

ಬಾಗಲಕೋಟೆ: ಅಽಕಮಾಸದ ಅಂಗವಾಗಿ ಆನಂದ ಪುರುಷೋತ್ತಮನ ಪ್ರೀತ್ಯರ್ಥವಾಗಿ ಹಾಗೂ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಸುವರ್ಣ ಸಂಭ್ರಮದ ನಿಮಿತ್ತ ನವನಗರದ ಉತ್ತರಾಽ ಮಠದಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ಕೈಂಕರ್ಯಗಳು ಜರುಗಿದವು.
ಬೆಳಗ್ಗೆ ವಿವಿಧ ಪೂಜೆಗಳ ನಂತರ ನರಸಿಂಹ ಸ್ತುತಿ ಹೋಮ, ವಾಯುಸ್ತುತಿ ಪುರಶ್ಚರಣ ಹೋಮವು ವಿದ್ವಾಂಸರು, ವೈದಿಕರ ವೃಂದದ ನೇತೃತ್ವದಲ್ಲಿ ಅತ್ಯಂತ ವೈಭವದಿಂದ ಜರುಗಿತು. ಈ ಸಂದರ್ಭದಲ್ಲಿ ಪಂ.ವೆಂಕಟೇಶಾಚಾರ್ಯ ಬಿ.ಆರ್., ಪಂಣೀಂದ್ರ ಆಚಾರ್ಯ ಕೊರ್ಲಳ್ಳಿ. ಪಂ.ರಘೋತ್ತಮಾಚಾರ್ಯ ನಾಗಸಂಪಿಗೆ, ವಾದಿರಾಜ ಆಚಾರ್ಯ ಕಂಚಿ. ವಿಜೇಂದ್ರ ಆಚಾರ್ಯ ನಾಗಸಂಪಿಗೆ, ಉತ್ತರಾದಿ ಮಠದ ವ್ಯವಸ್ಥಾಪಕ ಪಂಡಿತ ಭೀಮಸೇನ ಆಚಾರ್ಯ, ಕೆ.ಎಸ್.ದೇಶಪಾಂಡೆ. ಎನ್.ಬಿ.ಆಲೂರ, ಅಶೋಕ ಹಲ್ಯಾಳ, ಜಿ.ಆರ್.ದೇಶಪಾಂಡೆ, ಎಸ್.ವಿ.ಪಂಚಮುಖಿ. ಡಾ.ಜೀ.ವಿ.ಹುಯಿಲಗೋಳ. ಡಾ.ಪವನ ಕುಲಕರ್ಣಿ, ಎಂ.ಎಸ್.ಪರಾಂಡೆ ಇದ್ದರು.