

ಕೂಡ್ಲಿಗಿ: ಸಮೀಪದ ಹಿರೇಹೇಗ್ಡಾಳು ಗ್ರಾಮದಲ್ಲಿ ಸ್ನೇಹ ಸಂಸ್ಥೆಯ ಥಾಟ್ ವರ್ಕ್ಸ ಇಂಡಿಯಾ ಸಹಯೋಗದೊಂದಿಗೆ
6 ತಿಂಗಳ ಉಚಿತ ಹೊಲಿಗೆ ಮತ್ತು ಫ್ಯಾಶನ್ ಡಿಸೈನ್ ತರಬೇತಿ ಕೇಂದ್ರದ ಉದ್ಘಾಟನೆ ಶನಿವಾರ ಮಾಡಲಾಯಿತು.
ಸ್ನೇಹ ಸಂಸ್ಥೆಯ ನಿರ್ದೇಶಕ ಟಿ.ರಾಮಾಂಜನೇಯ ಮಾತನಾಡಿ, ದಮನಿತ ಮತ್ತು ದಲಿತ ಮಹಿಳೆಯರು ತರಬೇತಿ ಪಡೆದು ಸ್ವಾವಲಂಬಿ ಜೀವನ ನಡೆಸಲು ಸಹಾಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದವರಿಗಿಂತ ವೃತ್ತಿ ತರಬೇತಿಯನ್ನು ಪಡೆದುಕೊಂಡವರಿಗೆ ಹೆಚ್ಚು ಅವಕಾಶಗಳು ಸಿಗುತ್ತಿವೆ. ಆ ನಿಟ್ಟಿನಲ್ಲಿ ಸ್ನೇಹ ಸಂಸ್ಥೆಯಿಂದ 4,000 ಹೆಣ್ಣು ಮಕ್ಕಳು ತರಬೇತಿ ಪಡೆದುಕೊಂಡು ಶೇ. 90 ಸ್ವಾವಲಂಬನೆ ಜೀವನ ನಡೆಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ನಿರ್ದಿಷ್ಟ ಗುರಿ ಇಟ್ಟುಕೊಂಡು ಅಧ್ಯಯನ ಮಾಡಿ
ಸಹ ನಿರ್ದೇಶಕಿ ಕೆ.ಪಿ. ಜಯಾ ಮಾತಾನಾಡಿ, ಮಹಿಳೆಯರು ಬದಲಾದ ಜಗತ್ತಿನಲ್ಲಿ ಎ್ಲ ರಂಗದಲ್ಲಿಯೂ ತಮ್ಮ ಛಾಪು ಮೂಡಿಸಿ ತಾನು ಅಬಲೆಯಲ್ಲ ಸಬಲೆ ಎಂದು ಸಾಬೀತು ಮಾಡಿದ್ದಾರೆ. ಯುವತಿಯರು ಸಹ ನಿರ್ದಿಷ್ಟ ಗುರಿ ಇಟ್ಟುಕೊಂಡು ತರಬೇತಿ ಪಡೆದು ಸ್ವಯಂ ಉದ್ಯೋಗಿಗಳಾಗುವಂತೆ ಸಲಹೆ ನೀಡಿದರು.
ಮುಖಂಡರಾದ ಪಂಪಣ್ಣ, ಸದಸ್ಯರಾದ ಬಸವರಾಜ, ಸೋಮಶೇಖರ, ರುದ್ರಪ್ಪ ಹಾಗೂ ಮಾಜಿ ಅಧ್ಯಕ್ಷ ಪಕೀರಪ್ಪ, ಅಕ್ಷಯ, ಸ್ನೇಹ ಸಿಬ್ಬಂದಿಗಳಾದ ಆರ್.ಜಿ. ಮಹಾದೇವಿ, ಕೆ. ಮಂಜುಳಾ, ಎಚ್.ಎಂ.ಶೈಲಜಾ, ಎಚ್. ಗೀತಾ ಇತರರಿದ್ದರು.