ಉತ್ತರ ಕನ್ನಡಕ್ಕೂ ಕಾಲಿಟ್ಟಿತಾ ಮಂಕಿ ಪಾಕ್ಸ್...?

images-9.jpeg
Published on

ವಿಜಯವಾಣಿ ಸುದ್ದಿಜಾಲ ಕಾರವಾರ ಶಂಕಿತ ಮಂಕಿಪಾಕ್ಸ್ ಪ್ರಕರಣವೊಂದು ಮುಂಡಗೋಡ ಟಿಬೇಟಿಯನ್ ಕ್ಯಾಂಪ್ ನಲ್ಲಿ ಪತ್ತೆಯಾಗಿದ್ದು, ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ.‌

ಬೆಲ್ಜಿಯಂನಿಂದ ಆಗಮಿಸಿದ 9 ವರ್ಷದ ಬಾಲಕನಿಗೆ ಜ್ವರ ಹಾಗೂ ಮೈ ಮೇಲೆ ಗುಳ್ಳೆ ಕಾಣಿಸಿಕೊಂಡಿದೆ. ಆತ ಜುಲೈ 1 ರಂದು ಪಾಲಕರ ಜತೆ ಭಾರತಕ್ಕೆ ಆಗಮಿಸಿದ್ದ. ಅಲ್ಲಿಂದ ದೆಹಲಿ, ಹಿಮಾಚಲಪ್ರದೇಶದ ಹಾಗೂ ಮಹಾರಾಷ್ಟ್ರ ನಾಗಪುರದ ಟಿಬೇಟಿಯನ್ ಕ್ಯಾಂಪ್ ಗೆ ಭೇಟಿ ನೀಡಿದ್ದ. ಜು. 27 ರಂದು ಉತ್ತರ ಕನ್ನಡ ಮುಂಡಗೋಡ ಟಿಬೇಟಿಯನ್‌ ಡೈನೆಸ್ಟಿಗೆ ಭೇಟಿ ನೀಡಿದ್ದ.

ಬಾಲಕನ ರಕ್ತದ ಮಾದರಿಯನ್ನು ಬೆಂಗಳೂರು ಮೆಡಿಕಲ್‌ ಕಾಲೇಜ್ ಹಾಗೂ ರಿಸರ್ಚ್ ಇನ್ಸ್ ಟಿಟ್ಯೂಟ್ (ಬಿಎಂಸಿಆರ್ ಐ)ನ ವೈರಸ್ ರೀಸರ್ಚ್ ಆ್ಯಂಡ್ ಡೈಗ್ನೊಸ್ಟಿಕ್ ಲ್ಯಾಬೋರೇಟರಿ(ವಿಆರ್ ಡಿಎಲ್ ) ಗೆ ಮಾದರಿ ಕಳಿಸಲಾಗಿದೆ.

ವರದಿ ಬರುವುದು ಬಾಕಿ ಇದೆ. ಬಾಲಕ ವಿದೇಶದಿಂದ ಬಂದು 21 ದಿನ ಕಳೆದಿದೆ. ಆದರೂ ಅನುಮಾನ ಬೇಡ ಎಂಬ ಕಾರಣಕ್ಕೆ ಮಾದರಿ ಕಳಿಸಲಾಗಿದೆ ಎಂದು ಡಿಎಚ್ ಒ ಡಾ.ಶರದ್ ನಾಯಕ 'ವಿಜಯವಾಣಿ'ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net