆ.
ಶ್ರೀ ಕ್ಷೇತ್ರ ಉಳವಿಯ ಮಹಾರಥೋತ್ಸವ ಫೆ. 10ರಂದು ಸಂಜೆ 4 ಗಂಟೆಗೆ ಜರುಗಲಿದೆ. ರಥೋತ್ಸವ ಸಂದರ್ಭದಲ್ಲಿ ಸುಮಾರು 2.5 ಲಕ್ಷ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಉಳವಿ ಕ್ಷೇತ್ರದ ಹಿನ್ನಲೆ: 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಅಂತರ್ ಜಾತಿಯ ವಿಷಯ ಕುರಿತು ಕಾಂತ್ರಿಯ ವಾತಾವರಣ ಉದ್ಭವಿಸಿದಾಗ ಕಲ್ಯಾಣದ ದೊರೆ ಬಿಜ್ಜಳ ಹಾಗೂ ಆತನ ಸೈನಿಕರಿಂದ ವಚನ ಗ್ರಂಥಗಳ ರಕ್ಷಣೆಗೆ ಪಣತೊಟ್ಟ ಚನ್ನಬಸವೇಶ್ವರರು ಹಾಗೂ ಇತರ ಶರಣ-ಶರಣೆಯರು ಕಲ್ಯಾಣದಿಂದ ಉಳವಿಗೆ ಬಂದು ನೆಲೆಸಿದರು. ಶರಣರು ಉಳಿದ ಸ್ಥಳಕ್ಕೆ ಉಳವಿ ಎಂಬ ಹೆಸರು ಬಂದಿತು.
ಶ್ರೀ ಚನ್ನಬಸವೇಶ್ವರರು ಈ ಸ್ಥಳದಲ್ಲಿ ವಚನಗಳ ರಕ್ಷಣೆಯ ಜೊತೆಗೆ ಧರ್ಮ ಪ್ರಚಾರ ಹಾಗೂ ವಚನ ಸಾಹಿತ್ಯಕ್ಕೆ ಮಹತ್ವ ನೀಡಿ ತಪಸ್ಸಿನಲ್ಲಿ ಕಾಲ ಕಳೆದರು. ಚನ್ನಬಸವೇಶ್ವರರ ನಿರ್ವಿಕಲ್ಪ ಸಮಾಧಿಯಲ್ಲಿ (ಜೀವಂತ ಸಮಾಧಿ) ನಿರ್ವಿುಸಿದ ದೇವಾಲಯವೇ ಉಳವಿ ದೇವಾಲಯವಾಗಿದೆ.
ಉಳವಿಯ ಶಿವ ದೇವಾಲಯದ ಗರ್ಭಗುಡಿಯಲ್ಲಿ ಚನ್ನಬಸವೇಶ್ವರರ ಸಮಾಧಿಯ ಗದ್ದುಗೆಯ ಮೇಲೆ ನಂದಿಯ ವಿಗ್ರಹ, ಪಕ್ಕದಲ್ಲಿ ಬಸವೇಶ್ವರ, ಮಲ್ಲಿಕಾರ್ಜುನ ಹಾಗೂ ಸಂಗಮೇಶ್ವರ ವಿಗ್ರಹಗಳಿವೆ.
ಮೂಲ ದೇವಾಲಯದ ಜಿಣೋದ್ಧಾರ 1976 ರಲ್ಲಿ ಆರಂಭಗೊಂಡು 1979 ರಲ್ಲಿ ಪೂರ್ಣಗೊಂಡಿದೆ. ದೇವಾಲಯದ ಗೋಪುರದಲ್ಲಿ 23 ಶರಣರ ಮೂರ್ತಿಗಳನ್ನು ನಿರ್ವಿುಸಲಾಗಿದೆ.
ವಸತಿ ವ್ಯವಸ್ಥೆ: ಉಳವಿ ಕ್ಷೇತ್ರದ ಇತರ ದೇವಾಲಯಗಳು: ಉಳವಿಯ ದೇವಸ್ಥಾನದ ಸಮೀಪದಲ್ಲಿ ವೀರಭದ್ರೇಶ್ವರ, ಬಸವೇಶ್ವರ, ಶಿವತೀರ್ಥ, ಅಕ್ಕ ಮಹಾದೇವಿ, ಪಂಚ ಲಿಂಗೇಶ್ವರ ದೇವಾಲಗಳಿವೆ.
ಗುಹೆಗಳು: ಉಳವಿಯ ಸಮೀಪ ಆಕಳ ಗವಿ, ಅಕ್ಕನಾಗಮ್ಮನ ಗುಹೆ, ರುದ್ರಾಕ್ಷಿ ಮಂಟಪ, ಹರಳಯ್ಯನ ಚಿಲುಮೆ ಪ್ರಸಿದ್ಧಿ ಪಡೆದಿವೆ.
ಉಳವಿಗೆ ಬರುವ ಭಕ್ತಾದಿಗಳಿಗಾಗಿ 75 ಕೋಣೆಗಳ ಬಸವ ಭವನ, 32 ಕೋಣೆಗಳ ಅಕ್ಕನಾಗಮ್ಮ ಭವನ, 40 ಕೋಣೆಗಳ ಯಾತ್ರಿ ನಿವಾಸ, 22 ಕೋಣೆಗಳ ಶಿವದೇವಾಲಯ ನಿವಾಸ ನಿರ್ವಿುಸಲಾಗಿದೆ. ಇದಲ್ಲದೆ, ಬಹುಸಂಖ್ಯೆಯಲ್ಲಿ ಭಕ್ತಾದಿಗಳು ತಾತ್ಪೂರ್ತಿಕವಾಗಿ ತಟ್ಟಿ ಕೋಣೆಗಳನ್ನು ನಿರ್ವಿುಸಿ ವಾಸ ಮಾಡುತ್ತಾರೆ. ಈ ವರ್ಷ ಚಕ್ಕಡಿ ಬಂಡೆಯ ಮೇಲೆ ಭಕ್ತಾದಿಗಳ ಬರುವಿಕೆ ಹೆಚ್ಚಾಗಿದೆ. ಹಲವಾರು ವರ್ಷಗಳಿಂದ ಕನಿಷ್ಠ 600 ರಿಂದ 700 ಚಕ್ಕಡಿ ಬಂಡೆಗಳಲ್ಲಿ ಭಕ್ತಾದಿಗಳು ಉಳವಿಗೆ ಬರುವ ರೂಢಿಯಿತ್ತು. ಕಳೆದ 3, 4 ವರ್ಷಗಳಲ್ಲಿ ಈ ಸಂಖ್ಯೆ ಕಡಿಮೆಯಾಗಿತ್ತು. ಆದರೆ, ಈ ಬಾರಿ ಈಗಾಗಲೇ ಅಂದಾಜು 500 ಚಕ್ಕಡಿ ಬಂಡಿಗಳಲ್ಲಿ ಭಕ್ತಾದಿಗಳು ಆಗಮಿಸಿರುವುದು ವಿಶೇಷವಾಗಿದೆ.
ಉಳವಿ ಜಾತ್ರೆ ಅಂಗವಾಗಿ ಫೆ. 10ರವರೆಗೆ ಪಟೋಲಿ-ಉಳವಿ ಮಾರ್ಗದಲ್ಲಿ ಕೇವಲ ಪಾದಚಾರಿಗಳಿಗೆ ಹಾಗೂ ಚಕ್ಕಡಿಗಳಿಗೆ ಹಗಲು-ರಾತ್ರಿ ಪ್ರವೇಶ ಕಲ್ಪಿಸಲಾಗಿದ್ದು, ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಕೆ.ಎಸ್.ಗೊರವಾರ,
| ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವನ್ಯ ಜೀವಿ ವಿಭಾಗ, ದಾಂಡೇಲಿ
ಉಳವಿ ಜಾತ್ರೆಗೆ ವೈದ್ಯರ ನಿಯೋಜನೆ
ಜೊಯಿಡಾ: ಶ್ರೀ ಚನ್ನಬಸವೇಶ್ವರ ದೇವರ ಜಾತ್ರೆ ಪ್ರಯುಕ್ತ ಉಳವಿಯಲ್ಲಿ ಇಬ್ಬರು ವೈದ್ಯರನ್ನು ಜಾತ್ರೆ ಮುಗಿಯುವವರೆಗೆ ನಿಯೋಜಿಸಲಾಗಿದೆ. ತುರ್ತು ಸೇವೆಗಾಗಿ ಒಂದು ಆಂಬುಲೆನ್ಸ್ ಸನ್ನದ್ಧವಾಗಿದೆ ಎಂದು ತಾಲೂಕಾಸ್ಪತ್ರೆಯ ಆಡಳಿತಾಧಿಕಾರಿ ಡಾ. ವಿಜಯಕುಮಾರ ಹೇಳಿದರು.
ತಾಲೂಕು ಪಂಚಾಯಿತಿಯಲ್ಲಿ ಬುಧವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ಸರಿಯಾಗಿ ವಿತರಿಸುತ್ತಿಲ್ಲ. ಇದರಿಂದ ಹಳ್ಳಿಗಳ ಜನ ಪರದಾಡುವಂತಾಗಿದೆ ಎಂದು ಗ್ರಾಪಂ ಸದಸ್ಯ ಸಂತೋಷ ಮಂಥೇರೊ ಆರೋಪಿಸಿದರು.
ಪ್ರತಿಕ್ರಿಯಿಸಿದ ವಿಜಯಕುಮಾರ, ‘ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ಆರೋಗ್ಯ ಕಾರ್ಡ್ ಕೊಡಲಾಗುತ್ತಿದೆ. ಅಲ್ಲಿ ಸಿಗದಿದ್ದರೆ ತಾಲೂಕಾಸ್ಪತ್ರೆಗೆ ಬರಬಹುದು’ ಎಂದರು.
ಡಿಗ್ಗಿ ಮತ್ತು ಕ್ಯಾಸಲ್ರಾಕ್ ಆಸ್ಪತ್ರೆಗೆ ವೈದ್ಯರು ಸರಿಯಾಗಿ ಬರುತ್ತಿಲ್ಲ ಎಂಬ ದೂರುಗಳಿವೆ ಎಂದು ಜಿಪಂ ಸದಸ್ಯ ಸಂಜಯ ಹಣಬರ ಸಭೆಯ ಗಮನಕ್ಕೆ ತಂದರು.
ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯ ಅಧಿಕಾರಿ ಸುಜಾತಾ ಉಕ್ಕಲಿ, ‘ಈ ಕುರಿತು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಅವರಿಗೆ ತಿಳಿಸಲಾಗಿದೆ. ಆದರೆ, ಅವರು ನಮ್ಮ ಮಾತು ಕೇಳುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಈ ಬಗ್ಗೆ ಠರಾವು ಮಾಡಿ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ತಿಳಿಸಲಾಯಿತು.
ಕೃಷಿ ಇಲಾಖೆ ಅಧಿಕಾರಿ ಪಿ.ಐ. ಮಾನೆ ಮಾತನಾಡಿ, ‘ಪ್ರತಿ ಕ್ವಿಂಟಾಲ್ ಭತ್ತಕ್ಕೆ 1,815 ರೂ. ಮತ್ತು ಎ ಗ್ರೇಡ್ ಭತ್ತಕ್ಕೆ 1,835 ರೂ. ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ ಎಂದರು.
ತಾಪಂ ಸದಸ್ಯ ಶರದಚ್ಚಂದ್ರ ಗುರ್ಜರ ಮಾತನಾಡಿ, ಈ ಹಿಂದಿನ ಪಶುವೈದ್ಯ ದೇವೇಂದ್ರ ಲಮಾಣಿ ಅವರು ತಾಲೂಕಿನ ಜಳಕಟ್ಟಿಯ 12 ಧನಗರ ಗೌಳಿ ಜನರಿಂದ ಸರ್ಕಾರದ ಸಹಾಯಧನ ಕೊಡಿಸುವುದಾಗಿ ಹಣ ಪಡೆದು ಮೋಸ ಮಾಡಿದ್ದಾರೆ. ಕಾಡು ಪ್ರಾಣಿ ದಾಳಿಯಿಂದ ಸಾವನ್ನಪ್ಪಿದ ಮಹಿಳೆಗೆ ಪರಿಹಾರ ಕೊಡಿಸಲೂ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೀರಿ? ಎಂದು ಸಭೆಯಲ್ಲಿ ಪ್ರಶ್ನಿಸಿದರು.
ಪ್ರಭಾರ ಪಶು ವೈದ್ಯಾಧಿಕಾರಿ ಡಾ. ರವಿ ಪ್ರತಿಕ್ರಿಯಿಸಿ, ‘ನಾನು ಹೊಸದಾಗಿ ಬಂದಿದ್ದು, ಹಿಂದಿನ ಮಾಹಿತಿ ಗೊತ್ತಿಲ್ಲ. ಮುಂದೆ ಈ ರೀತಿ ಆಗದಂತೆ ಕೆಲಸ ನಿರ್ವಹಿಸುತ್ತೇನೆ’ ಎಂದರು.
‘ಗುಂದ ಪಶು ವೈದ್ಯರು ಮಧ್ಯಾಹ್ನ ಬಂದು ಹೊಗುತ್ತಿದ್ದಾರೆ. ಜನರು 2 ರಿಂದ 3 ಸಾವಿರ ರೂ. ನೀಡಿ ಪಶು ವೈದ್ಯರನ್ನು ಕರೆ ತರುವ ಪರಿಸ್ಥಿತಿ ಇದೆ. ಈ ಬಗ್ಗೆ ತಾಪಂ ಸಭೆಯಲ್ಲಿ 4 ವರ್ಷಗಳಿಂದ ರ್ಚಚಿಸಲಾಗುತ್ತಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಂದಿಗದ್ದಾ ಗ್ರಾಪಂ ಸದಸ್ಯ ಆರ್.ವಿ. ದಾನಗೇರಿ ದೂರಿದರು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಾ. ರವಿ ತಿಳಿಸಿದರು.
ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸತೀಶ ಅವರು ಕುವೇಶಿ ರಸ್ತೆ 2.6 ಕಿ.ಮೀ. ಡಾಂಬರೀಕರಣ ಮಾಡಲು ಅರಣ್ಯ ಇಲಾಖೆ ಅನುಮತಿ ನೀಡಿದೆ ಎಂದು ತಿಳಿಸಿದರು. ತಾಪಂ ಅಧ್ಯಕ್ಷೆ ನರ್ಮದಾ ಪಾಟ್ನೇಕರ ಅಧ್ಯಕ್ಷತೆ ವಹಿಸಿದ್ದರು.