ಉತ್ತರ ಕನ್ನಡ ಜಿಲ್ಲೆಯಲ್ಲಿ 109 ಜನರಿಗೆ ಕರೊನಾ

carona logo
Published on

ಕಾರವಾರ: ಜಿಲ್ಲೆಯ 109 ಜನರಲ್ಲಿ ಶುಕ್ರವಾರ ಕೋವಿಡ್ ಪತ್ತೆಯಾಗಿದೆ. 131 ಜನ ಗುಣವಾಗಿದ್ದಾರೆ. ನಾಲ್ವರು ಮೃತಪಟ್ಟಿದ್ದಾರೆ. ಶುಕ್ರವಾರದ ವರದಿಯಂತೆ, ಕಾರವಾರದ 10, ಅಂಕೋಲಾದ 15, ಕುಮಟಾದ 32, ಹೊನ್ನಾವರದ 13, ಶಿರಸಿಯ 3, ಸಿದ್ದಾಪುರದ 6, ಯಲ್ಲಾಪುರದ 4, ಮುಂಡಗೋಡಿನ 16 ಹಳಿಯಾಳದ 1, ಜೊಯಿಡಾದ 9 ಜನರಿಗೆ ಕರೊನಾ ಇರುವುದು ಖಚಿತವಾಗಿದೆ. ಕಾರವಾರದ 31, ಅಂಕೋಲಾದ 10, ಕುಮಟಾದ 9, ಹೊನ್ನಾವರದ 15, ಭಟ್ಕಳದ 19, ಶಿರಸಿ ಹಾಗೂ ಸಿದ್ದಾಪುರದ ತಲಾ 10, ಯಲ್ಲಾಪುರದ 9, ಮುಂಡಗೋಡಿನ 18 ಜನರು ಕರೊನಾದಿಂದ ಗುಣವಾಗಿದ್ದಾರೆ. ಹೊನ್ನಾವರ, ಸಿದ್ದಾಪುರ, ಮುಂಡಗೋಡ ಹಾಗೂ ಹಳಿಯಾಳದಲ್ಲಿ ತಲಾ ಒಬ್ಬರು ಕೋವಿಡ್​ಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 11814 ಜನರಿಗೆ ಕೋವಿಡ್ ಸೋಂಕು ತಗುಲಿದ್ದು, 10418 ಜನ ಗುಣವಾಗಿದ್ದಾರೆ. 153 ಜನ ಮೃತಪಟ್ಟಿದ್ದು, 1243 ಸಕ್ರಿಯ ಪ್ರಕರಣಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net