

ಬಾಗಲಕೋಟೆ: ಉದ್ಯಮದಿಂದ ಶಿಕ್ಷಣ ಕ್ಷೇತ್ರ ಶ್ರೀಮಂತಗೊಳ್ಳುವುದಕ್ಕಿಂತ ಸೂಕ್ತ ಶಿಕ್ಷಣದಿಂದ ಉದ್ಯಮ ಕ್ಷೇತ್ರ ಶ್ರೀಮಂತ ಗೊಳ್ಳುತ್ತದೆ. ಹೀಗಾಗಿ ಉದ್ಯಮಕಿಂತ ಶಿಕ್ಷಣ ಕ್ಷೇತ್ರ ವಿಭಿನ್ನ ಎಂದು ಸಂಗಮೇಶ್ ನಿರಾಣಿ ಅಭಿಪ್ರಾಯ ಪಟ್ಟರು.
ನಗರದ ಎಂ ಆರ್ ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಶರೀರ ಚಿಂತನ- 2024 ರ ರಾಷ್ಟ್ರಮಟ್ಟದ ಕಾರ್ಯಾಗಾರದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಉದ್ಯಮದಿಂದ ಶಿಕ್ಷಣ ಶ್ರೀಮಂತವಾಗುವುದಕ್ಕಿಂತ ಶಿಕ್ಷಣದಿಂದ ಉದ್ಯಮ ಶ್ರೀಮಂತ ಗೊಳ್ಳುತ್ತದೆ. ಹೀಗಾಗಿ ಇಂತಹ ವಿಭಿನ್ನ ಶೈಕ್ಷಣಿಕ ಕ್ಷೇತ್ರಗಳ ಚಟುವಟಿಕೆಗಳು ಎಲ್ಲರಿಗೂ ಮಾದರಿಯಾಗಲಿ ಎಂದರು.
ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣಸಾ ಬಾಂಡಗೆ ಮಾತನಾಡುತ್ತಾ ಇಂತಹ ರಾಷ್ಟ್ರಮಟ್ಟದ ಕಾರ್ಯಗಾರವನ್ನು ಯಶಸ್ವಿಯಾಗಿ ನಿಭಾಯಿಸಿದ ಸಂಸ್ಥೆಯ ಕಾರ್ಯ ಶ್ರೇಷ್ಠ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಗಣೇಶ್ ಪುತ್ತೂರ ಮಾತನಾಡುತ್ತಾ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಪ್ರಯತ್ನಗಳು ಹೆಚ್ಚಾದಂತೆ ವೈದ್ಯಕೀಯ ವಿದ್ಯಾರ್ಥಿಗಳ ಮಾನಸಿಕ ಸಾಮರ್ಥ್ಯ ಹೆಚ್ಚುವುದಲ್ಲದೆ ಹೊಸ ಸಂಶೋಧನೆಗಳಿಗೆ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟಿ ಐ ಟಿ ಐ ನ ಅಧ್ಯಕ್ಷರಾದ ಮಾಧುರಿ ಮುಧೋಳ ಮಾತನಾಡಿ ಈ ಕಾರ್ಯಗಾರದಲ್ಲಿ ಪಾಲ್ಗೊಂಡ ತಮ್ಮೆಲ್ಲರಿಗೂ ಶುಭವಾಗಲಿ ಹಾಗೂ ಈ ಕಾರ್ಯ ತಮಗೆ ಯಶಸ್ಸನ್ನು ತಂದು ಕೊಡಲಿ ಎಂದು ಆಶಿಸಿದರು.
ಕೊನೆಯ ದಿನದ ಉಪನ್ಯಾಸದಲ್ಲಿ ಡಾ. ಉಮಾ ಗೋಪಾಲ್, ಡಾ.ತುಕಾರಾಮ್ ರಾಥೋಡ್, ಡಾ. ಗುರುಬಸವರಾಜ, ಡಾ. ಶಿವಪ್ರಸಾದ್ ಸಿ ಇವರುಗಳು ವಿವಿಧ ವಿಷಯಗಳ ಮೇಲೆ ವಿಷಯ ಮಂಡಿಸಿದರು. ಕಾರ್ಯಕ್ರಮದಲ್ಲಿ ಡಾ.ಮಹಾಂತೇಶ್ ರಾಮಣ್ಣವರ್ ಇವರಿಗೆ ಸಂಸ್ಥೆಯ ಪರವಾಗಿ ಶರೀರ ರತ್ನ - 2024 ರ ಪ್ರಶಸ್ತಿಯನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಹಲ್ಲಾದ್ ಗಂಗಾವತಿ, ಕಾಲೇಜಿನ ಡೀನ್/ ಆಡಳಿತಾಧಿಕಾರಿಯಾದ ಡಾ. ಶಿವಕುಮಾರ್ ಗಂಗಾಲ್, ಶರೀರ ಕ್ರೀಯಾ ವಿಭಾಗದ ಡಾ. ದೀಪಾ ಗಂಗಾಲ, ಶರೀರ ರಚನಾ ವಿಭಾಗದ ಡಾ.ರಜನಿ ದಡೆದ, ಸಂಸ್ಥೆಯ ಎಲ್ಲ ಪ್ರಾಧ್ಯಾಪಕ ವರ್ಗ ಹಾಗೂ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಶಿಕ್ಷಕರು ಪಾಲ್ಗೊಂಡಿದ್ದರು.