ಉತ್ತರಾದಿಮಠದಲ್ಲಿ ಶ್ರೀಕೇಶವದೇವರು ವಿರಾಜಮಾನ..!

bkt-13-5 a
ತ್ತರಾದಿಮಠಾಧೀಶರಾದ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ಶ್ರೀಕೇಶವ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ
Published on

ಬಾಗಲಕೋಟೆ: ಉತ್ತರಾದಿಮಠಾಧೀಶರಾದ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ರವಿವಾರ ನವನಗರದ ಶ್ರೀಮಠದಲ್ಲಿ ಕಿಲ್ಲಾ ಓಣಿಯಲ್ಲಿದ್ದ ಐತಿಹಾಸಿಕ ಶ್ರೀಕೇಶವದೇವರ ಮೂರ್ತಿಯನ್ನು ಪುನರ್‌ಪ್ರತಿಷ್ಠಾಪಿಸಿದರು.

ಬೆಳಗ್ಗೆ ಶ್ರೀಗಳಿಂದ ಜರುಗಿದ ಶ್ರೀಮೂಲರಾಮದೇವರ ಪೂಜೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಶ್ರೀಕೇಶವ ದೇವರು, ಶ್ರೀಮಠದ ಆವರಣದಲ್ಲಿ ಶ್ರೀರುದ್ರದೇವರನ್ನು ಪ್ರತಿಷ್ಠಾಪಿಸಿದ ನಂತರ ಸಭಾ ಕಾರ್ಯಕ್ರಮದಲ್ಲಿ ಸ್ವಾಮೀಜಿ ಪಾಲ್ಗೊಂಡರು. ಸಭೆಯಲ್ಲಿ ಶ್ರೀಮಠಕ್ಕೆ ಶ್ರೀಕೇಶವದೇವರ ವಿಗ್ರಹವನ್ನು ಅರ್ಪಿಸಿದ ಶ್ರೀನಿವಾಸಾಚಾರ್ಯ ಮಳಗಿ ಕುಟುಂಬದವರನ್ನು ಸನ್ಮಾನಿಸಿ ಆಶೀರ್ವದಿಸಿದರು.

ನಂತರ ಪ್ರವಚನ ನೀಡಿದ ಶ್ರೀಗಳು ಶ್ರೀಕೇಶವದೇವರ ನಿತ್ಯ ಸ್ಮರಣೆಯನ್ನು ಮಾಡಬೇಕು. ಭಗವಂತನ ಸ್ಮರಣೆಯಿಂದ ಸಕಾರಾತ್ಮಕತೆ ಉಂಟಾಗುತ್ತದೆ. ಪಾಪಗಳು ಪರಿಹಾರವಾಗುತ್ತದೆ ಎಂದು ಹೇಳಿದರು.

ವಿಪ್ರರು ನಿತ್ಯ ಸಂಧ್ಯಾವAದನೆ ಮಾಡಬೇಕು. ಭಗವಂತರ ನಾಮಸ್ಮರಣೆಯಲ್ಲಿ ಸಕಲ ಶಕ್ತಿಯೂ ಅಡಗಿದೆ. ಅದರ ಮಹತ್ವ ತಿಳಿದುಕೊಳ್ಳುವ ನಿಟ್ಟಿನಲ್ಲಿ ಆಸಕ್ತರಾಗಬೇಕೆಂದು ಕರೆ ನೀಡಿದರು.

ಬಾಗಲಕೋಟೆಯಲ್ಲಿ ಎರಡು ದಿನಗಳ ಕಾಲ ವಿಜೃಂಭಣೆಯಿAದ ಕಾರ್ಯಕ್ರಮ ಜರುಗಿದೆ ಎಂದರು.

ನAತರ ಶ್ರೀಗಳು ಶ್ರೀಮಠದ ಮುಂಭಾಗ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರಿಗೆ  ಮುದ್ರಧಾರಣೆ ನೆರವೇರಿಸಿದರು. ಚಿಕ್ಕಮಕ್ಕಳಿಂದ ಹಿಡಿದು ಹಿರಿಯರವರೆಗೆ ಮುದ್ರಧಾರಣೆ ಪಡೆದ ಭಕ್ತರು "ಹರಿಸರ್ವೋತ್ತಮ, ವಾಯು ಜೀವೋತ್ತಮ" ಘೋಷಣೆಗಳನ್ನು ಮೊಳಗಿಸಿದರು.

ಮಧ್ಯಾಹ್ನ ತೀರ್ಥಪ್ರಸಾದ ಸ್ವೀಕರಿಸಿದ ನಂತರ ಶ್ರೀಗಳು ಫಲಮಂತ್ರಾಕ್ಷತೆಯನ್ನು ನೀಡಿ ಭಕ್ತರನ್ನು ಆಶೀರ್ವದಿಸಿದರು. ಸಂಜೆ ಕಾರ್ಯಕ್ರಮಗಳು ಸಂಪನ್ನಗೊAಡವು. ಶ್ರೀಮಠದ ದಿವಾನರಾದ ಪಂ.ಶಶಿ ಆಚಾರ್ಯ, ಪಂ.ಪಾAಡುರAಗಾಚಾರ್ಯ ರೊಟ್ಟಿ(ತಿರುಪತಿ), ಪಂ.ಕೆ.ಹುಚ್ಚಾಚಾರ್ಯ, ಪಂ.ರಘೋತ್ತಮಾಚಾರ್ಯ ನಾಗಸಂಪಿಗೆ, ಪಂ.ಬಿAದುಮಾಧವಾಚಾರ್ಯ ನಾಗಸಂಪಿಗೆ, ಪಂ. ವಿಜಯೇಂದ್ರಾಚಾರ್ಯ ಯತ್ನಟ್ಟಿ, ಪಂ. ಆದಿಶೇಷಾಚಾರ್ಯ ಯಲಗೂರ ಹಾಗೂ ಇತರರು ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net