

ಬಾಗಲಕೋಟೆ: ನಗರದ ಬಸವೇಶ್ವರ ಪ್ರೌಢಶಾಲೆ ಮೈದಾನದಲ್ಲಿ ಶುಕ್ರವಾರ ಆರಂಭವಾದ ಕಿವುಡರ ರಾಜ್ಯಮಟ್ಟದ ೧೪ನೇ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಉತ್ತಮ ಸಾಧನೆ ಮೆರೆದಿದ್ದಾರೆ. ವಿವಿಧ ಕ್ರೀಡೆಗಳಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರ ವಿವರ ಈ ಕೆಳಗಿನಂತಿದೆ.
೧೮ ವರ್ಷ ಮೇಲ್ಪಟ್ಟ ಪುರುಷರ ೫ ಸಾವಿರ ಮೀ. ಓಟ: ಅಕ್ಷಯ ಮುಗಳಿ (ಮೈಸೂರು), ಮಹಾಂತೇಶಯ್ಯ ಎಸ್. (ಬಾಗಲಕೋಟೆ), ರಾಹುಲ್ ಹೆರವಾಡೆ (ಬೆಳಗಾವಿ). ೧೮ ವರ್ಷ ಮೇಲ್ಪಟ್ಟ ಪುರುಷರ ಜಾವಲಿನ್ ಥ್ರೋ: ಅನುಷ ನಾಯಕ (ದಕ್ಷಿಣ ಕನ್ನಡ), ಸೈಯದ್ ಝಬಿಉಲ್ಲಾ (ತುಮಕೂರ), ಶ್ರೇಯಸ್ ಎಂ. (ಮಂಡ್ಯ)., ೧೮ ವರ್ಷ ಮೇಲ್ಪಟ್ಟ ಮಹಿಳೆಯರ ಜಾವಲಿನ್ ಥ್ರೋ: ಸ್ನೇಹಾ (ಬೆಂಗಳೂರು), ನಿಧಿ ಸುಲಾಖೆ (ಧಾರವಾಡ), ಶರಣಮ್ಮ ಪಾಲಕಿ (ವಿಜಯಪುರ)., ೧೬ ವರ್ಷದೊಳಗಿನ ಪುರುಷರ ೪೦೦ ಮೀ.ಓಟ: ಶಿವರಾಜ (ದಾವಣಗೆರೆ), ವಿನೋದ (ಮೈಸೂರು), ರಂಗನಾಥ (ದಾವಣಗೆರೆ).
೧೮ ವರ್ಷದೊಳಗಿನ ಮಹಿಳೆಯರ ೪೦೦ ಮೀ.ಓಟ: ಅಲಿಯಾ (ಬೆಂಗಳೂರು), ಶಾಂಭವಿ (ಮೈಸೂರು), ಅಂಕಿತಾ ಮನಗೂಳಿ (ಬೆಳಗಾವಿ). ೧೮ ವರ್ಷ ಮೇಲ್ಪಟ್ಟ ಪುರುಷರ ೮೦೦ ಮೀ.ಓಟ: ಅವಿನಾಶ ಕೆ.ಎಸ್. (ಚಿಕ್ಕಮಗಳೂರು), ಹರ್ಷ (ಮೈಸೂರು), ಸಲ್ಮಾನ್‌ಖಾನ್ ಕಾಕಡ (ಧಾರವಾಡ). ೧೮ ವರ್ಷ ಮೇಲ್ಪಟ್ಟ ಮಹಿಳೆಯರ ೮೦೦ ಮೀ.ಓಟ: ತನುಜಾ (ಬೆಂಗಳೂರು), ಕಾವೇರಿ ಪೂಜೇರಿ (ಬೆಳಗಾವಿ), ಫರಜಾನಾ ಬಾನು (ಬೆಂಗಳೂರು). ೧೮ ವರ್ಷದೊಳಗಿನ ಪುರುಷರ ೮೦೦ ಮೀ.ಓಟ: ಬಾಲಾಜಿ ಎಚ್.ಎಸ್. (ಮಂಡ್ಯ), ಸಂದೀಪ ಕುಮಾರ್ (ಮಂಡ್ಯ), ಅನಿಲ್ ಕುಮಾರ್ (ದಾವಣಗೆರೆ).
೧೮ ವರ್ಷದೊಳಗಿನ ಮಹಿಳೆಯರ ೮೦೦ ಮೀ.ಓಟ: ಜೀವಿತಾ ಎಸ್. (ಮಂಡ್ಯ), ವರ್ಷಿಣಿ ಎಂ. (ಬೆಂಗಳೂರು). ೧೬ ವರ್ಷದೊಳಗಿನ ಪುರುಷರ ೮೦೦ ಮೀ.ಓಟ: ಸುನೀಲ ಮಾತಂಗಿ (ಹಾವೇರಿ), ಸೈಯದ್ ಫರಹಾನ್ (ಬೆಂಗಳೂರು), ಫಾರೂಕ್ (ಮಂಡ್ಯ). ೧೬ ವರ್ಷದೊಳಗಿನ ಮಹಿಳೆಯರ ೮೦೦ ಮೀ.ಓಟ: ಕುಸುಮಲತಾ (ಮೈಸೂರು), ಸುಷ್ಮಾ (ಮೈಸೂರು), ವರ್ಷಾ (ದಾವಣಗೆರೆ).
೧೮ ವರ್ಷ ಮೇಲ್ಪಟ್ಟ ಪುರುಷರ ಉದ್ದ ಜಿಗಿತ: ಸಂದೀಪ ಸಪ್ತಸಾಗರ (ಬೆಳಗಾವಿ), ಶಿವಕುಮಾರ್ ಬಿ.ಎಂ. (ಮೈಸೂರು), ಸುಜಿತ್ ಭಂಡಾರಿ (ದಕ್ಷಿಣ ಕನ್ನಡ). ೧೮ ವರ್ಷದೊಳಗಿನ ಪುರುಷರ ಉದ್ದ ಜಿಗಿತ: ನಿಕ್ಷಿತ್ ಡಿ.ಕೆ. (ಮೈಸೂರು), ಲಿಖಿತ್ ಗೌಡ (ತುಮಕೂರು), ವೆಂಕಟೇಶ ಎಂ.ಎಸ್. (ತುಮಕೂರು). ೧೮ ವರ್ಷದೊಳಗಿನ ಮಹಿಳೆಯರ ಉದ್ದ ಜಿಗಿತ: ಯುಕ್ತಾ ಎನ್.ಪಿ. (ಮೈಸೂರು), ವಲ್ಲೇಪು ಹರ್ಷಿತಾ (ಮೈಸೂರು), ನಯನಾ ಜಿ. (ತುಮಕೂರು). ೧೬ ವರ್ಷದೊಳಗಿನ ಮಹಿಳೆಯರ ಎತ್ತರ ಜಿಗಿತ: ಮೋಹಿತಾ ಆರ್. (ತುಮಕೂರು), ಉಲ್ವಾ ಪೊತ್ತು ಮಹಿತಾ (ಮಂಡ್ಯ). ೧೮ ವರ್ಷದೊಳಗಿನ ಪುರುಷರ ಎತ್ತರ ಜಿಗಿತ: ಗೋವಿಂದರಾಜು ಆರ್. (ತುಮಕೂರು, ಹೊಸ ದಾಖಲೆ), ಲಿಖಿತ್ ಗೌಡ (ತುಮಕೂರು), ವೇದಾಂತ ಗೌಡ (ಮಂಡ್ಯ). ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.