

ಅರಕಲಗೂಡು: ವಿದ್ಯಾರ್ಥಿಗಳು ಕಲಿಕೆಯತ್ತ ಆಸಕ್ತಿ ವಹಿಸಿ ಉನ್ನತ ಶಿಕ್ಷಣ ಗಳಿಸುವ ಮೂಲಕ ಭವಿಷ್ಯ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಶಾಸಕ ಎ.ಮಂಜು ಸಲಹೆ ನೀಡಿದರು.
ತಾಲೂಕಿನ ಬರಗೂರು ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ ದೊಡ್ಡಮಗ್ಗ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಮತ್ತು ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಣ ಕೊಟ್ಟು ಬೇರೆ ಏನನ್ನಾದರೂ ಕೊಂಡುಕೊಳ್ಳಬಹುದು ಆದರೆ ವಿದ್ಯೆ ಕದಿಯಲಾದ ವಸ್ತು, ಹೀಗಾಗಿ ಪರಿಶ್ರಪಟ್ಟು ಕಲಿತರೆ ಸಾಧನೆಯ ಮೆಟ್ಟಿಲೇರಬಹುದು ಎಂದರು.
ದೊಡ್ಡಮಗ್ಗೆ ಪಿಯು ಕಾಲೇಜಿನಲ್ಲಿ ಕಲಿತವರು ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಕಾಲೇಜಿನಲ್ಲಿ ಉತ್ತಮ ಉಪನ್ಯಾಸಕರಿದ್ದು ವಿದ್ಯಾರ್ಥಿಗಳು ವಿದ್ಯೆಗೆ ಆದ್ಯತೆ ನೀಡಿ ಉನ್ನತ ಸ್ಥಾನಕ್ಕೇರಬೇಕು. ಅತಿಯಾದ ಮೊಬೈಲ್ ಬಳಕೆಗೆ ಕಡಿವಾಣ ಹಾಕಿ ಓದಿನೊಂದಿಗೆ ಕ್ರೀಡಾ ಚಟುವಟಿಕೆ ಕಡೆಗೂ ಒತ್ತು ನೀಡಬೇಕು ಎಂದು ಹೇಳಿದರು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಆಂಗ್ಲ ಭಾಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಮಾನ್ಯ ಅವರಿಗೆ ಆಂಗ್ಲಭಾಷೆ ಉಪನ್ಯಾಸಕ ಬಾಬುವರ್ಧನ್ 10 ಸಾವಿರ ರೂ. ಸಹಾಯ ಧನ ನೀಡಿ, ಮುಂದಿನ ಸಾಲಿನಲ್ಲಿಯೂ ಹೆಚ್ಚ ಅಂಕ ಪಡೆಯುವ ವಿದ್ಯಾರ್ಥಿಗೆ ಇದೇ ರೀತಿ ಪ್ರೋತ್ಸಾಹ ಧನ ನೀಡುವುದಾಗಿ ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಂ.ಆರ್.ಮಂಜುನಾಥ್, ಗ್ರಾಪಂ ಅಧ್ಯಕ್ಷ ರಮೇಶ್, ಮಾಜಿ ಅಧ್ಯಕ್ಷ ಅಶೋಕ್, ಪ್ರಾಂಶುಪಾಲೆ ಅಚಿಜುಂ ಫರ್ಜಾನ್, ಉಪನ್ಯಾಸಕರಾದ ಶಶಿಧರ್, ಗುರುಪ್ರಸಾದ್, ಷಣ್ಮುಖ, ಶಿವಶಂಕರ್, ವಸಂತಕುಮಾರಿ, ಪೂರ್ಣಿಮಾ, ಮೇಘನಾ, ಅಂಬಿಕಾ, ಶಾಂತಮ್ಮ, ಸಿಡಿಸಿ ಸದಸ್ಯರು ಇದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು