ಉತ್ತಮ ಶಿಕ್ಷಣ ಸಿಕ್ಕರೆ ಹಳ್ಳಿ ಮಕ್ಕಳೂ ಮುನ್ನೆಲೆಗೆ

29gkn1-a-
Published on

ವಿಜಯವಾಣಿ ಸುದ್ದಿಜಾಲ ಗೋಕರ್ಣ: ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭೆಗಳು ನಗರ ಪ್ರದೇಶಕ್ಕೆ ಸೀಮಿತ ಎಂಬ ತಪ್ಪು ಅಭಿಪ್ರಾಯವಿದೆ. ಉತ್ತಮ ಶಿಕ್ಷಣ ದೊರೆತಲ್ಲಿ ನಗರ ಪ್ರದೇಶಗಳ ಸೌಲಭ್ಯವಿಲ್ಲದೆಯೂ ಗ್ರಾಮೀಣ ಭಾಗದ ಪ್ರತಿಭೆಗಳು ಮುನ್ನೆಲೆಗೆ ಬರಲು ಸಾಧ್ಯ. ಇದಕ್ಕೆ ಹಿರೇಗುತ್ತಿ ಸೇರಿ ಜಿಲ್ಲೆಯ ವಿವಿಧ ಗ್ರಾಮೀಣ ಭಾಗಗಳು ಸಾಕ್ಷಿಯಾಗಿವೆ ಎಂದು ಮಾದನಗೇರಿ ಮಹಾಲಸಾ ಸಿದ್ಧಿವಿನಾಯಕ ಮಂದಿರದ ಧರ್ಮದರ್ಶಿ ಸುನೀಲ ಪೈ ಹೇಳಿದರು.

ರೇಗುತ್ತಿಯ ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘದ ವಿವಿಧ ಶಾಲೆಗಳ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಉಪನ್ಯಾಸಕ ಡಾ. ಅರವಿಂದ ನಾಯಕ ಮಾತನಾಡಿ, ಇಂದು ಬಾಹ್ಯ ಸೌಂದರ್ಯಕ್ಕೆ ಮಹತ್ವ ನೀಡುವ ಚಾಳಿ ಕಂಡು ಬರುತ್ತಿದೆ. ಆದರೆ, ಆಂತರ್ಯ ಸೌಂದರ್ಯ ಮಾತ್ರ ಶಾಶ್ವತವಾದುದು. ಅದನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತಾಪಂ ಇಒ ಸಿ.ಟಿ. ನಾಯ್ಕ ಮಾತನಾಡಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೊನ್ನಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ವಿವಿಧ ರಂಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಆಡಳಿತ ಮಂಡಳಿಯ ಮೋಹನ ಬಿ. ಕೆರೆಮನೆ, ಮೋಹನ ಯು. ಗಾಂವಕರ, ಪ್ರಾಚಾರ್ಯ ಪ್ರೇಮಾನಂದ ಗಾಂವಕರ, ಆಂಗ್ಲ ಮಾಧ್ಯಮ ಶಾಲೆ ಮುಖ್ಯಾಧ್ಯಾಪಕಿ ಸುಮನ್ ಫರ್ನಾಂಡಿಸ್, ಯುವಕ ಸಂಘದ ಅಧ್ಯಕ್ಷ ರಾಜು ಕೆ. ಗಾಂವಕರ ಇದ್ದರು. ಮುಖ್ಯೋಪಾಧ್ಯಾಯ ರೋಹಿದಾಸ ಗಾಂವಕರ, ಶಿಕ್ಷಕ ಎನ್. ರಾಮು, ಮಹಾದೇವ ಗೌಡ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net