ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಿ

29 hkr 01
Published on

ಹಿರೇಕೆರೂರ: ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು ಎಂದು ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ತಾಲೂಕಿನ ಬುರಡಿಕಟ್ಟಿ, ಚಿಕ್ಕೋಣತಿ, ನಿಟ್ಟೂರು ಹಾಗೂ ವಿವಿಧ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಶಾಲೆ ಕೊಠಡಿ ಮತ್ತು ಅಂಬೇಡ್ಕರ್ ಭವನ ನಿರ್ವಣಕ್ಕೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.

ತಾಲೂಕಿನ ಹಿರೆಕೊಣತಿಯಲ್ಲಿ ಅಂಬೇಡ್ಕರ್ ಭವನ ಕಟ್ಟಡ ಹಾಗೂ ಲಿಂಗಾಪುರ, ಚಿನ್ನಮುಳಗುಂದ, ಯೋಗಿಕೊಪ್ಪ, ಚಿಕ್ಕಮತ್ತೂರು, ಹಿರೇಮತ್ತೂರು, ಕಳಗೊಂಡ, ಎಂ.ಕೆ. ಯತ್ತಿನಹಳ್ಳಿ ಗ್ರಾಮಗಳಲ್ಲಿ ಶಾಲಾ ಕೊಠಡಿಗಳ ನಿರ್ವಣದ ಕಾಮಗಾರಿಗೆ ಚಾಲನೆ ನೀಡಲಾಯಿತು.

ತಹಸೀಲ್ದಾರ್ ಆರ್.ಎಚ್. ಭಾಗವಾನ್, ತಾ.ಪಂ ಅಧ್ಯಕ್ಷ ರಾಜು ಬಣಕಾರ, ಜಿಪಂ ಸದಸ್ಯೆ ಮಾದೇವಕ್ಕ ಗೋಪಕ್ಕಳ್ಳಿ, ತಾಪಂ ಸದಸ್ಯ ಬಸವರಾಜ ಭರಮಗೌಡ್ರ, ಡಿ.ಸಿ. ಪಾಟೀಲ, ಬಿಇಒ ಎಲ್. ಸಿದ್ದಲಿಂಗಪ್ಪ, ಎಇಇ ಎಸ್.ವಿ. ಪುರಾಣಿಕ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net